Site icon Vistara News

ಕಲಬುರಗಿಯಲ್ಲಿ ಮಹಾರಾಷ್ಟ್ರದ ದರೋಡೆಕೋರರ ಕಾಲಿಗೆ ಗುಂಡೇಟು, ಬಂಧನ

robbers

ಕಲಬುರಗಿ: ಮಹಾರಾಷ್ಟ್ರ ಮೂಲದ ಇಬ್ಬರು ದರೋಡೆಕೋರರನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಕಲಬುರಗಿಯಲ್ಲಿ ಹಗಲಲ್ಲಿ ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಪ್ರದರ್ಶನ ನೀಡಿ, ರಾತ್ರಿ ಮನೆ ನುಗ್ಗಿ ದರೋಡೆ ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ಇದಾಗಿತ್ತು. ನಿನ್ನೆ ರಾತ್ರಿ ಬಿದ್ದಾಪೂರ ಕಾಲನಿಯಲ್ಲಿ ಮನೆಗೆ ನುಗ್ಗಿ ದರೋಡೆ ಮಾಡುತ್ತಿದ್ದಾಗ ಸಾರ್ವಜನಿಕರ ಸಹಕಾರದಿಂದ ನಾಲ್ವರು ದರೋಡೆಕೋರರನ್ನು ಹಿಡಿಯಲಾಗಿತ್ತು. ಈ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ಶಿವಶರಣ ಎಂಬವರ ಮೇಲೆ ದರೋಡೆಕೋರರು ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ದರೋಡೆಕೋರರ ಕಾಲಿಗೆ ಅಶೋಕನಗರ ಸರ್ಕಲ್ ಇನ್ಸಪೆಕ್ಟರ್ ಪಂಡಿತ ಸಗರ್ ಫೈರಿಂಗ್ ಮಾಡಿದ್ದರು.

ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ತುಳಜಾಪೂರ ತಾಲೂಕಿನ ಝಳಕೋಳನ ಲವಾ ಮತ್ತು ದೇವಿದಾಸ ಎನ್ನುವ ದರೋಡೆಕೋರರ ಕಾಲಿಗೆ ಗುಂಡೇಟು‌ ಬಿದ್ದಿದ್ದು, ಇವರನ್ನು ಕಲಬುರಗಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಕಾನ್‌ಸ್ಟೇಬಲ್ ಶಿವಶರಣರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕಲಬುರಗಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder mystery | ಮೊಬೈಲ್‌ ಸಿಮ್‌ ಬಿಡಿಸಿದ ಮಹಿಳೆಯ ಮರ್ಡರ್‌ ರಹಸ್ಯ

Exit mobile version