Site icon Vistara News

Road accident | ಟಿಪ್ಪರ್‌ ಡಿಕ್ಕಿಯಾಗಿ ಕನಕಪುರ ತಾಲೂಕು ಹಿರಿಯ ಆರೋಗ್ಯಾಧಿಕಾರಿ ದುರ್ಮರಣ

Kanakapura accident

ರಾಮನಗರ: ಕನಕಪುರ ತಾಲೂಕಿನ ಹಿರಿಯ ಆರೋಗ್ಯಾಧಿಕಾರಿ ಪುಟ್ಟಸ್ವಾಮಿ (೫೬) ಅವರು ಕನಕಪುರದ ಚನ್ನಬಸಪ್ಪನ ಸರ್ಕಲ್‌ನಲ್ಲಿ ನಡೆದ ಅಪಘಾತದಲ್ಲಿ (Road accident) ಮೃತಪಟ್ಟಿದ್ದಾರೆ.

ಪುಟ್ಟಸ್ವಾಮಿ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದು, ಅವರ ಮೇಲೆ ಹಿಂದಿನಿಂದ ಬಂದ ಟಿಪ್ಪರ್‌ ಹರಿದಿದೆ. ಘಟನೆ ನಡೆಯುತ್ತಿದ್ದಂತೆಯೇ ಟಿಪ್ಪರ್‌ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕನಕಪುರ ಪಟ್ಟಣ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ರಸ್ತೆ ಸಂಚಾರ ದಟ್ಟಣೆಯಿಂದ ವಾಹನ ಸವಾರರ ಪರದಾಟ ಮಾಡಬೇಕಾಯಿತು. ಈ ನಡುವೆ ಪುಟ್ಟಸ್ವಾಮಿ ಅವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | Road Accident | ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ; ಹಲವರಿಗೆ ಗಾಯ, 7 ಮಕ್ಕಳ ಸ್ಥಿತಿ ಗಂಭೀರ

Exit mobile version