ಕಲಬುರಗಿ: ತಮ್ಮ ಸಾವಿನ ನಂತರ ಶವವನ್ನು ಹೂಳಲೆಂದು ಹದಿನೈದು ವರ್ಷಗಳ ಹಿಂದೆಯೇ ತಮ್ಮ ಅಂತಿಮ ವಿಧಿಗಾಗಿ ಕುಣಿ (tomb) ತೋಡಿಟ್ಟುಕೊಂಡ ವ್ಯಕ್ತಿಯೊಬ್ಬರು ನಿನ್ನೆ ಮೃತಪಟ್ಟಿದ್ದಾರೆ. ಈ ಸುದ್ದಿ ಸ್ಥಳೀಯವಾಗಿ ವೈರಲ್ (Viral news) ಆಗಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಿಪ್ಪರಗಾ ಗ್ರಾಮದ ಸಿದ್ದಪ್ಪ ಅವರು ನಿಧನ ಹೊಂದಿದ ವ್ಯಕ್ತಿ. ಇವರಿಗೆ 96 ವರ್ಷ ವಯಸ್ಸಾಗಿತ್ತು.
ಇವರು ಇಂದಿಗೆ 15 ವರ್ಷ ಮುನ್ನವೇ ತಮ್ಮ ಕುಣಿಯನ್ನು ತಾವೇ ತೋಡಿಟ್ಟುಕೊಂಡಿದ್ದರು. ತಮ್ಮ ಸಾವಿನ ಬಳಿಕ ಯಾರಿಗೂ ಭಾರವಾಗಬಾರದು ಎಂದು ಕುಣಿ ತೋಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರು. ಇದೀಗ ಸಿದ್ದಪ್ಪ ಸಾವಿನ ಬಳಿಕ ಅವರು ತೋಡಿದ ಕುಣಿಯಲ್ಲೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ.
ಇವರು 15 ವರ್ಷಗಳ ಹಿಂದೆ ತಮಗಾಗಿ ಹಾಗೂ ತಮ್ಮ ಪತ್ನಿಗಾಗಿ ಜೋಡು ಕುಣಿ ತೋಡಿದ್ದರು. 6 ವರ್ಷಗಳ ಹಿಂದೆ ಅವರ ಪತ್ನಿ ನೀಲಮ್ಮ ನಿಧನ ಹೊಂದಿದಾಗ ಒಂದು ಕಣಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದೀಗ ಪತ್ನಿಯ ಪಕ್ಕದ ಕುಣಿಯಲ್ಲಿಯೇ ಸಿದ್ದಪ್ಪ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ.
ಇದನ್ನೂ ಓದಿ: Viral Video: ಕಾಟ ಕೊಟ್ಟ ಪುಂಡನನ್ನು ಕೆಡವಿ ಹೊಡೆದು ಹಾಕಿದ್ರು! ಅಕ್ಕ-ತಂಗಿಯ ವಿಡಿಯೊ ಸಕತ್ ವೈರಲ್