Site icon Vistara News

Murder Case : ಕೊಲೆಗೆ ಮುನ್ನ ಹಾರ ಹಾಕಿ ಸನ್ಮಾನ; ಕಟುಕರ ಕೈಯ ಕುರಿಯಂತಾದರಾ ಚಕ್ರ?

Murder Case Chakra

ಕಲಬುರಗಿ: ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ (MP Umesh Jadhav) ಅವರ ಆತ್ಮೀಯರಾದ ಗಿರೀಶ್‌ ಚಕ್ರ (Gireesh Chakra) ಅವರ ಬರ್ಬರ ಹತ್ಯೆ (Murder Case) ಸಾಕಷ್ಟು ಸದ್ದು ಮಾಡುತ್ತಿದೆ. ಕಾರಿನಲ್ಲಿ ಕರೆದೊಯ್ದು ಕಣ್ಣಿಗೆ ಕಾರದ ಪುಡಿ ಎರಚಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಂಬ ಬರ್ಬರವಾಗಿದೆ. ಅದಕ್ಕಿಂತಲೂ ಮಹತ್ವದ ಸಂಗತಿ ಎಂದರೆ ಚಕ್ರ ಅವರನ್ನು ಅವರ ಸ್ನೇಹಿತರು ನಂಬಿಸಿ, ಒಂದು ಸ್ವಲ್ಪವೂ ಸಂಶಯ ಬರದಂತೆ ಹರಕೆಯ ಕುರಿಯಂತೆ (Scape Goat) ಬಲಿ ಪಡೆದಂತೆ ಕಾಣಿಸುತ್ತಿದೆ.

ಗಿರೀಶ್‌ ಚಕ್ರ ಅವರನ್ನು ಸಂಸದ ಜಾಧವ್ ಅವರು ಕಲಬುರಗಿ (Kalaburagi News) ಬಿಎಸ್ಎನ್ಎಲ್‌ ಸಲಹಾ ಸಮಿತಿಗೆ ನಿರ್ದೇಶಕರಾಗಿ ನೇಮಕ ಮಾಡಿದ್ದರು. ಇದರ ಸಂಭ್ರಮಾಚರಣೆಯ ಹೆಸರಿನಲ್ಲಿ ಪಾರ್ಟಿಗೆ ಕರೆದು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಗಿರೀಶ್‌ ಚಕ್ರ ಅವರು ಕೊಲೆಯಾಗುವ ದಿನ ಸಂಜೆ ತಮ್ಮ ಗೆಳೆಯರ ಜತೆಗೇ ಖುಷಿಯಾಗಿದ್ದರು. ರಾತ್ರಿ ಪಾರ್ಟಿ ಕೊಡಿಸುವ ಮಾತುಕತೆಯೂ ನಡೆದಿತ್ತು. ಸಂಜೆ ಸಿಕ್ಕಿದ ಗಿರೀಶ್‌ ಚಕ್ರ ಅವರಿಗೆ ಅಂಗಡಿಯೊಂದರ ಮುಂಭಾಗದಲ್ಲಿ ಹೂಹಾರ ಹಾಕಿ ಸನ್ಮಾನವನ್ನೂ ಮಾಡಲಾಗಿತ್ತು. ಇದೆಲ್ಲವನ್ನೂ ಸ್ನೇಹಾಚಾರದಲ್ಲಿ ಪ್ರೀತಿಯಿಂದ ಸ್ವೀಕರಿಸಿದ ಗಿರೀಶ್‌ಗೆ ಇದೆಲ್ಲವೂ ಭೀಕರ ಕೊಲೆಯೊಂದಕ್ಕೆ ಬರೆಯುತ್ತಿರುವ ಮುನ್ನುಡಿ ಎಂದು ಗೊತ್ತೇ ಇರಲಿಲ್ಲ. ಅವರು ತಮ್ಮ ಕೊರಳಿಗೆ ಹಾರ ಹಾಕಿದ್ದು ಹರಕೆಯ ಕುರಿಯಾಗಿಸಲು ಎಂಬುದನ್ನೂ ಅರಿಯಲಿಲ್ಲ.

ಅಂತಿಮವಾಗಿ ಗೆಳೆಯರೊಂದಿಗೆ ಪಾರ್ಟಿಗೆ ಹೋಗುವ ವೇಳೆ ಕಾರಿನಲ್ಲಿ ಖಾರದ ಪುಡಿ ಎರಚಿ ಬಳಿಕ ಕೊಚ್ಚಿ ಕೊಲೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಚ್ಚಿ ಕೊಲ್ಲಲಾಗಿದೆ.‌

ಇದನ್ನೂ ಓದಿ : Murder Case : ಶರಣರ ನಾಡನ್ನು ಮರಣದ ನಾಡಾಗಿಸಿದ ಪ್ರಿಯಾಂಕ್‌ ಖರ್ಗೆ; ಸಂಸದರ ಆಪ್ತನ ಕೊಲೆಗೆ ಬಿಜೆಪಿ ಆಕ್ರೋಶ

