Site icon Vistara News

Self Harming : ಮದುವೆ ವಿಚಾರದಲ್ಲಿ ಜಗಳ; ಬಾವಿಗೆ ಹಾರಿ ಅಣ್ಣ-ತಂಗಿ ದಾರುಣ ಸಾವು

Self Harming death

ಕಲಬುರಗಿ: ಮನೆಯಲ್ಲಿ ಮದುವೆ ವಿಚಾರದಲ್ಲಿ (Marriage issue) ನಡೆದ ಸಣ್ಣ ಜಗಳ ಅಣ್ಣ-ತಂಗಿಯ ಸಾವಿಗೆ (Self Harming) ಕಾರಣವಾಗಿದೆ. ಕಲಬುರಗಿ ಜಿಲ್ಲೆಯ (Kalaburagi News) ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲಿ ಅಣ್ಣ ಮತ್ತು ತಂಗಿ ಬಾವಿಗೆ ಬಿದ್ದು ಪ್ರಾಣ (Brother and Sister death) ಕಳೆದುಕೊಂಡಿದ್ದಾರೆ.

ಸಂದೀಪ್ (23) ಮತ್ತು ನಂದಿನಿ‌ (19) ಎಂಬ ಅಣ್ಣ-ತಂಗಿಯೇ ಪ್ರಾಣ ಕಳೆದುಕೊಂಡವರು. ನಂದಿನಿಯ ಮದುವೆ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆದಿತ್ತು. ಅದರಲ್ಲೂ ಮುಖ್ಯವಾಗಿ ಮನೆಯವರು ಹೇಳಿದ್ದ ಹುಡುಗನನ್ನು ಮದುವೆ ಮಾಡಿಕೊಳ್ಳುವ ವಿಚಾರದಲ್ಲಿ ನಂದಿನಿ ಆಕ್ಷೇಪ ವ್ಯಕ್ತಪಡಿಸಿದ್ದಳು.

ಮಾತಿಗೆ ಮಾತು ಬೆಳೆದು ಸಿಟ್ಟುಗೊಂಡ ನಂದಿನಿ ಮನೆಯಿಂದ ಹೊರಗೆ ಓಡಿಹೋಗಿ ಬಾವಿಗೆ ಹಾರಿದ್ದಳು. ಇದನ್ನೂ ನೋಡಿದ ಸಹೋದರ ಸಂದೀಪ್‌ ಆಕೆಯನ್ನು ಬೆನ್ನು ಹತ್ತಿ ಹೋಗಿದ್ದ. ಆದರೆ, ಆತನಿಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ಏನು ಮಾಡಬೇಕು ಎಂದು ತೋಚದೆ ಆತನೂ ಬಾವಿಗೆ ಹಾರಿದ್ದಾನೆ.

ಕೊನೆಗೆ ಈಜು ಬಾರದೆ ಅಣ್ಣ ತಂಗಿಯಿಬ್ಬರೂ ಬಾವಿಯಲ್ಲಿ ಮುಳಗಿ ಸಾವು ಕಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಊರಿನವರು ಆಗಮಿಸಿ ಶವಗಳನ್ನು ಮೇಲೆತ್ತಿದ್ದಾರೆ.

ಪಟಪಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿರುವ ಘಟನೆಗೆ ಸಂಬಂಧಿಸಿ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming: ಪಪ್ಪಾ… ನಾನು ಲೂಸರ್, ಕೆಟ್ಟ ಮಗಳು! ಕೋಟಾದಲ್ಲಿ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ರೈತನ ಶೆಡ್ ಗೆ ಬೆಂಕಿ: ಜಾನುವಾರುಗಳು ಸಜೀವ ದಹನ

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕರೀಕೆರೆ ಗ್ರಾಮದಲ್ಲಿ ರೈತರೊಬ್ಬರ ಶೆಡ್‌ಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಜಾನುವಾರುಗಳು ಸಜೀವ ದಹನಗೊಂಡಿವೆ. ರೈತ ನಂದೀಶಯ್ಯ ಎನ್ನುವವರಿಗೆ ಸೇರಿದ ಹಳ್ಳಿಕಾರ್ ತಳಿಯ ಜೋಡಿ ಎತ್ತು, ಒಂದು ಸೀಮೆ ಹಸು ಮತ್ತು ಕರು ಸಜೀವ ದಹನಗೊಂಡಿವೆ.

ಆಕಸ್ಮಿತಕವಾಗಿ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದ್ದು, ಶೆಡ್ ನಲ್ಲಿ ಇದ್ದ 10 ಸಾವಿರ ಕೊಬ್ಬರಿ ಸಂಪೂರ್ಣ ಭಸ್ಮವಾಗಿದೆ. ರೈತ ನಂದೀಶಯ್ಯಗೆ ಸುಮಾರು 8 ಲಕ್ಷ ರೂ. ನಷ್ಟವಾಗಿದೆ. ನೊಣವಿನಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಥಳದಲ್ಲಿ ಸಂಪೂರ್ಣ ಸುಟ್ಟು ಹೋದ ಶೆಡ್‌, ಅದರಲ್ಲಿ ಸುಟ್ಟು ಕರಕಲಾದ ಪ್ರಾಣಿಗಳ ದೇಹಗಳು ಕಣ್ಣೀರು ಉಕ್ಕಿಸುತ್ತಿವೆ.

Exit mobile version