Site icon Vistara News

Illicit Relationship: ಅಕ್ರಮ ಸಂಬಂಧ ಇಟ್ಟುಕೊಂಡ ಜೆಎಡಿಎಸ್‌ ಮುಖಂಡನಿಗೆ ಗೂಸಾ

illicit relationship

ಕಲಬುರಗಿ: ಮಹಿಳೆ ಜೊತೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದ ಜೆಡಿಎಸ್ ಮುಖಂಡನೊಬ್ಬನಿಗೆ ಸಾರ್ವಜನಿಕರು (assault) ಥಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಐನೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಲಬುರಗಿ ಜಿಲ್ಲಾ ಜೆಡಿಎಸ್ ಮುಖಂಡ ವಿಷ್ಣುಕಾಂತ ಮೂಲಗಿ ಎಂಬಾತನಿಗೆ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಏಟು ಬಿದ್ದಿವೆ.

ಐನೊಳ್ಳಿ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷ್ಣುಕಾಂತ್, ನಿನ್ನೆ ರಾತ್ರಿ ಮದ್ಯ ಸೇವಿಸಿ ಹಣದ ಆಮಿಷ ಒಡ್ಡಿ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದ. ಈತನ ಅನೈತಿಕ ಸಂಬಂಧದಿಂದ ಬೇಸತ್ತಿದ್ದ ಏರಿಯಾದ ಜನರು ಸೇರಿ ಮುಖಂಡ ಹಾಗೂ ಮಹಿಳೆಯನ್ನು ಹೊರಗೆಳೆದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಪ್ರದೇಶದ ಮರ್ಯಾದೆ ತೆಗೆಯುತ್ತಿದ್ದಾನೆ, ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡೋದಕ್ಕೆ ಆಗ್ತಿಲ್ಲ ಎನ್ನುತ್ತಾ ಜೆಡಿಎಸ್‌ ಮುಖಂಡನಿಗೆ ಬಟ್ಟೆ ಬಿಚ್ಚಿ ಏಟು ಹಾಕಿದ್ದಾರೆ. ಈತನಿಗೆ ಗೂಸಾ ಬಿದ್ದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎಟಿಎಂ ಮುರಿದು ಕಳ್ಳತನ

ಕಲಬುರಗಿ: ಕೆನರಾ ಬ್ಯಾಂಕ್ ಎಟಿಎಂ ಒಡೆದು (ATM theft) ಕಳ್ಳತನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ನಸುಕಿನ ಜಾವ ನಾಲ್ಕು ಗಂಟೆಗೆ ನಾಲ್ವರು ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ.

ಬೊಲೇರೋ‌ ವಾಹನದಲ್ಲಿ ಬಂದ ದುಷ್ಕರ್ಮಿಗಳಿಂದ ಎಟಿಎಂ ಕಳ್ಳತನ ಆಗಿದ್ದು, ಎಟಿಎಂನಲ್ಲಿದ್ದ 13 ಲಕ್ಷ ರೂ. ಕದ್ದುಕೊಂಡು ಪರಾರಿಯಾಗಿದ್ದಾರೆ. ಎಟಿಎಂ ಹೊರಭಾಗದಲ್ಲಿದ್ದ ಸಿಸಿಟಿವಿಗೆ ಮಂಜು ಕವಿಯುವ ಹಾಗೆ ಸ್ಪ್ರೇ ಮಾಡಿದ ದುಷ್ಕರ್ಮಿಗಳು ಗ್ಯಾಸ್ ಕಟರ್‌ನಿಂದ ಶಟರ್ ಮುರಿದು ಒಳ ಹೋಗಿ ದೋಚಿಕೊಂಡು ಹೋಗಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Uttara Kannada News: ಎಟಿಎಂ ಕಾರ್ಡ್‌ ಬದಲಿಸಿ ಹಣ ಡ್ರಾ: ಅಂತಾರಾಜ್ಯ ಕಳ್ಳನ ಬಂಧನ

Exit mobile version