Site icon Vistara News

Kalaburagi News : ರಾತ್ರಿ ಹೊತ್ತಲ್ಲಿ ಕಲಬುರಗಿ ಕೇಂದ್ರಿಯ ವಿವಿಯಲ್ಲಿ ಶಂಕಾಸ್ಪದ ಡ್ರೋನ್‌ ಹಾರಾಟ!

kalaburagi News Drone flying at kalaburagi Central University

ಕಲಬುರಗಿ: ಕಲಬುರಗಿಯ (Kalaburagi News) ಆಳಂದ ತಾಲೂಕಿನಲ್ಲಿರುವ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ (Central University) ಅನಧಿಕೃತವಾಗಿ ಹಾಗೂ ಶಂಕಾಸ್ಪದವಾಗಿ ಡ್ರೋನ್‌ ಹಾರಾಟ (Drone flying) ನಡೆಸಿದೆ. ರಾತ್ರಿ ಹೊತ್ತಲ್ಲಿ ಡ್ರೋನ್‌ ಹಾರಾಟ ನಡೆಸಲಾಗಿದೆ. ಇದು ಕೇಂದ್ರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.

ವಿಶ್ವವಿದ್ಯಾಲಯದ ಆವರಣದ ಹೊರಗಡೆಯಿಂದ ಬಂದ ಡ್ರೋನ್‌, ವಿವಿ ಕ್ಯಾಂಪಸ್ ಒಳಗಡೆ ಹಾರಾಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಾರಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಹೋಳಿ ಹೆಸರಲ್ಲಿ ಸ್ಕೂಟಿ ಮೇಲೆಯೇ ಕಾಮದೋಕುಳಿ; ಯುವತಿಯರಿಗೆ 80 ಸಾವಿರ ರೂ. ದಂಡ!

ಎವಿಬಿಪಿ ಕಾರ್ಯಕ್ರಮಕ್ಕೆ ಅಡೆತಡೆ

ಎಬಿವಿಪಿ ಕಾರ್ಯಕರ್ತರ ಕಾರ್ಯಕ್ರಮಕ್ಕೆ ಅಡೆತಡೆ ಮುಂದುವರೆದಿದೆ. ವಿದ್ಯಾರ್ಥಿ ಸಂಘಟನೆಯಾಗಿರುವ ಎವಿಬಿಪಿ ಕಾರ್ಯಕರ್ತರು ಕೇಂದ್ರಿಯ ವಿವಿಯಲ್ಲೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಎಬಿವಿಪಿ ಕಾರ್ಯಕರ್ತರ ಕಾರ್ಯಕ್ರಮಕ್ಕೆ ಬೆದರಿಕೆ ಹಾಕಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ಎಬಿವಿಪಿಯ ಕಾರ್ಯಕ್ರಮಕ್ಕೆ ಹೊರಗಿನಿಂದ ಬಂದ ಗೂಂಡಾಗಳು ಬೆದರಿಕೆ ಹಾಕಿದ್ದರಂತೆ. ವಿಶ್ವವಿದ್ಯಾಲಯಕ್ಕೆ ಅತಿಕ್ರಮ ಪ್ರವೇಶಿಸಿ ಎಬಿವಿಪಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಭಯದ ವಾತಾವರಣವನ್ನು ಸೃಷ್ಟಿಸಿದ್ದರು ಎನ್ನಲಾಗಿದೆ. ಮಾತ್ರವಲ್ಲ ನಂಬರ್ ಪ್ಲೇಟ್‌ ಇಲ್ಲದ ವಾಹನದಲ್ಲಿ ಬರುವ ಗೂಂಡಾಗಳು ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ಸದ್ಯ ಕೇಂದ್ರಿಯ ವಿವಿಯಲ್ಲಿ ರಾತ್ರಿ ಹೊತ್ತಿನಲ್ಲಿ ಡ್ರೋನ್‌ ಹಾರಾಟಕ್ಕೂ, ಈ ಗೂಂಡಾಗಳಿಗೂ ಏನಾದರೂ ಸಂಬಂಧ ಇದ್ಯಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version