ಬೆಂಗಳೂರು: ತಮ್ಮ ಹಾಗೂ ಕುಟುಂಬದವರ ಕಾಲ್ ಹಿಸ್ಟರಿಯನ್ನು ಮೊಬೈಲ್ ಏಜೆನ್ಸಿಗಳ ಮೂಲಕ ಯಾರೋ ಪಡೆದುಕೊಳ್ಳುತ್ತಿದ್ದು (Phone Tapping) ಇದು ಗೌಪ್ಯತೆಗೆ ಧಕ್ಕೆ ತಂದಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ದೂರು ನೀಡಿದ್ದಾರೆ.
ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಎಂ.ಬಿ. ಪಾಟೀಲ್ ದೂರು ಸಲ್ಲಿಕೆ ಮಾಡಿದ್ದಾರೆ.
ವಿಜಯಪುರದಿಂದ ಮಾಹಿತಿ ಪಡೆದರೆ ತಿಳಿಯುತ್ತದೆ ಎಂಬ ಕಾರಣಕ್ಕೆ ಕಲಬುರಗಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಂದ ಕಾಲ್ ಹಿಸ್ಟರಿ ಪಡೆಯಲಾಗಿದೆ. ರಾಜಕೀಯ ವಿರೋಧಿಗಳು ಕೆಟ್ಟ ಚಾಳಿಯ ಕೆಲಸವನ್ನು ಮಾಡುತ್ತಿದ್ದಾರೆ. ವೈಯಕ್ತಿಕ ಮಾಹಿತಿ ಕಸಿಯುವ ಯತ್ನ ನಡೆಯುತ್ತಿದೆ.
ತಮ್ಮ ಜತೆಗೆ, ಪತ್ನಿ ಆಶಾ ಎಂ. ಪಾಟೀಲ್, ಸಹೋದರ, ವಿಧಾನಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್, ಪಿಆರ್ ಓ ಮಹಾಂತೇಶ್ ಬಿರಾದಾರ್, ಪುತ್ರ ಬಸನಗೌಡ ಪಾಟೀಲ್ ಅವರ ಕಾಲ್ ಹಿಸ್ಟರಿಯನ್ನು ಯಾರಿಗೂ ನೀಡದಂತೆ ಮೊಬೈಲ್ ಏಜೆನ್ಸಿಗಳಿಗೆ ಹಾಗೂ ಇಲಾಖೆಯವರಿಗೆ ಸೂಚನೆ ನೀಡಬೇಕು. ಒಂದು ವೇಳೆ ಮಾಃಇತಿ ಸೋರಿಕೆ ಆಗಿದೆ ಎನ್ನುವಂತಾದರೆ ಅದಕ್ಕೆ ಏಜೆನ್ಸಿ ಮತ್ತು ಪೊಲೀಸ್ ಇಲಾಖೆಯವರೇ ಸಂಪೂರ್ಣ ಹೊಣೆಯಾಗುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: NSE phone tapping case : ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣಗೆ ದಿಲ್ಲಿ ಹೈಕೋರ್ಟ್ ಜಾಮೀನು