Site icon Vistara News

Kaamaroopi | ʼಕುದುರೆಮೊಟ್ಟೆʼ ಖ್ಯಾತಿಯ ಸಾಹಿತಿ ಕಾಮರೂಪಿ ಇನ್ನಿಲ್ಲ

kamarupi

ಬೆಂಗಳೂರು: ʼಕುದುರೆಮೊಟ್ಟೆʼ ಕಾದಂಬರಿಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾಗಿದ್ದ, ʼಕಾಮರೂಪಿʼ ಎಂದೇ ಗುರುತಿಸಿಕೊಂಡಿದ್ದ ಎಂ.ಎಸ್. ಪ್ರಭಾಕರ (Kaamaroopi) ಅವರು ಅಸೌಖ್ಯದಿಂದಾಗಿ ಮೃತಪಟ್ಟಿದ್ದಾರೆ.

ಅವರ ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ. ಹುಟ್ಟಿದ್ದು ೧೯೩೬ ನೇ ಇಸವಿಯಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ, ಪಿಎಚ್.ಡಿ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ೧೯೬೨ರಿಂದ ೧೯೬೫ರವರೆಗೆ ಗುವಾಹಟಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿದ್ದರು. ೧೯೭೫ರಿಂದ ೧೯೮೩ರವರೆಗೆ ಎಕನಾಮಿಕ್‌ ಅಂಡ್‌ ಪೊಲಿಟಿಕಲ್‌ ವೀಕ್ಲಿ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ ದಿ ಹಿಂದೂ ಪತ್ರಿಕೆಯಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾದರು. ನಂತರ ಕೋಲಾರದಲ್ಲಿ ನೆಲೆಸಿದ್ದರು.

ಒಂದು ತೊಲ ಪುನುಗು ಮತ್ತು ಇತರ ಕತೆಗಳು ಇವರ ಕಥಾ ಸಂಕಲನ. ಕುದುರೆ ಮೊಟ್ಟೆ, ಅಂಜಿಕಿನ್ಯಾತಕಯ್ಯಾ ಕಾದಂಬರಿಗಳು. ಕವನ ಮತ್ತಿತರ ಬರಹಗಳನ್ನೂ ಬರೆದಿದ್ದಾರೆ.

ಇದನ್ನೂ ಓದಿ | ಸಾಹಿತಿ, ಅನುವಾದಕ ಭಾಲಚಂದ್ರ ಜಯಶೆಟ್ಟಿ ವಿಧಿವಶ

Exit mobile version