ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಪ್ರಮುಖ ಪಾತ್ರ ವಹಿಸಿದ್ದ ಬಾಬುರಾವ್ ಚಿಂಚನಸೂರು ಇದೀಗ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನೂ ಸೋಲಿಸುತ್ತೇವೆ ಎಂದು ಅಕ್ಷರಶಃ ತೊಡೆ ತಟ್ಟಿದ್ದಾರೆ.
ರಾಜ್ಯ ಬಿಜೆಪಿ ಕಚೆರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಚುಂಚನಸೂರು ಮಾತನಾಡಿದರು. ತಾವು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳ ಕುರಿತು ಮಾತನಾಡಿದ ಚಿಂಚನಸೂರು, ನಾನು ಕಾಂಗ್ರೆಸ್ ಪಕ್ಷ ಸೇರಲ್ಲ. ನಾನು ಬಿಜೆಪಿ ಬಿಡ್ತಿನಿ ಅನ್ನೋದು ಮಾಧ್ಯಮಗಳ ಸೃಷ್ಟಿ ಅಷ್ಟೇ. ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡಲ್ಲ. ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಗೆ ಹೆಚ್ಚು ಸ್ಥಾನ ಬಲಿದೆ ಎಂದರು.
ನಾನು ಕೂಡ ಗುರುಮಿಟ್ಕಲ್ ಕ್ಷೇತ್ರದಲ್ಲಿ ಗೆದ್ದು ಬರುವೆ ಎಂದ ಚಿಂಚನಸೂರು, ಟಿಕೆಟ್ ಕೂಡ ಸಿಗಲಿದೆ. ನನಗೆ ವಯಸ್ಸು ಆಗಿದೆ ಅಂತ ಏಕೆ ಹೇಳ್ತಿರಿ? ನಾನು ಈಗಲೂ ಮದುವೆ ಆಗುವ ಹುಡುಗ ತರಹ ಇದ್ದೀನಿ. ಹಾಗೆಯೇ ಈ ಬಾರಿ ಪ್ರಿಯಾಂಕ್ ಖರ್ಗೆಯನ್ನು ಸೋಲಿಸ್ತಿನಿ. ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸ್ತೀನಿ ಎಂದು ತೊಡೆ ತಟ್ಟಿದ್ದೆ. ೨೦೨೩ರಲ್ಲಿ ಪ್ರಿಯಾಂಕ್ ಖರ್ಗೆಯನ್ನು ಸೋಲಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲೇ ತೊಡೆತಟ್ಟಿದರು.
ಇದನ್ನೂ ಓದಿ:
ಪತ್ರಿಕಾಗೋಷ್ಠಿಯಲ್ಲಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಮಲ್ಲಿಕಾರ್ಜುನ ಖರ್ಗೆ ಯಾಕೆ ಸೋತ್ರು? ಖರ್ಗೆ ಸೋಲಿನಿಂದ ಕಾಂಗ್ರೆಸ್ ಪಾರ್ಟಿ ಹತಾಶೆಗೆ ಒಳಗಾಗಿದೆ. ಹಾಗಾಗಿ ವಿಶೇಷವಾಗಿ ಉತ್ತರ ಕರ್ನಾಟಕ, ಮೈಸೂರು ಭಾಗ, ಇಡೀ ರಾಜ್ಯದಲ್ಲಿ ಬಾಬು ರಾವ್ ಚಿಂಚನಸೂರ್ ಅವರನ್ನ ಕರೆದುಕೊಂಡ್ರೆ ಮತ ಸೆಳೆಯಬಹುದು ಅಂತ ಕಾಂಗ್ರೆಸ್ ಲೆಕ್ಕಾಚಾರ.
ಹಾಗಾಗಿ ಕರೆ ಮಾಡಿ ಸಂಪರ್ಕ ಮಾಡಿದ್ದಾರೆ. ಈಗಾಗಲೇ ಬಾಬುರಾವ್ ಚಿಂಚನಸೂರ್ ತಪ್ಪು ಸಂದೇಶ ಹೋಗಬಾರದು ಅಂತ ಸ್ಪಷ್ಟಪಡಿಸಿದ್ದಾರೆ. ಬಾಬುರಾವ್ ಚಿಂಚನಸೂರ್ ಅವರ ಶಕ್ತಿ ಮತ್ತಷ್ಟು ಬಲ ಪಡಿಸಲಿದ್ದೇವೆ. ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್, ಉಮೇಶ್ ಜಾದವ್ ಅವರ ನೇತೃತ್ವದಲ್ಲಿ ಹೋಗ್ತೀವಿ. ಮೂವರ ನೇತೃತ್ವದಲ್ಲಿ ಲಕ್ಷ ಮತಗಳಿಂದ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದೆವು. ಅದೇ ರೀತಿ ಪ್ರಿಯಾಂಕ ಖರ್ಗೆ ಅವರನ್ನೂ ಸೋಲಿಸ್ತೇವೆ ಎಂದರು.