Site icon Vistara News

Physical Abuse : ಅಪ್ರಾಪ್ತ ಬಾಲಕರಿಂದ 10ರ ಬಾಲಕಿ ಮೇಲೆ ಚಾಕು ತೋರಿಸಿ ಅತ್ಯಾಚಾರ, ಮೊಬೈಲ್‌ನಲ್ಲಿ ರೆಕಾರ್ಡ್!

Physical abuse on girl

ಕಲಬುರಗಿ:‌ ಸಾಮಾಜಿಕ ಜಾಲತಾಣಗಳ (Social Media) ಪ್ರಭಾವವೋ, ಕಳೆದು ಹೋಗುತ್ತಿರುವ ನೈತಿಕ ಮೌಲ್ಯವೋ (Moral values), ಆಹಾರ ಮತ್ತಿತರ ಕಾರಣಗಳಿಂದಾಗಿ ಸಣ್ಣ ವಯಸ್ಸಿನಲ್ಲೇ ಕಾಡುವ ಅತಿಯಾದ ಕಾಮಾಂಧತೆಯೋ (Sexual thrust) ಗೊತ್ತಿಲ್ಲ. ಅಂತೂ ಆಟವಾಡುವ ವಯಸ್ಸಿನ ಮಕ್ಕಳು (POCSO Case) ಕೂಡಾ ಲೈಂಗಿಕ ಆಸಕ್ತಿಯನ್ನು ಬೆಳೆಸಿಕೊಂಡು ಅದನ್ನು ಪೂರೈಸಿಕೊಳ್ಳಲು ಅಪಾಯಕಾರಿ ದಾರಿಗಳನ್ನು (Physical abuse) ಕಂಡುಕೊಳ್ಳುವ ಕ್ರೂರಿಗಳಾಗುತ್ತಿರುವುದಂತೂ ಸತ್ಯ.

ಈ ಘಟನೆಯನ್ನು ನೀವು ಕೇಳಿದರೆ ನೀವು ಖಂಡಿತವಾಗಿಯೂ ಮಕ್ಕಳು ಅನ್ನುವ ಪದವನ್ನು ಬಳಸಲು ಹಿಂದೆ ಸರಿಯುತ್ತೀರಿ. ಯಾಕೆಂದರೆ ಅವರು ದೊಡ್ಡವರು ಕೂಡಾ ಮಾಡಲು ಹಿಂದೇಟು ಹಾಕಬಲ್ಲ ಹೀನಕೃತ್ಯವನ್ನು ಮಾಡಿದ್ದಾರೆ. ಅದರೂ ಕೇವಲ 14 ಮತ್ತು 16ರ ವಯಸ್ಸಿನಲ್ಲಿ.

ಯಸ್‌‌, ಇನ್ನೂ ಹೈಸ್ಕೂಲ್‌ ದಾಟದ 14 ಮತ್ತು 16 ವರ್ಷದ ಇಬ್ಬರು ಪುಂಡ ಬಾಲಕರು ಕೇವಲ 10 ವರ್ಷದ ಪುಟ್ಟ ಬಾಲಕಿಯ ಮೇಲೆ ಹೀನಾಯ ಅತ್ಯಾಚಾರ ಮಾಡಿದ್ದಾರೆ. ಕೇವಲ ಅತ್ಯಾಚಾರ ಮಾಡಿದ್ದಲ್ಲ, ಹುಡುಗಿ ಇದಕ್ಕೆಲ್ಲ ಒಪ್ಪದೆ ಚೀರಿಕೊಂಡಾಗ ಚಾಕು ಹಿಡಿದು ಬೆದರಿಸಿ ಅತ್ಯಾಚಾರ ಮಾಡಿದ್ದಾರೆ. ಒಬ್ಬ ಅತ್ಯಾಚಾರ ಮಾಡುವಾಗ ಇನ್ನೊಬ್ಬ ಚಾಕು ಹಿಡಿದುಕೊಳ್ಳುವಷ್ಟು ಕ್ರೌರ್ಯವನ್ನು ಮೆರೆದಿದ್ದಾರೆ.

