Site icon Vistara News

Self Harming : ಛೇ.. 2 ವರ್ಷದ ಮಗಳನ್ನು ನೇಣಿಗೆ ಹಾಕಿ ತಾನೂ ಕೊರಳೊಡ್ಡಿದ ತಾಯಿ!

Self Harming mother and daughter Death Kalaburagi.webp

ಕಲಬುರಗಿ: ಬದುಕಿನ ಬವಣೆಗಳು ಏನಿರುತ್ತವೋ? ಸಹಿಸಲಾಗದ ಸಂಕಷ್ಟಗಳು ಹೇಗಿರುತ್ತವೋ? ಜೀವನವೇ ಬೇಡ ಎನ್ನುವಷ್ಟು ಜಿಗುಪ್ಸೆ ಮೂಡಿಸುವ ಭಯಾನಕ ಘಟನೆಗಳು ಹಲವರ ಬಾಳಿನಲ್ಲಿ ನಡೆಯುತ್ತಲೇ ಇರುತ್ತದೆ. ಅಂಥ ಹೊತ್ತಿನಲ್ಲೇ ಇಂಥ ಘಟನೆಗಳು (Self Harming) ನಡೆಯುವುದು. ಹೌದು, ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗಳನ್ನು ಕೊಂದು ತಾನೂ ಸಾವಿಗೆ ಶರಣಾಗಿದ್ದಾಳೆ (Woman ends life with Child). ಕಲಬುರಗಿ ಜಿಲ್ಲೆಯ (Kalaburagi news) ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಈ ಕರುಳು ಹಿಂಡುವ ಘಟನೆ ನಡೆದಿದೆ.

ತಾಯಿಯೊಬ್ಬಳು ತನ್ನ ಎರಡು ವರ್ಚದ ಪುಟ್ಟ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಶಿವಲೀಲಾ ಆನಂದ(24) ಎಂಬಾಕೆಯೇ ತನ್ನ ಪುಟ್ಟ ಮಗಳು, ಎರಡು ವರ್ಷದ ವರ್ಷಿತಾಳನ್ನು ಕೊಂದು ತಾನೂ ಜೀವನ ಮುಗಿಸಿಕೊಂಡವಳು.

ಮೊದಲು ಎರಡು ವರ್ಷದ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ ತಾಯಿ ಶಿವಲೀಲಾ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕೆ ಸಾವಿಗೆ ಶರಣಾಗಿದ್ದಾಳೆ.

ಗಂಡ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು ಶಿವಲೀಲಾ ಮಗುವನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಡ ಆನಂದ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Self Harming : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು 1 ವರ್ಷದ ಪುಟ್ಟ ಮಗುವಿನ ತಾಯಿ ಆತ್ಮಹತ್ಯೆ

ಒಂದೇ ಸೀರೆ ಕಟ್ಟಿಕೊಂಡು ತಾಯಿ ಮಗಳು ನದಿಗೆ ಹಾರಿ ಪ್ರಾಣತ್ಯಾಗ

ಕಲಬುರಗಿ: ತಾಯಿ, ಮಗಳು (Mother and Daughter death) ಒಂದೇ ಸೀರೆ ಸುತ್ತಿಕೊಂಡು ನದಿಗೆ ಹಾರಿ ಪ್ರಾಣ ಕಳೆದುಕೊಂಡ ದಾರುಣ ಘಟನೆ (Self Harming) ಕಲಬುರಗಿ ಜಿಲ್ಲೆಯ (Kalaburagi News) ಶಹಾಬಾದ್ ತಾಲೂಕಿನಲ್ಲಿ ನಡೆದಿದೆ.‌ ಅಲ್ಲಿನ ಕಾಗಿಣ ನದಿಗೆ ಹಾರಿ ಅವರು ಜೀವ ಕಳೆದುಕೊಂಡಿದ್ದಾರೆ.

ಅಫಜಲಪುರ ತಾಲೂಕಿನ ನಿಲೂರ ಗ್ರಾಮದ ನಿವಾಸಿಗಳಾದ ಸುಮಲತಾ (41) ಮತ್ತು ಮಗಳು ವರ್ಷಾ (17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ತಾಯಿ ಮತ್ತು ಮಗಳು ಒಂದೇ ಸೀರೆಯನ್ನು ಕಟ್ಟಿಕೊಂಡು ಕಾಗಿಣ ನದಿಗೆ ಹಾರಿದ್ದಾರೆ. ನೀರಿಗೆ ಹಾರಿದ ಸಂದರ್ಭದಲ್ಲಿ ಯಾರಾದರೂ ಕೊನೆಯ ಹಂತದಲ್ಲಿ ಬದುಕಿಕೊಳ್ಳಲು ಪ್ರಯತ್ನ ನಡೆಸಬಾರದು ಎಂಬ ಕಾರಣಕ್ಕೆ ಈ ರೀತಿ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಶಹಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೇಲ್ನೋಟಕ್ಕೆ ಉತ್ತಮ ಕುಟುಂಬ ಮತ್ತು ಮಧ್ಯಮ ವರ್ಗಕ್ಕೆ ಸೇರಿದಂತೆ ಕಾಣುವ ಈ ತಾಯಿ ಮಗಳು ಯಾವುದೇ ಮಾನಸಿಕ ವೇದನೆಯಿಂದ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಅವರ ಕುಟುಂಬಿಕರನ್ನು ಈ ನಿಟ್ಟಿನಲ್ಲಿ ವಿಚಾರಣೆ ನಡೆಸಲಿದ್ದಾರೆ.

Exit mobile version