ಕಲಬುರಗಿ: ಕಲಬುರಗಿಯ (kalaburagi News) ಪ್ರಮುಖ ರಸ್ತೆಗಳಲ್ಲಿ ಇಬ್ಬರು ಯುವಕರು ರಿವಾಲ್ವರ್ (Revolver) ಹಿಡಿದು ಶೋಕಿ ನಡೆಸಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ವಿದ್ಯಮಾನ ನಾಗರಿಕರಲ್ಲಿ ಆತಂಕ ಮೂಡಿಸಿದೆ. ನಗರದಲ್ಲಿ ಕೆಲವರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯ ಭಯ ಹುಟ್ಟಿಸಿತ್ತು. ಈಗ ರಿವಾಲ್ವರ್ ಹಿಡಿದು ಓಡಾಟ ನಡೆಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral video) ಆಗಿದೆ. ಈ ಸಂಬಂಧ ಇಬ್ಬರು ಪುಂಡರನ್ನು ಅರೆಸ್ಟ್ ಮಾಡಲಾಗಿದೆ.
ನಗರದಲ್ಲಿ ಯುವಕರಿಬ್ಬರು ಸಾರ್ವಜನಿಕ ವಲಯದಲ್ಲಿ ಭಯ ಹುಟ್ಟಿಸುವಂತೆ ರೀಲ್ಸ್ ಮಾಡುತ್ತಿದ್ದವರನ್ನು ಪೊಲೀಸರು ಹಡೆಮುರಿ ಕಟ್ಟಿದ್ದಾರೆ. ಕಲಬುರಗಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ವೆಪನ್ ಹಿಡಿದು ರೀಲ್ಸ್ ಮಾಡುತ್ತಿದ್ದ ಮಹ್ಮದ್ ಅಫ್ಜಲಶೇಖ್(27), ದೀಪಕ್ ಚೌಹಾಣ್(23) ಬಂಧಿಸಿದ್ದಾರೆ.
ಇದನ್ನೂ ಓದಿ: High Court: ಹೈಕೋರ್ಟ್‌ನಲ್ಲಿ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ ಯತ್ನ
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಶೋಕಿಗಾಗಿ ಇವರಿಬ್ಬರು ರಿವಾಲ್ವಾರ್ ಹಿಡಿದು ಪೋಸ್ ಕೊಡುತ್ತಿದ್ದರು. ಸಾಂಗ್ ಜತೆಗೆ ರಿವಾಲ್ವಾರ್ ಹಿಡಿದು ಒಂದೆರಡು ಡೈಲಾಗ್ ಹೇಳಿ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು. ಸದ್ಯ ವಾಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಶಹಾಬಾದ್ ತಾಲೂಕಿನ ವಾಡಿ ಪಟ್ಟಣದಲ್ಲಿ ರೀವಾಲ್ವಾರ್ ಹಿಡಿದು ರೀಲ್ಸ್ ಮಾಡಿ ಹರಿಬಿಡುತ್ತಿದ್ದರು. ಸಮಾಜದಲ್ಲಿ ಶಾಂತಿ ಭಂಗ ಹಾಗೂ ಜನರಲ್ಲಿ ಭಯ ಹುಟ್ಟಿಸುವ ಆರೋಪದಡಿ ಪೊಲೀಸರು ಇವರಿಬ್ಬರು ಬಂಧಿಸಿದ್ದಾರೆ. ಇಷ್ಟು ಸುಲಭವಾಗಿ ವೆಪನ್ಸ್‌ಗಳು ಯುವಕರಿಗೆ ಹೇಗೆ ಸಿಕ್ತು? ಎಲ್ಲಿಂದ ಖರೀದಿ ಮಾಡಿದ್ದರು ಎಂಬುದರ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಅವರು ಬಳಸಿರುವ ಗನ್ ನಕಲಿಯೋ ಅಥವಾ ಅಸಲಿಯೋ ಎಂಬುದರ ತನಿಖೆಗೆ ಸಾರ್ವಜನಿಕರಿಂದ ಒತ್ತಾಯ ಮಾಡಿದ್ದಾರೆ.