ಈ ದುಷ್ಟ ಮಕ್ಕಳ ಕ್ರೌರ್ಯ ಮತ್ತು ಭಯವೇ ಇಲ್ಲದ ನಡವಳಿಕೆ ಎಷ್ಟರ ಮಟ್ಟಿಗೆ ಇದೆ ಎಂದರೆ, ಅವರು ತಾವು ಮಾಡಿದ ಈ ಹೇಯಕೃತ್ಯವನ್ನು ಮೊಬೈಲ್‌ನಲ್ಲಿ ಶೂಟ್‌ ಬೇರೆ ಮಾಡಿಕೊಂಡಿದ್ದಾರೆ.

ಈ ಹೇಸಿಗೆಯ‌ ರಾಕ್ಷಸೀ ಕೃತ್ಯ ನಡೆದಿರುವುದು ಕಲಬುರಗಿ ಜಿಲ್ಲೆ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಪುಟ್ಟ ಬಾಲಕಿಯನ್ನು ಪರಿಚಯದ ಪುಂಡ ಹುಡುಗರೇ ಹುರಿದು ಮುಕ್ಕಿದ್ದಾರೆ.

ಈ ಬಾಲಕಿಯ ಹೆತ್ತವರು ಊರಿನಲ್ಲಿಲ್ಲ. ಅವರು ಮುಂಬಯಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಹೀಗಾಗಿ ಮಗಳು ಊರಿನಲ್ಲಿದ್ದು ಕಲಿಯಲಿ ಎಂದು ವಿದ್ಯಾಭ್ಯಾಸಕ್ಕಾಗಿ ಸಂಬಂಧಿಕರ ಮನೆಯಲ್ಲಿ ಬಾಲಕಿಯನ್ನು ಬಿಟ್ಟಿದ್ದರು. ಆದರೆ, ಇದರ ನಡುವೆ ಪುಂಡ ಹುಡುಗರು ಆಕೆಯನ್ನು ಮರುಳು ಮಾಡಿ, ಬೆದರಿಸಿ ಆ ಎಳೆ ಜೀವವನ್ನು ತಿಂದುಹಾಕಿದ್ದಾರೆ.

ಈ ಘಟನೆ ಹೊರಜಗತ್ತಿಗೆ ಹೇಗೆ ಗೊತ್ತಾಯಿತು ಎನ್ನುವುದು ಸ್ಪಷ್ಟವಿಲ್ಲ. ಈ ಹುಡುಗರು ಬಾಲಕಿಗೆ ಚಾಕು ಹಿಡಿದು ಕೊಲೆ ಬೆದರಿಕೆ ಒಡ್ಡಿದ್ದರಿಂದ ಆಕೆ ಈ ವಿಚಾರವನ್ನು ಬಾಯಿ ಬಿಟ್ಟಿರುವ ಸಾಧ್ಯತೆಗಳು ಕಡಿಮೆ. ಈ ಬಾಲಕರು ತಮ್ಮ ದುಷ್ಕೃತ್ಯದ ವಿಡಿಯೊ ಮಾಡಿದ್ದು, ಅದನ್ನು ಯಾರಿಗಾದರೂ ಹಂಚುವ ವೇಳೆ ಸಿಕ್ಕಿಬಿದ್ದರೋ ಗೊತ್ತಿಲ್ಲ. ಅಂತೂ ಇದೀಗ ಹೊರಜಗತ್ತಿಗೆ ವಿಷಯ ಗೊತ್ತಾಗಿದ್ದು, ಜನರು ಈ ಹುಡುಗರು ಮತ್ತು ಕುಟುಂಬಿಕರ ಮೇಲೆ ಕೆಂಡ ಕಾರುತ್ತಿದ್ದಾರೆ.

ಕಾಳಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ಹುಡುಗರನ್ನು ವಶಕ್ಕೆ ಪಡೆಯಲಾಗಿದೆ. ಬಾಲಕಿಯನ್ನು ಕೂಡಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ.

Exit mobile version