Site icon Vistara News

Swamiji Death: ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ವಿಧಿವಶ

swamiji death kalaburagi viraktha math

ಕಲಬುರಗಿ: ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ತೀವ್ರ ಹೃದಯಾಘಾತದಿಂದ (heart attack) ಇಂದು (Swamiji Death) ವಿಧಿವಶರಾಗಿದ್ದಾರೆ. ಕಲಬುರಗಿ (Kalaburagi news) ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಈ ವಿರಕ್ತ ಮಠವಿದ್ದು, ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (Viraktha Math Siddarama Swamy) ಲಿಂಗೈಕ್ಯರಾಗಿದ್ದಾರೆ.

ನಿನ್ನೆ ರಟಕಲ್ ಗ್ರಾಮದಲ್ಲಿ ನಡೆದಿದ್ದ ಅದ್ಧೂರಿ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು. ವಚನ ಸಂಗಮ ಕಾರ್ಯಕ್ರಮದಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ಬಿ.ಆರ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೋರಿಕೆ

ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi News) ಚಿಂಚೊಳ್ಳಿ‌ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ (Oxygen leakage) ಆಗಿದೆ ಎಂಬ ಸುದ್ದಿ ಕೇಳಿ ರೋಗಿಗಳು ಶಾಕ್‌ ಆಗಿದ್ದರು. ಆಸ್ಪತ್ರೆ ಹಿಂಭಾಗದಲ್ಲಿದ್ದ ಆಕ್ಸಿಜನ್ ಘಟಕದಿಂದ ಸೋರಿಕೆಯಾಗಿ ಅರ್ಧ ಕಿಮೀ ವ್ಯಾಪ್ತಿವರೆಗೂ ವಾಸನೆ ಮೂಗಿಗೆ ಬಡಿದಿತ್ತು.

ನೋಡನೋಡುತ್ತಿದ್ದ ಒಬ್ಬರಿಂದ ಒಬ್ಬರಿಗೆ ಆಕ್ಸಿಜನ್‌ ಸೋರಿಕೆ ಸುದ್ದಿ ಹರಿದಾಡಿದೆ. ಬಳಿಕ ಆಸ್ಪತ್ರೆಯೊಳಗೆ ಇದ್ದ ಸಿಬ್ಬಂದಿ, ರೋಗಿಗಳು ಭಯಭೀತರಾಗಿ ಹೊರಗೆ ಓಡಿ ಬಂದು ಆವರಣದೊಳಗೆ ಬಂದು ಕುಳಿತುಕೊಳ್ಳುವಂತಾಯಿತು. ಇತ್ತ ಆಕ್ಸಿಜನ್‌ ಟ್ಯಾಂಕ್‌ ಸ್ಫೋಟಗೊಂಡಿದೆ ಎಂಬ ಸುದ್ದಿಯಿಂದಾಗಿ ವೈದ್ಯರು ಮತ್ತು ಸಿಬ್ಬಂದಿ ತಗ್ಗಿದ ವಸತಿಗೃಹಗಳನ್ನು ಖಾಲಿ ಮಾಡಿದ್ದವು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿಂಚೊಳ್ಳಿ ಪೊಲೀಸರು ದೌಡಾಯಿಸಿದ್ದರು. ಪರಿಶೀಲನೆ ನಡೆಸಿದಾಗ ಆಕ್ಸಿಜನ್‌ ಟ್ಯಾಂಕ್ ತುಂಬಿದ್ದರಿಂದ ಅದರ ಒತ್ತಡವನ್ನು ಹೊರಹಾಕಿದೆ ಎಂದು ಗೊತ್ತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಲಬುರಗಿ ಡಿ.ಎಚ್.ಓ ಡಾ.ರತಿಕಾಂತ್ ಸ್ವಾಮಿ, ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂಬುದು ಸುಳ್ಳು ಸುದ್ದಿ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಆಕ್ಸಿಜನ್‌ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಆಗಿದೆ. ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ಆಮ್ಲಜನಕ ಭರ್ತಿ ಮಾಡಿದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಎ, ಬಿ, ಸಿ ಎಂಬ ಸುರಕ್ಷತೆಯ ವಾಲ್‌ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಹೀಗಾಗಿ ಸಾರ್ವಜನಿಕರು ಯಾರು ಆತಂಕ ಪಡಬೇಕಾಗಿಲ್ಲಾ ಎಂದರು.

ಇದನ್ನೂ ಓದಿ: Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!

Exit mobile version