40 ಲಕ್ಷ ಸುಪಾರಿ; ತಮ್ಮನನ್ನೇ ಕೊಲೆಗೆ ಆಹ್ವಾನಿಸಿದ್ದ ದುಷ್ಟ ಸಚಿನ್‌

ಈ ನಡುವೆ, ಗಿರೀಶ್‌ ಚಕ್ರ ಅವರ ಕೊಲೆಗೆ 40 ಲಕ್ಷ ರೂ. ಸುಪಾರಿ ಕೊಡಲಾಗಿದೆ ಎಂದು ಹೇಳಲಾಗಿದೆ. ಗಿರೀಶ್‌ ಚಕ್ರ ಅವರ ಸಹೋದರ ಪ್ರಕಾಶ್‌ ಅವರು ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಸಚಿನ್ ಎನ್ನುವ ಫೋನ್ ಮಾಡಿ ಒಂದು ಡೀಲ್ ಬಂದಿದೆ ಎಂದು ಹೇಳಿದ್ದ.. ಹಾಫ್ ಮರ್ಡರ್‌ ಮಾಡೋದು ಇದೆ. ನಲ್ವತ್ತು ಲಕ್ಷ ಡೀಲ್ ಇದೆ ಎಂದು ಹೇಳಿದ್ದ. ಆದರೆ, ನಾನು ಬರೊಲ್ಲಾ‌, ಇದೆಲ್ಲಾ ಒಳ್ಳೆಯದಲ್ಲಾ ಎಂದು ಹೇಳಿದ್ದೆ. ಆದ್ರೆ ಸಚಿನ್ ನನ್ನ ಅಣ್ಣನ ಕೊಲೆ‌ ಮಾಡ್ತಾನೆ‌, ಡೀಲ್ ಮಾಡಿದ್ದಾನೆ ಎಂದು ಗೊತ್ತಿರಲಿಲ್ಲ ಎಂದು ಪ್ರಕಾಶ್‌ ಹೇಳಿದ್ದಾನೆ.

ಕೊಲೆಯಾದ ಗಿರೀಶ್‌ ಚಕ್ರ ಮತ್ತು ಕೊಲೆಗೆ ಸುಪಾರಿ ಪಡೆದ ಸಚಿನ್

ಮಗನಿಗಿಂತ ಹೆಚ್ಚಾಗಿದ್ದ ಚಕ್ರ: ಕಣ್ಣೀರು ಹಾಕಿದ ಉಮೇಶ್‌ ಜಾಧವ್

ʻʻಅವನು ನನ್ನ ಮಗನಿಗಿಂದ ಹೆಚ್ಚಾಗಿದ್ದ. ಈ‌ ದೇಶದ ಬಗ್ಗೆ ಹೆಚ್ಚು ಚಿಂತನೆ ಮಾಡ್ತಿದ್ದ. ಮುಂಬರುವ ನಾಯಕನಾಗಿದ್ದ. ತಾಯಿ ತಂದೆ ಇಲ್ಲದ ತಬ್ಬಲಿ ಇದ್ದʼʼ ಎಂದು ಆಪ್ತನನ್ನು ಕಳೆದುಕೊಂಡ ಸಂಸದ ಡಾ. ಉಮೇಶ್‌ ಜಾಧವ್‌ ಕಣ್ಣೀರು ಹಾಕಿದ್ದಾರೆ.

ʻʻಇಂದು ಕಲಬುರಗಿಯಲ್ಲಿ ಕಾನೂನಿ ಸುವ್ಯವಸ್ಥೆ ಕೆಟ್ಟು ಹೋಗಿದೆ. ಈಗಾಗಲೇ ಐಜಿ ಮತ್ತು ಎಸ್ಪಿಯವರಿಗೆ ಅವರಿಗೆ ಮಾತನಾಡಿದ್ದೇನೆ. ನಿನ್ನೆಯೂ ಒಬ್ಬ ಬಿಜೆಪಿ ಕಾರ್ಯಕರ್ತನ‌ ಕೊಲೆಯಾಗಿದೆ. ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಬಿಜೆಪಿ ಕಾರ್ಯಕರ್ತರ ಕೊಲೆಯಾಗುತ್ತಿದೆ. ಇಡೀ ದೇಶದ ಚಿತ್ತ ಕಲಬುರಗಿಯತ್ತ ಇದೆʼʼ ಎಂದ ಉಮೇಶ್‌ ಜಾಧವ್‌ ಅವರು, ಕಲಬುರಗಿಯಲ್ಲಿ ಚುನಾವಣೆಯಾಗುವವರೆಗೂ ಮಿಲಿಟರಿ ಫೋರ್ಸ್ ಬರಬೇಕು ಎಂದು ಹೇಳಿದರು.

Exit mobile version