ಕಲಬುರಗಿ: ಕಲಬುರಗಿಯಲ್ಲಿ (Kalaburagi News) ಮಹಿಳೆಯೊಬ್ಬಳ ಕೊಲೆ (Murder case) ಮಾಡಿ ಶವ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಗಾಂವ್ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಕಲಬುರಗಿ ನಗರದ ರಾಜ್ ಕುಮಾರ್ ಬಂಧಿತ ಆರೋಪಿ ಆಗಿದ್ದಾನೆ.
ರಾಜ್‌ಕುಮಾರ್ ಊಟ ಕೊಡಿಸುವ ನೆಪದಲ್ಲಿ ಬಸ್ಸಮ್ಮ ಎಂಬಾಕೆಯನ್ನು ಕರೆದೊಯ್ದು ಕೊಲೆ ಮಾಡಿದ್ದ. ಕೊಲೆ ಬಳಿಕ ಪೆಟ್ರೋಲ್ ಹಾಕಿ ಸುಟ್ಟು ರಸ್ತೆ ಬದಿಯಲ್ಲಿ ಶವ ಹೂತಿಟ್ಟು ಎಸ್ಕೇಪ್ ಆಗಿದ್ದ. ಬಸ್ಸಮ್ಮ ಈ ರಾಜಕುಮಾರ್ ಬಳಿ ಚಿನ್ನಾಭರಣವನ್ನು ಅಡವಿಟ್ಟಿದ್ದಳು ಜತೆಗೆ ಹಣವನ್ನು ಕೊಟ್ಟಿದ್ದಳು. ಬಸ್ಸಮ್ಮ ಕೊಟ್ಟ ಚಿನ್ನವನ್ನು ರಾಜುಕುಮಾರ್ ಮತ್ತೊಬ್ಬರ ಬಳಿ ಅಡವಿಟ್ಟಿದ್ದ. ಕೆಲ ದಿನಗಳ ಬಳಿಕ ಬಸ್ಸಮ್ಮ, ರಾಜಕುಮಾರ್‌ಗೆ ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಕೇಳಿದ್ದಳು.
ಆದರೆ ಬೇರೊಬ್ಬರ ಬಳಿ ಚಿನ್ನ ಅಡವಿಟ್ಟ ಕಾರಣಕ್ಕೆ ರಾಜಕುಮಾರ್, ಬಸ್ಸಮ್ಮಳನ್ನು ಕೊಂದು ಮುಗಿಸಲು ಸ್ಕೆಚ್ ಹಾಕಿದ್ದ. ಅದರಂತೆ ಜುಲೈ 14 ರಂದು ಮಾರ್ಕೆಟ್‌ನಿಂದ ಊಟ ಕೊಡಿಸುವ ನೆಪದಲ್ಲಿ ಕರೆದೊಯ್ದು ಗುರುತು ಸಿಗದಂತೆ ಸುಟ್ಟು ಹಾಕಿ ಎಸ್ಕೇಪ್ ಆಗಿದ್ದ.
ಜಮೀನಿನಲ್ಲಿ ಪತ್ತೆಯಾಗಿದ್ದ ಶವ
ಕಲಬುರಗಿಯ (Kalaburagi News) ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಸುಟ್ಟಸ್ಥಿತಿಯಲ್ಲಿ ಮಹಿಳೆಯ ಶವ (Dead Body Found) ಪತ್ತೆಯಾಗಿತ್ತು. ಮಹಿಳೆ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಬಳಿಕ ಗುರುತು ಸಿಗಬಾರದೆಂದು ಸುಟ್ಟು ಹಾಕಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಎಸ್ಪಿ ಬಿಂದುರಾಣಿ, ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮಹಾಗಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಚಿನ್ನಾಭರಣ ಹಾಗೂ ಹಣಕಾಸು ವಿಷ್ಯಕ್ಕೆ ಹತ್ಯೆ ನಡೆದಿರುವುದು ಗೊತ್ತಾಗಿದೆ. ಮಹಾಗಾವ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ
ಪೊಲೀಸ್ ಮನೆಯಲ್ಲಿ ಚಿನ್ನಾಭರಣ ಕದ್ದು ಕಳ್ಳರು ಎಸ್ಕೇಪ್
ಮೈಸೂರು: ತಡರಾತ್ರಿ ಮನೆ ಬೀಗ ಮುರಿದ ಕಳ್ಳರು (theft Case) ತಮ್ಮ ಕೈ ಚಳಕ ತೋರಿಸಿದ್ದಾರೆ. ಮೈಸೂರಿನ ಜೆ.ಪಿ ನಗರದ ಎರಡನೇ ಹಂತದಲ್ಲಿ ಘಟನೆ ನಡೆದಿದೆ. ಪೊಲೀಸರ ಮನೆಗೆ ನುಗ್ಗಿದ ಕಳ್ಳರು ಸಿನಿಮೀಯ ರೀತಿಯಲ್ಲಿ ಕದಿಯಲು ಮುಂದಾಗಿದ್ದರು. ಆದರೆ ಅವರ ಟೈಂ ಕೈಕೊಟ್ಟಿತ್ತು ಕಳ್ಳರು ಮನೆಯಲ್ಲಿರುವಾಗಲೇ ಮಾಲೀಕರು ಮನೆಗೆ ವಾಪಸ್ ಆಗಿದ್ದರು.
ಮನೆ ಮಾಲೀಕರನ್ನು ಕಂಡು ಗಾಬರಿಗೊಂಡ ಕಳ್ಳರು ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆ ಮಂದಿಗೆಲ್ಲ ಚಾಕು ತೋರಿಸಿ ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗುವ ವೇಳೆ ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ರಾಡ್, ಸಲಾಕೆ ,ಎಲೆಕ್ಟ್ರಿಕ್ ಸಾಮಾನು, ಎರಡು ಬ್ಯಾಗ್ ಸೇರಿದಂತೆ ತಮ್ಮ ಲಗೇಜ್‌ಗಳನ್ನು ಬಿಟ್ಟು ಓಡಿಹೋಗಿದ್ದಾರೆ.
ಕಳ್ಳರು ಓಡಿ ಹೋದ ಬಳಿಕ ಮನೆಯೊಳಗೆ ತೆರಳಿ ನೋಡಿದಾಗ 135 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿರುವುದು ಖಚಿತವಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡಸಿದ್ದಾರೆ. ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