ಕಲಬುರಗಿ: ಆತ ವಸತಿ ಯೋಜನೆಯಲ್ಲಿ ಮಂಜೂರಾಗಿದ್ದ ಮನೆ ಕೇಳಿದ್ದೇ ತಪ್ಪಾಯಿತು! ಆ ಬಡಪಾಯಿಯ ಎದೆ ಮತ್ತು ಮರ್ಮಾಂಗಕ್ಕೆ ಒದ್ದು ಕೊಂದೇ ಬಿಟ್ಟಿದ್ದಾರೆ. ಇದು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ಘಟನೆ.
ಬಸವರಾಜ್ (35) ಕೊಲೆಯಾದ ದುರ್ದೈವಿ. ವಸತಿ ಯೋಜನೆಯೊಂದರಲ್ಲಿ ಬಸವರಾಜ್ ಅವರಿಗೆ ಮನೆ ಮಂಜೂರಾಗಿತ್ತು. ಮನೆ ನೀಡಲು ಗ್ರಾ.ಪಂ ಉಪಾಧ್ಯಕ್ಷೆ 25 ಸಾವಿರ ರೂ. ಲಂಚ ಕೇಳಿದ್ದಳು. ಗ್ರಾ.ಪಂ ಉಪಾಧ್ಯಕ್ಷೆ ಪತಿ ಸಿದ್ದಪ್ಪಾ ಮತ್ತು ಮಗ ಗುರುರಾಜ್ ಲಂಚ ಕೇಳಿದ್ದರು. ಅವರು ಲಂಚ ಕೇಳಿದ್ದ ವಿಚಾರವನ್ನು ಬಸವರಾಜ್ ಊರಿನವರ ಮುಂದೆ ಹೇಳಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಉಪಾಧ್ಯಕ್ಷೆ ಪತಿ ಹಾಗೂ ಮಗ, ಬಸವರಾಜ್ ಅವರ ಎದೆ ಹಾಗೂ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Holi tragedy : ಹೋಳಿ ಹಲಗೆ ಬಾರಿಸುವ ವಿಚಾರಕ್ಕೆ ಜಗಳ, ಹೊಟ್ಟೆಗೆ ಚಾಕುವಿನಿಂದ ಇರಿದು ಯುವಕನ ಕೊಲೆ