Site icon Vistara News

Physical Abuse : ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್; ಆತ್ಮಹತ್ಯೆಗೆ ಯತ್ನಿಸಿದ ಯುವತಿ

Physical Abuse

ಕಲಬುರಗಿ: ಪ್ರೀತಿ-ಪ್ರೇಮ ಎಂದು ಯುವತಿಯನ್ನು ಪುಸಲಾಯಿಸಿದ ಯುವಕರ್ನೊವ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ (Physical Abuse) ಬೆಳೆಸಿ, ವಂಚಿಸಿದ್ದಾನೆ. ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಯುವತಿಗೆ ವಂಚಿಸಿ ಕಾಲ್ಕಿತ್ತಿದ್ದಾನೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಶೀಲ್ ನಿಂಬಾಳ್ಕರ್ ಎಂಬಾತನಿಂದ ಕೃತ್ಯ ನಡೆದಿದೆ.

ಮದುವೆಯಾಗುವುದಾಗಿ ಹೇಳಿ ಯುವತಿ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇತ್ತ ಗರ್ಭಾವತಿಯಾದ ವಿಷ್ಯ ಕೇಳಿ ಯುವತಿಗೆ ಒತ್ತಾಯ‌ ಪೂರ್ವಕವಾಗಿ ಅಬಾಷನ್‌ ಮಾಡಿದ್ದಾನೆ. ಬಳಿಕ ಮದುವೆ ಆಗು ಎಂದರೆ ನೆಪವೊಡ್ಡಿ ಕಾಲ್ಕಿತ್ತಿದ್ದಾನೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಕಣ್ಣೀರು ಹಾಕಿದ್ದಾಳೆ.

ಎಫ್‌ಐಆರ್‌ (FIR) ದಾಖಲಾಗಿ ಮೂರು ತಿಂಗಳಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಕಲಬುರಗಿ ದಕ್ಷಿಣ ವಿಭಾಗದ ಎಸಿಪಿ ಭೂತೆಗೌಡರಿಗೆ ಫೋನ್‌ ಮಾಡಿದ್ರೆ ನಾನೇ ನನ್ನ ಹೆಂಡತಿ ಜತೆಗೆ ಜಗಳ ಮಾಡಿಕೊಂಡಿದ್ದೀನಿ. ನಿನಗೆ ಏನ್‌ ಮಾಡಲಿ ಎಂದು ಫೋನ್‌ ಕಟ್‌ ಮಾಡಿದ್ದರಂತೆ. ಪೊಲೀಸರಿಂದ ನನಗೆ ಯಾವುದೇ ನ್ಯಾಯ ಸಿಗುತ್ತಿಲ್ಲ ಎಂದು ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ವಿಡಿಯೊ ಮಾಡಿದ್ದಾಳೆ.

ಇದನ್ನೂ ಓದಿ: Physical Abuse : ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಕಾಮುಕನನ್ನು ಥಳಿಸಿದ ಸಾರ್ವಜನಿಕರು

ಕೋಲಾರದಲ್ಲಿ ದಂಪತಿ ಆತ್ಮಹತ್ಯೆ

ಕೋಲಾರದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ನಗರದ ಕನಕನಪಾಳ್ಯದಲ್ಲಿ ಘಟನೆ ನಡೆದಿದೆ. ಸಂತೋಷ್ (35) ಹಾಗೂ ಬಾವನ (25) ಆತ್ಮಹತ್ಯೆಗೆ ಶರಣಾದ ದಂಪತಿ. ಶನಿವಾರ ರಾತ್ರಿ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ ಹಾಗೂ ಇನ್ನಿತರ ಕಾರಣದಿಂದ ಮನನೊಂದು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version