ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok sabha Election 2024) 400 ಸ್ಥಾನಗಳ ಗುರಿ ಹೊತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕದಲ್ಲಿ ಪಕ್ಷದ ಪರ ಪ್ರಚಾರವನ್ನು (Modi Campaign in Karnataka) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ನೆಲದಿಂದಲೇ ಆರಂಭಿಸುವ ಮೂಲಕ ಕಾಂಗ್ರೆಸ್ ಗೆ ಸಡ್ಡು ಹೊಡೆಯಲಿದ್ದಾರೆ. ಮಾರ್ಚ್ 16 (ಶನಿವಾರ) ಮಧ್ಯಾಹ್ನ 2 ಗಂಟೆಗೆ ಕಲಬುರಗಿಯ ಎನ್.ವಿ. ಆಟದ ಮೈದಾನದಲ್ಲಿ (Kalaburagi Samavesha) ನಡೆಯುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಅವರು 1 ಗಂಟೆಗೇ ಕಲಬುರಗಿಗೆ ಆಗಮಿಸಲಿದ್ದು, ರೋಡ್ ಶೋ (Road Show in Kalaburagi) ನಡೆಸಲಿದ್ದಾರೆ.
2019ರಲ್ಲೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲವಾದ ಕಲಬುರಗಿಯಿಂದ ರಾಜ್ಯದ ಪ್ರಚಾರವನ್ನು ಆರಂಭಿಸಿದ್ದ ಅವರು ಈ ಬಾರಿಯೂ ಅದೇ ಹೆಜ್ಜೆ ಇಟ್ಟಿದ್ದಾರೆ. ಕಳೆದ ಬಾರಿ ಕಲಬುರಗಿಯಲ್ಲಿ ಅಭ್ಯರ್ಥಿಯಾಗಿದ್ದ ಖರ್ಗೆ ಅವರಿಗೂ ಮೋದಿ ಅಬ್ಬರದಲ್ಲಿ ಸೋಲಾಗಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ 25+1 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಎಲ್ಲ 28 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದೆ. 2019ರಂತೆಯೇ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಸ್ವೀಪ್ ಮಾಡಲು ಪ್ಲಾನ್ ಮಾಡಲಾಗಿದ್ದು, ಅದಕ್ಕಾಗಿಯೇ ಕಲಬುರಗಿಯಲ್ಲಿ ಮೊದಲ ಸಮಾವೇಶ ಆಯೋಜನೆಯಾಗಿದೆ.
ಇದನ್ನೂ ಓದಿ : Narendra Modi: ಚುನಾವಣೆ ಘೋಷಣೆಗೆ ಮೊದಲೇ ದೇಶದ ಜನರಿಗೆ ಮೋದಿ ಪತ್ರ; ಏನಿದೆ?
ಸಮಾವೇಶಕ್ಕೆ ಮುನ್ನ ಸೆಮಿ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 1 ಗಂಟೆಗೆ ಕಲಬುರಗಿಗೆ ಆಗಮಿಸಲಿದ್ದಾರೆ. ಅವರು ಡಿ.ಆರ್.ಗ್ರೌಂಡ್‌ನಿಂದ ಎನ್.ವಿ ಮೈದಾನಕ್ಕೆ ಹೋಗುವ ದಾರಿಯಲ್ಲಿ ಸೆಮಿ ರೋಡ್ ಶೋ ಆಯೋಜಿಸಲಾಗಿದೆ.
ಡಿ ಆರ್ ಗ್ರೌಂಡ್, ಕೆಬಿಎನ್ ಸರ್ಕಲ್, ರೋಟರಿ ಕ್ಲಬ್ ಮಾರ್ಗವಾಗಿ ಎನ್ ವಿ ಮೈದಾನದ ವರೆಗೆ ಸುಮಾರು 2.5 ಕಿ.ಮೀ. ಉದ್ದದ ರೋಡ್ ಶೋ ನಡೆಯಲಿದ್ದು, ಇದರ ಅವಧಿ ಸುಮಾರು 15 ನಿಮಿಷ ಇರಬಹುದು ಎಂದು ಅಂದಾಜಿಸಲಾಗಿದೆ. ಮೋದಿ ಅವರು ರೋಡ್ ಶೋ ನಡೆಸುವ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದೆ.
To gauge the mood of Telangana, come to Malkajgiri…it’s @BJP4Telangana all the way! pic.twitter.com/VLghr8pnQ1
— Narendra Modi (@narendramodi) March 15, 2024
Lok Sabha Election 2024 : ಮೋದಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ
ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದ್ದು, ನಗರದಾದ್ಯಂತ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್ ಕಲಬುರಗಿ ಗೆ ಬಂದು ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಮತ್ತಷ್ಟು ಅಲರ್ಟ್ ಘೋಷಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗಮನ
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶನಿವಾರ ಬೆಳಗ್ಗೆಯೇ ಕಲಬುರಗಿಗೆ ಆಗಮಿಸಿದ್ದಾರೆ. ಮೋದಿ ಅವರು ಕಲಬುರಗಿ ಮತ್ತು ಬೀದರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಮೋದಿಜಿ ವೇದಿಕೆಗೆ ಆಗಮಿಸುತ್ತಾರೆ. ಸರಿಸುಮಾರು ಒಂದು ತಾಸು ವೇದಿಕೆ ಕಾರ್ಯಕ್ರಮ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಕರುನಾಡಿನಲ್ಲಿ ಚುನಾವಣಾ ಕಹಳೆ ಮೊಳಗಿಸಲು ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಹಾರ್ದಿಕ ಸ್ವಾಗತ#KarnatakaWelcomesModi pic.twitter.com/aXEEGl6VZ7
— Hariprakash Konemane (Modi Ka Parivar) (@HPKonemane) March 16, 2024