ತಾಯಿಯನ್ನೇ ದೇವಸ್ಥಾನದ ಸುತ್ತ ಅಟ್ಟಾಡಿಸಿ ಹಲ್ಲೆ ನಡೆಸಿದ ಪಾಪಿ ಪುತ್ರ; ಭಯಾನಕ ವಿಡಿಯೊ ಇಲ್ಲಿದೆ
ಲಕ್ನೋ: ಪ್ರತ್ಯಕ್ಷ ದೇವರು ಎಂದರೆ ಅದು ತಾಯಿ. ತನ್ನೆಲ್ಲ ಕಷ್ಟಗಳನ್ನು ನುಂಗಿ ಮಕ್ಕಳು ಚೆನ್ನಾಗಿರಬೇಕು ಎಂದು ಸದಾ ಹಾರೈಸುವ ನಿಸ್ವಾರ್ಥ ಜೀವ ಅದು. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತೇ ಸಾಕು ತಾಯಿಯ ನಿಷ್ಕಲ್ಮಶ ಪ್ರೀತಿಯನ್ನು ಸಾರಲು. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ. ಯಾಕೆಂದರೆ ಪಾಪಿ ಮಗನೊಬ್ಬ ದೊಣ್ಣೆ ಹಿಡಿದು ತನ್ನ ತಾಯಿಯನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾನೆ. ಅದೂ ದೇವಸ್ಥಾನದ ಮುಂದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral News). ನೆಟ್ಟಿಗರು ಈ ಪಾಪಿ ಮಗನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ವಿವರ
ಉತ್ತರ ಪ್ರದೇಶದ ಬುಲಂದ್ಶಹರ್ (Bulandshahr)ನಲ್ಲಿ ಈ ಅಮಾನುಷ ಘಟನೆ ನಡೆದಿದೆ. ಇದನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ವ್ಯಕ್ತಿಯೊಬ್ಬ ದೊಣ್ಣೆ ಹಿಡಿದುಕೊಂಡು ತನ್ನ ತಾಯಿಯನ್ನು ದೇವಸ್ಥಾನದ ಸುತ್ತ ಅಟ್ಟಾಡಿಸಿಕೊಂಡು ಹೋಗುತ್ತಾನೆ. ಈ ಬಡಪಾಯಿ ತಾಯಿ ಮಗನಿಂದ ತಪ್ಪಿಸಿಕೊಳ್ಳಲು ದೇವಸ್ಥಾನದ ಸುತ್ತ ಓಡುತ್ತಾರೆ. ಕೊನೆಗೆ ಸುಸ್ತಾಗಿ ದೇವಸ್ಥಾನ ಮುಂದೆ ನಿಂತು ಬಿಡುತ್ತಾರೆ. ಆಗ ಅಲ್ಲಿಗೆ ಆಗಮಿಸಿದ ಮಗ ಜನರೆಲ್ಲ ನೋಡುತ್ತಿದ್ದಂತೆ ದೊಣ್ಣೆಯನ್ನು ಬೀಸಿ ತಾಯಿಗೆ ಹೊಡೆಯುತ್ತಾನೆ. ತಾಯಿ ಅಂಗಲಾಚಿ ಬೇಡುತ್ತಿದ್ದರೂ ಸ್ವಲ್ಪವೂ ಕರುಣೆ ಇಲ್ಲದೆ ಹಲ್ಲೆ ನಡೆಸುತ್ತಾನೆ.
बुलन्दशहर : कलयुगी बेटे ने विधवा मां को पीटा
— News1Indiatweet (@News1IndiaTweet) April 2, 2024
मंदिर के सामने मां को डंडे से पीटा
बेटे की पीटाई के डर से दौड़ती रही बुजुर्ग मां
बेरहम बेटे को नहीं आया बुजुर्ग मां पर रहम
आरोपी को भीड़ ने पकड़कर पुलिस को सौंपा
पुलिस ने वायरल वीडियो को देखा
कलयुगी बेटे के खिलाफ दर्ज की एफआईआर… pic.twitter.com/oIRAYZtFrx
ಇದನ್ನೂ ಓದಿ: Viral News : ಟಾಯ್ಲೆಟ್ಗೆ ಹೋಗುವ ಅರ್ಜೆಂಟಲ್ಲಿ ಸ್ಪೈಡರ್ ಮ್ಯಾನ್ ಆದ ರೈಲು ಪ್ರಯಾಣಿಕ!
ಪಾಪಿ ಮಗನನ್ನು ದುರ್ಗೇಶ್ ಶರ್ಮಾ ಎಂದು ಗುರುತಿಸಲಾಗಿದೆ. ಮಗನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓಡುವ ಮಹಿಳೆ ತನ್ನ ಬಟ್ಟೆ ಜಾರಿ ಬೀಳದಂತೆ ತಡೆಯಲು ಪ್ರಯತ್ನಿಸುತ್ತಿರುವುದೂ ವಿಡಿಯೊದಲ್ಲಿ ಕಂಡು ಬಂದಿದೆ. ಮನೆಯೊಳಗೆ ತನ್ನ ತಾಯಿಯನ್ನು ಹಿಂಬಾಲಿಸಿದ ದುರ್ಗೇಶ್ ಶರ್ಮಾ ಅಲ್ಲೂ ತನ್ನ ತಾಯಿಗೆ ಹೊಡೆಯುತ್ತಾನೆ. ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಮೊಳಗುವ ಮಂತ್ರದ ಧ್ವನಿಯೂ ಕೇಳಿಸುತ್ತಿದೆ. ಕೊನೆಗೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತ ಯಾಕಾಗಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ಈ ವೈರಲ್ ವಿಡಿಯೊವನ್ನು 10 ಸಾವಿರಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ತಾಯಿ ಮೇಲೆ ಹಲ್ಲೆ ನಡೆಸಿದ ದುರ್ಗೇಶ್ ಶರ್ಮಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ʼʼಪೊಲೀಸರ ಬಳಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆತನಿಗೆ ಸರಿಯಾಗಿ ಪಾಠ ಕಲಿಸಿ. ನಡೆದಾಡಲೂ ಆತನಿಗೆ ಸಾಧ್ಯವಾಗಬಾರದು. ಆ ರೀತಿ ಆತನಿಗೆ ಹೊಡೆಯಿರಿʼʼ ಎಂದು ಒಬ್ಬರು ಆಕ್ರೋಶದಿಂದ ಕಮೆಂಟ್ ಮಾಡಿದ್ದಾರೆ. ʼʼಇಂತಹ ಜನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಜಿಲ್ಲೆಯಿಂದ ಹೊರಹಾಕಬೇಕುʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಕಲಿಯುಗದ ಪುತ್ರನೊಬ್ಬ ತನ್ನ ತಾಯಿಯನ್ನು ಗೌರವಿಸುವ ರೀತಿ ಇದು ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದ್ದು, ದುರ್ಗೇಶ್ ಶರ್ಮಾ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಇನ್ನೆಂದೂ ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