ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಮ್ಮ ನೆಲ, ಜಲ ಹಾಗೂ ಸಂಸ್ಕೃತಿ ಬಿಂಬಿಸುವ ಹಾಗೂ ಕನ್ನಡ ಪ್ರೇಮ ವ್ಯಕ್ತಪಡಿಸುವ ಉಡುಗೆಗಳನ್ನು ಧರಿಸಿದ ಸೆಲೆಬ್ರಿಟಿಗಳು ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ನಮ್ಮ ಭಾಷೆಯ ಪ್ರೇಮ ವ್ಯಕ್ತಪಡಿಸುವ ಹಾಗೂ ರಾಜ್ಯೋತ್ಸವಕ್ಕೆ ಹೊಂದುವ ಸ್ಥಳೀಯ ಉಡುಗೆಗಳು, ಸೀರೆಗಳು ಇಲ್ಲವೇ ಸಿಂಪಲ್ ಔಟ್‌ಫಿಟ್‌ಗಳಲ್ಲಿ ಸ್ಯಾಂಡಲ್‌ವುಡ್ ಹಾಗೂ ಫ್ಯಾಷನ್ ಕ್ಷೇತ್ರದ ಸೆಲೆಬ್ರಿಟಿಗಳು ಈ ವಿಶೇಷ ದಿನಕ್ಕೆ ಮೆರಗು ತಂದರು. ಅಷ್ಟು ಮಾತ್ರವಲ್ಲ, ಬಹುತೇಕರು ವಿಡಿಯೋ ಕ್ಲಿಪ್‌ಗಳಲ್ಲೂ ಕಾಣಿಸಿಕೊಂಡು ಕನ್ನಡ ರಾಜ್ಯೋತ್ಸವದ ವಿಶೇಷತೆಯನ್ನು ಸಾರಿದರು.
ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಕನ್ನಡ ರಾಜ್ಯೋತ್ಸವ
ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ರಾಜ್ಯೋತ್ಸವದ ದಿನಕ್ಕೆ ಹೊಂದುವ ಉಡುಗೆಗಳಲ್ಲಿ ಫೋಟೊ ಹಾಗೂ ವಿಡಿಯೋ ಕ್ಲಿಪ್‌ಗಳಲ್ಲಿ ವಿಶೇಷವಾಗಿ ಕಾಣಿಸಿಕೊಂಡು ರೀಲ್ಸ್ ಮಾಡಿ ಸಂಭ್ರಮಿಸಿದರು. ಕೆಲವರು ಕೆಂಪು ಹಾಗೂ ಹಳದಿ ಮಿಶ್ರಿತ ಟ್ರೆಡಿಷನಲ್ ಡಿಸೈನರ್ ಉಡುಗೆಗಳಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರು ಇದಕ್ಕೆ ಹೊಂದುವ ಆಕ್ಸೆಸರೀಸ್‌ಗಳನ್ನು ಮ್ಯಾಚ್ ಮಾಡಿದ್ದರು. ಇನ್ನು ಕೆಲವರು ಕನ್ನಡ ಭಾಷೆ ಕುರಿತ ಟೀಶರ್ಟ್, ಬ್ಲೌಸ್‌ಗಳನ್ನು ಧರಿಸಿ ರಾಜ್ಯ ಪ್ರೇಮ ವ್ಯಕ್ತಪಡಿಸಿದರು.
ಇನ್ನು ಸ್ಯಾಂಡಲ್‌ವುಡ್, ಕಿರುತೆರೆ ನಟರು ಹಾಗೂ ಮಾಡೆಲ್‌ಗಳು ಕುರ್ತಾ ಹಾಗೂ ಪಂಚೆಯಲ್ಲಿ ರಾಜ್ಯೋತ್ಸವ ಆಚರಿಸಿದರು. ಕೆಲವರು ಈ ಉಡುಗೆಯ ಹಳೆಯ ಫೋಟೋಗಳನ್ನೇ ಮತ್ತೊಮ್ಮೆ ಅಪ್‌ಲೋಡ್ ಮಾಡಿ ಅಭಿನಂದಿಸಿದರು.
ಫ್ಯಾಷನ್ ಸೆಲೆಬ್ರಿಟಿಗಳ ಕನ್ನಡ ರಾಜ್ಯೋತ್ಸವ
ಕರ್ನಾಟಕ ಫ್ಯಾಷನ್ ಪ್ರಪಂಚದ ಹಬ್ ಎಂದೇ ಹೆಸರಾಗಿರುವ ನಮ್ಮ ಉದ್ಯಾನನಗರಿಯಲ್ಲಿ ಹಿರಿಯ ಕಿರಿಯ ಮಾಡೆಲ್‌ಗಳು, ಡಿಸೈನರ್‌ಗಳು, ಫ್ಯಾಷಾನಿಸ್ಟಾಗಳು ಈ ವಿಶೇಷ ದಿನಕ್ಕೆ ಹೊಂದುವ ತಮ್ಮದೇ ಆದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡು ರಾಜ್ಯೋತ್ಸವ ಆಚರಿಸಿದರು. ಮಿಸೆಸ್ ಇಂಡಿಯಾ ಡೈರೆಕ್ಟರ್, ಮಿಸೆಸ್ ಏಷಿಯಾ ಇಂಟರ್‌ನ್ಯಾಷನಲ್ ಪ್ರತಿಭಾ ಸೌಂಶಿಮಠ್ ಅವರು ಕೆಂಪು ಹಾಗೂ ಹಳದಿ ಡಿಸೈನರ್‌ವೇರ್ ಧರಿಸಿ ಸಂಭ್ರಮಿಸಿದರು. ಮಾಡೆಲ್ ಧೀಮಂತ್, ವಿನಯ್, ದೀಪ್ತಿ, ಪದ್ಮಪ್ರಿಯಾ, ಮಾಸ್ಟರ್ ಓಂ, ಅನ್ಯಾ ಶೆಟ್ಟಿ, ಅಂಕಿತಾ ಸೇರಿದಂತೆ ಸಾಕಷ್ಟು ಮಾಡೆಲ್‌ಗಳು ಕೂಡ ಸಂಭ್ರಮಿಸಿದರು.
ಸಿಂಪಲ್ ಔಟ್‌ಫಿಟ್‌ಗಳಲ್ಲಿ ಸ್ಯಾಂಡಲ್‌ವುಡ್ ತಾರೆಯರು
ಬಹುತೇಕ ಸ್ಯಾಂಡಲ್‌ವುಡ್ ತಾರೆಯರು ಸಿಂಪಲ್ ಔಟ್‌ಫಿಟ್ ಇಲ್ಲವೇ ಕನ್ನಡ ಬಾವುಟದ ವರ್ಣದ ಶಾಲು ಧರಿಸಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾಷೆಯನ್ನು ಎತ್ತಿ ಹಿಡಿಯುವ ಹಾಗೂ ಸಂಸ್ಕೃತಿ ಬಿಂಬಿಸುವ ಔಟ್‌ಫಿಟ್‌ಗಳ ಫೋಟೊ ಅಪ್‌ಲೋಡ್ ಮಾಡಿ ಅಭಿಮಾನಿಗಳಿಗೆ ವಿಶ್ ಮಾಡಿದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Kannada Sahitya Sammelana | ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ; 20 ಸಮಿತಿ ರಚನೆ