ಕಲಬುರಗಿ: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದರೆ ಕೋಕಾ ಕಾಯ್ದೆ ಹಾಕಿ ಗಡಿಪಾರು ಮಾಡಲಾಗುತ್ತದೆ ಎಂದು ರೌಡಿಗಳಿಗೆ ಎಸ್‌ಪಿ ಇಶಾಪಂತ್ ಎಚ್ಚರಿಕೆ ನೀಡಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ನಡೆದ ರೌಡಿಗಳ ಪರೇಡ್ ವೇಳೆ ತಾಲೂಕಿನ ಎಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ರೌಡಿಗಳನ್ನು ಕರೆತಂದು ಪರೇಡ್ ನಡೆಸಲಾಯಿತು.
ಇದನ್ನೂ ಓದಿ | ಕಲಬುರಗಿ ಬಸ್-ಟೆಂಪೊ ಅಪಘಾತ: ಮೃತರ ಸಂಖ್ಯೆ ಏಳಕ್ಕೆ ಏರಿಕೆ
ಯಾವುದೇ ಕಾರಣಕ್ಕೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಂತೆ ಇಶಾಪಂತ್ ಖಡಕ್ ವಾರ್ನಿಂಗ್ ನೀಡಿದರು. ಗಡಿಪಾರು ಆದರೆ ಒಂದು ವರ್ಷ ನೀವು ಇಲ್ಲಿ ಸುಳಿಯಲು ಆಗುವುದಿಲ್ಲ. ಗೂಂಡಾ ಕಾಯ್ದೆ ಹಾಗೂ ಕೋಕಾ ಕಾಯ್ದೆ ಹಾಕಿ ಗಡಿ ಪಾರು ಮಾಡಲಾಗುತ್ತದೆ.
ನೀವೆಲ್ಲರೂ ರೌಡಿಶೀಟರ್‌ಗಳು. ಕರೆದಾಗಲೆಲ್ಲಾ ಬರಬೇಕು, ಬರದಿದ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಯಾರಿಗಾದರೂ ಅನಾರೋಗ್ಯ ಇದ್ದರೂ ಹೆಲ್ತ್ ಸರ್ಟಿಫಿಕೇಟ್ ತಂದು ತೋರಿಸಬೇಕು. ಕೆಲವರು ಪೆರೇಡ್‌ಗೆ ಬಂದಿಲ್ಲ, ಅವರು ಯಾರೇ ಇರಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕೆಲವರಿಗೆ ವಯಸ್ಸು ಆಗಿದ್ದರೆ ಇನ್ನು ಕೆಲವರ ಮೇಲೆ ಒಂದೇ ಕೇಸ್ ಇದ್ದು, ಅಪರಾಧ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಅಂತಹವರನ್ನು ಗುರುತಿಸಿ, ಪರಿಶೀಲಿಸಿ ರೌಡಿ ಶೀಟರ್ ಅನ್ನು ಹಾಕುತ್ತೇವೆ ಎಂಬ ಗುಡ್ ನ್ಯೂಸ್ ಕೊಟ್ಟರು ಎಸ್‌ಪಿ.
ನಾವ್ ಯಾರನ್ನೂ ಬಿಡೋದಿಲ್ಲ
ಕೆಲವರು ನಮ್ಮ ಮೇಲೆ ಕೇಸ್ ದಾಖಲು ಆಗಿಲ್ಲ ಎಂದು ಆರಾಮಾಗಿ ಓಡಾಡಿಕೊಂಡು ಗೂಂಡಾ ವರ್ತನೆ ಮಾಡುತ್ತಿದ್ದಾರೆ. ಆದರೆ ಇನ್ನು ಮುಂದೆ ಇದೆಲ್ಲ ನಡೆಯೋದಿಲ್ಲ. ನಾವು ಯಾರನ್ನೂ ಸುಮ್ಮನೇ ಬಿಡೋಡಿಲ್ಲ. ನಮ್ಮ ಪೊಲೀಸರು ನಿಮ್ಮ ಮೇಲೆ ನಿಗಾ ಇಟ್ಟಿರುತ್ತಾರೆ ಎಂದು ಸೂಚನೆಯನ್ನೂ ಇಶಾಪಂತ್ ನೀಡಿದರು.
ಇದನ್ನೂ ಓದಿ | ಕಲಬುರಗಿ ಮಹಿಳೆಗೆ ಮೋದಿಯಿಂದಲೇ ಸಿಕ್ಕಿತು ಚುನಾವಣೆ ಟಿಕೆಟ್ ಆಫರ್ !