ಬೆಂಗಳೂರು, ಕರ್ನಾಟಕ: ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಕಲಘಟಗಿ ಕ್ಷೇತ್ರವು ಮತ್ತೆ ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಕೈ ಅಭ್ಯರ್ಥಿ ಸಂತೋಷ್ ಲಾಡ್ ಅವರು 14372 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಅವರಿಗೆ ಒಟ್ಟು 85761 ಮತಗಳು ಬಂದಿವೆ. ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡು ಬಿಜೆಪಿ ಸೇರಿ ಸ್ಪರ್ಧಿಸಿದ್ದ ನಾಗರಾಜ್ ಛಬ್ಬಿ ಅವರು 71404 ಮತಗಳನ್ನು ಪಡೆದುಕೊಂಡಿದ್ದಾರೆ. 2013ರಲ್ಲಿ ಸಂತೋಷ್ ಲಾಡ್ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಎರಡನೇ ಬಾರಿಗೆ ಕಲಘಟಗಿಯಲ್ಲಿ ಲಾಡ್ ಗೆದ್ದಂತಾಗಿದೆ(Kalaghatgi Election Results).
2023ರ ಚುನಾವಣೆಯ ಅಭ್ಯರ್ಥಿಗಳು
ಕಾಂಗ್ರೆಸ್‌ನಿಂದ ಸಂತೋಷ್ ಲಾಡ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿ ಅವರು ಬಿಜೆಪಿಯಿಂದ ಕಣದಲ್ಲಿದ್ದರು. ಜೆಡಿಎಸ್‌ನಿಂದ ವೀರಪ್ಪ ಬಸಪ್ಪ ಸೀಗಿಗತ್ತಿ ಅವರು ಸ್ಪರ್ಧಿಸಿದ್ದರು. ಬಿಜೆಪಿಯ ಹಾಲಿ ಶಾಸಕ ಸಿಎಂ ನಿಂಬಣ್ಣನ್ನವರ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಿತ್ತು.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಧಾರವಾಡ ಜಿಲ್ಲೆಯ ಪ್ರಮುಖ ಕ್ಷೇತ್ರಗಲ್ಲಿ ಕಲಘಟಗಿ ಕ್ಷೇತ್ರವೂ ಒಂದು. ಪ್ರತಿ ಚುನಾವಣೆಯಲ್ಲಿ ಇಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ಕಾಣಬಹುದು. 2018ರಲ್ಲಿ ಬಿಜೆಪಿಯ ಅಭ್ಯರ್ಥಿ ಸಿ ಎಂ ನಿಂಬಣ್ಣನವರ್ ಅವರು, ಅಂದಿನ ಹಾಲಿ ಶಾಸಕ ಕಾಂಗ್ರೆಸ್‌ನ ಸಂತೋಷ್ ಲಾಡ್ ವಿರುದ್ಧ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ 83267 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್‌ಗೆ 57,270 ಮತಗಳು ಬಿದ್ದಿದ್ದವು. ಹಾಗಾಗಿ, ಬಿಜೆಪಿ ಅಭ್ಯರ್ಥಿ 25,997 ಮತಗಳ ಅಂತರದಿಂದ ಗೆದ್ದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜು ಆರ್ ಕಲಘಟಗಿ ಅವರು 4,898 ಮತಗಳನ್ನು ಪಡೆದುಕೊಂಡಿದ್ದರು.