ಕಲಬುರಗಿ: ತಾಯಿ, ಮಗಳು (Mother and Daughter death) ಒಂದೇ ಸೀರೆ ಸುತ್ತಿಕೊಂಡು ನದಿಗೆ ಹಾರಿ ಪ್ರಾಣ ಕಳೆದುಕೊಂಡ ದಾರುಣ ಘಟನೆ (Self Harming) ಕಲಬುರಗಿ ಜಿಲ್ಲೆಯ (Kalaburagi News) ಶಹಾಬಾದ್ ತಾಲೂಕಿನಲ್ಲಿ ನಡೆದಿದೆ. ಅಲ್ಲಿನ ಕಾಗಿಣ ನದಿಗೆ ಹಾರಿ ಅವರು ಜೀವ ಕಳೆದುಕೊಂಡಿದ್ದಾರೆ.
ಅಫಜಲಪುರ ತಾಲೂಕಿನ ನಿಲೂರ ಗ್ರಾಮದ ನಿವಾಸಿಗಳಾದ ಸುಮಲತಾ (41) ಮತ್ತು ಮಗಳು ವರ್ಷಾ (17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ತಾಯಿ ಮತ್ತು ಮಗಳು ಒಂದೇ ಸೀರೆಯನ್ನು ಕಟ್ಟಿಕೊಂಡು ಕಾಗಿಣ ನದಿಗೆ ಹಾರಿದ್ದಾರೆ. ನೀರಿಗೆ ಹಾರಿದ ಸಂದರ್ಭದಲ್ಲಿ ಯಾರಾದರೂ ಕೊನೆಯ ಹಂತದಲ್ಲಿ ಬದುಕಿಕೊಳ್ಳಲು ಪ್ರಯತ್ನ ನಡೆಸಬಾರದು ಎಂಬ ಕಾರಣಕ್ಕೆ ಈ ರೀತಿ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಶಹಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೇಲ್ನೋಟಕ್ಕೆ ಉತ್ತಮ ಕುಟುಂಬ ಮತ್ತು ಮಧ್ಯಮ ವರ್ಗಕ್ಕೆ ಸೇರಿದಂತೆ ಕಾಣುವ ಈ ತಾಯಿ ಮಗಳು ಯಾವುದೇ ಮಾನಸಿಕ ವೇದನೆಯಿಂದ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಅವರ ಕುಟುಂಬಿಕರನ್ನು ಈ ನಿಟ್ಟಿನಲ್ಲಿ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ : Self Harming : ಗದಗದ ಜನಪ್ರಿಯ ವೈದ್ಯ ಆತ್ಮಹತ್ಯೆ; ಡೆತ್ ನೋಟ್‌ನಲ್ಲಿ ಕಾಂಗ್ರೆಸ್ ನಾಯಕನ ಹೆಸರು
ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಮಹಿಳೆ ಒಂದು ವರ್ಷದ ಮಗುವನ್ನು ಬಿಟ್ಟು ಆತ್ಮಹತ್ಯೆ
ಬೆಂಗಳೂರು: ಅವನು ಒಬ್ಬ ಸಾಫ್ಟ್ ವೇರ್ ಎಂಜಿನಿಯರ್ (Software Engineer). ಒಳ್ಳೆಯ ಕೆಲಸದಲ್ಲಿದ್ದಾನೆ ಎಂಬ ಕಾರಣಕ್ಕೆ ಐವತ್ತು ಲಕ್ಷ ರೂ. ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ದುಡ್ಡಿನ ಜತೆ ಅರ್ಧ ಕೆಜಿ ಚಿನ್ನ ಕೂಡಾ ಕೊಟ್ಟಿದ್ದರು. ಆದರೆ, ಆ ಮನುಷ್ಯ ಮದುವೆಯಾದ ಕೂಡಲೇ ಕೆಲಸ ಬಿಟ್ಟಿದ್ದ. ಹಾಗೇ ಇದ್ದಿದ್ದರೆ ಪರವಾಗಿರಲಿಲ್ಲ. ಬೇರೆ ಹೆಣ್ಣಿನ ಸಹವಾಸಕ್ಕೆ ಬಿದ್ದಿದ್ದ. ಕೇಳಿದರೆ ತಂಗಿ ಅಂತಿದ್ದ! ಇಂಥ ದುಷ್ಟ ಗಂಡನ ಅಕ್ರಮ ಸಂಬಂಧದಿಂದ (Illicit relationship) ಬೇಸತ್ತು ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ (Self Harming), ಕೇವಲ ಒಂದು ವರ್ಷದ ಪುಟ್ಟ ಕಂದಮ್ಮನನ್ನು ಬಿಟ್ಟು ಹೋಗಿದ್ದಾಳೆ.
