Site icon Vistara News

Lok Sabha Election 2024 : ವೆಲ್‌ಕಂ ಟು Mr. Bond; ಪ್ರಧಾನಿ ಮೋದಿಗೆ ಪ್ರಿಯಾಂಕ್‌ ಖರ್ಗೆ ಪ್ರಶ್ನೆಗಳ ಸ್ವಾಗತ!

Lok Sabha Election 2024 Modi Priyank Kharge

ಕಲಬುರಗಿ : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ (Lok Sabha Election 2024) ಪ್ರಚಾರಕ್ಕೆ ಅಬ್ಬರದ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ತವರು ನೆಲವಾದ ಕಲಬುರಗಿಗೆ (Kalaburagi Samavesha) ಆಗಮಿಸುತ್ತಿದ್ದಾರೆ. ಹೀಗೆ ಆಗಮಿಸುವ ಮೋದಿ ಅವರನ್ನು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರು WELCOME TO MR. BOND ಎಂದು ಸಂಬೋಧಿಸಿ ಪ್ರಶ್ನೆಗಳ ಸ್ವಾಗತ ಕೋರಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಕಲಬುರಗಿಗೆ ಆಗಮಿಸುವ ಮೋದಿ ಅವರು ಮೊದಲು 10-15 ನಿಮಿಷಗಳ ರೋಡ್‌ ಶೋನಲ್ಲಿ ಭಾಗವಹಿಸಿ ಬಳಿಕ ಎನ್‌.ವಿ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇದು ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಮೋದಿ ಅವರ ಮೊದಲ ಸಮಾವೇಶವಾಗಿರಲಿದೆ.

ಈ ಹೊತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ರಾಜ್ಯದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮೋದಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಪ್ರಶ್ನೆ ಕೇಳುವ‌ ಮೂಲಕ ಮೋದಿಗೆ ಸ್ವಾಗತ ಕೋರಿದ್ದಾರೆ.

Lok Sabha Election 2024 : ಪ್ರಿಯಾಂಕ್‌ ಖರ್ಗೆ ಪ್ರಶ್ನೆಗಳೇನು?

ಮಿ. ಬಾಂಡ್‌ಗೆ ಆತ್ಮೀಯ ಸ್ವಾಗತ ಎಂದು ಪತ್ರವನ್ನು ಆರಂಭಿಸಿರುವ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹಲವು ಪ್ರಶ್ನೆ ಕೇಳಿದ್ದಾರೆ. #ModiMosa ಎಂಬ ಹ್ಯಾಷ್‌ ಟ್ಯಾಗ್‌ನಡಿ ಕಲಬುರಗಿಯ ಜನರು ನಾಳೆ ನಿಮ್ಮಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಬಯಸುತ್ತಿದ್ದಾರೆ ಎಂದಿದ್ದಾರೆ.

1.ಕೇಂದ್ರ ಸರ್ಕಾರ ನರೇಗಾ ಕಾರ್ಮಿಕರ ವೇತನ ಯಾಕೆ ಬಿಡುಗಡೆ ಮಾಡುತ್ತಿಲ್ಲ? ಏನು ಮೋದಿ ಸರ್ಕಾರ ದಿವಾಳಿಯಾಗಿದೆಯೇ?

2. ಬರದಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಮೋದಿ ಸರ್ಕಾರ ಯಾಕೆ ಎನ್‌ಡಿಆರ್‌ಎಫ್‌ ಫಂಡ್‌ ಬಿಡುಗಡೆ ಮಾಡುತ್ತಿಲ್ಲ?

3. ನೀವು ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಲಿ ಮತ್ತು ಗೊಂಡ ಕುರುಬ ಸಮುದಾಯಗಳನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರಿಸುವುದಾಗಿ ಭರವಸೆ ನೀಡಿದ್ದಿರಿ. ಯಾವಾಗ ಸೇರಿಸುತ್ತೀರಿ?

4. ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿ ಅನುಮೋದಿತವಾಗಿದ್ದ ಕಲಬುರಗಿ ರೈಲ್ವೆ ವಿಭಾಗವನ್ನು ನಿಮ್ಮ ಸರ್ಕಾರ ಯಾಕೆ ಕೈಬಿಟ್ಟಿದೆ?

5. ಕಲಬುರಗಿಯಲ್ಲಿ ಸ್ಥಾಪನೆಯಾಗಬೇಕಾಗಿದ್ದ ರಾಷ್ಟ್ರೀಯ ಹೂಡಿಕೆ‌ ಉತ್ಪಾದನಾ ವಲಯವನ್ನು ನಿಮ್ಮ ಸರ್ಕಾರ ರದ್ದು ಮಾಡಿದ್ದು ಯಾಕೆ?

6. ಕಲಬುರಗಿಯ ಔಟರ್‌ ರಿಂಗ್‌ ರೋಡ್‌ ಯೋಜನೆಗೆ ಯಾಕೆ ನಿಮ್ಮ ಸರ್ಕಾರ ಹಣ ನೀಡಿಲ್ಲ?

ಇದನ್ನೂ ಓದಿ : Lok sabha Election 2024: ರಾಜ್ಯದಲ್ಲಿ ಇಂದು ಮೋದಿ ರಣಕಹಳೆ, ಖರ್ಗೆ ನೆಲದಿಂದಲೇ ಪ್ರಚಾರದ ಅಬ್ಬರ ಶುರು

Exit mobile version