ಇದು ಬೆಂಗಳೂರಿನ ರಾಜಗೋಪಾಲ ನಗರದ ಮೋಹನ್ ಥಿಯೇಟರ್ ಬಳಿಯ ಮನೆಯೊಂದರಲ್ಲಿ ನಡೆದಿರುವ ಘಟನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯ ಹೆಸರು ಕಾವ್ಯ. ವಯಸ್ಸು ಇನ್ನೂ ಕೇವಲ 22. ಎರಡು ವರ್ಷದ ಹಿಂದಷ್ಟೇ ಸಂಸಾರ ಜೀವನಕ್ಕೆ ಕಾಲಿಟ್ಟ ಆಕೆ ಬಿಟ್ಟು ಹೋಗಿರುವ ಪುಟ್ಟ ಮಗುವಿನ ಮೊದಲ ಹುಟ್ಟುಹಬ್ಬವನ್ನು ಕೆಲವು ದಿನದ ಹಿಂದಷ್ಟೇ ಆಚರಿಸಲಾಗಿತ್ತು.
ಕುಣಿಗಲ್ ನಿವಾಸಿಯಾಗಿರುವ ಕಾವ್ಯ ಪ್ರವೀಣ್ ಎಂಬಾತನನ್ನು ಮದ್ವೆಯಾಗಿದ್ದಳು. ಆದರೆ ಸಂಸಾರ ನೆಟ್ಟಗಿರಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಈಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆಕೆಯ ಮನೆಯವರು ಆರೋಪ ಮಾಡುತ್ತಿದ್ದಾರೆ.
ಪ್ರವೀಣ್ ಎಂಜಿನಿಯರ್ ಎಂಬ ಕಾರಣಕ್ಕೆ ಕಾವ್ಯಳನ್ನು ಆಕೆಯ ಮನೆಯವರು ಖುಷಿಯಿಂದ ಮದುವೆ ಮಾಡಿಕೊಟ್ಟಿದ್ದರಂತೆ. ಆದರೆ ಆತ ಮಾತ್ರ ಮದುವೆ ಆದ ಸ್ವಲ್ಪ ದಿನದಲ್ಲಿ ಕೆಲಸ ಬಿಟ್ಟಿದ್ದನಂತೆ. ಎಲ್ಲಿಯೂ ಕೆಲಸಕ್ಕೆ ಹೋಗದೆ ಕಾವ್ಯಾಳ ಪೋಷಕರು ಕೊಟ್ಟ ಹಣದಲ್ಲಿ ಜೀವನ ಶುರು ಮಾಡಿದ್ದ. ಕಾವ್ಯಾಳ ಮನೆಯವರು ಎಷ್ಟೇ ಬುದ್ಧಿ ಹೇಳಿದರೂ ಮೊಂಡು ಬಿದ್ದಿದ್ದ ಪ್ರವೀಣ್. ಪೋಷಕರಿಗೆ ಅಸಲಿ ಸತ್ಯ ಗೊತ್ತಾಗಿದ್ದೇ ಆಗ. ತಮ್ಮ ಮಗಳನ್ನ ಪ್ರೀತಿಸುವ ಹುಡುಗನನ್ನ ಹುಡುಕೋದನ್ನ ಬಿಟ್ಟು ಪೋಷಕರೂ ಕೂಡ ಆತನ ಸಿರಿವಂತಿಕೆ ಸ್ಟೇಟಸ್ ಹುಡುಕಿದ್ದರು. ಅದೇ ಈಗ ಮುಳುವಾಗಿದೆ.