Site icon Vistara News

Kannada Rajyotsava | ಕನ್ನಡ ಸಾಹಿತ್ಯ ಪರಿಷತ್‌ ಪುಸ್ತಕಗಳ ಮಾರಾಟ; ಇಲ್ಲಿವೆ ಆಕರ್ಷಕ ರಿಯಾಯಿತಿ!

Kannada Sahitya Parishat's Dr. Pandappa Lakshmana Hoogara, Dr. H. Vishwanath-M.S. Indira Endowment award Announcemed

ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವದ (Kannada Rajyotsava) ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವಿಶೇಷ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ನವೆಂಬರ್ ತಿಂಗಳಾದ್ಯಂತ ಆಕರ್ಷಕ ರಿಯಾಯಿತಿಯ ದರದಲ್ಲಿ ಪರಿಷತ್‌ ಪ್ರಕಟಣೆಯ ಪುಸ್ತಕಗಳನ್ನು ಮಾರಾಟ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ನವೆಂಬರ್ 1 ರಿಂದ 30ರ ವರೆಗೆ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಕಚೇರಿ ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಆರಂಭಿಸಲಾಗುತ್ತಿದೆ. ಶೇ.10ರಿಂದ ಶೇ.75 ರಿಯಾಯಿತಿ ದರದಲ್ಲಿ ಅಮೂಲ್ಯವಾದ ಪುಸ್ತಕಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕನ್ನಡ ಸಾಹಿತ್ಯ ಇತಿಹಾಸದಲ್ಲಿ ತೀರಾ ಅಪರೂಪವೆನಿಸಿದ ಪುಸ್ತಕಗಳ ಪ್ರಕಟಣೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ಮಾಡುತ್ತಾ ಬಂದಿದ್ದು, ಪರಿಷತ್‌ ಪ್ರಕಟಿಸಿರುವ ಎಲ್ಲ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಾಗಿವೆ. ಕನ್ನಡ ರತ್ನಕೋಶ ಮತ್ತು ಸಂಕ್ಷಿಪ್ತ ಕನ್ನಡ ನಿಘಂಟು, ಸಂಕ್ಷಿಪ್ತ ಕನ್ನಡ ಇಂಗ್ಲಿಷ್ ನಿಘಂಟು, ಬೃಹತ್ ಕನ್ನಡ-ಕನ್ನಡ ನಿಘಂಟು, ಪರೀಕ್ಷೆ ಪುಸ್ತಕಗಳು, ಗದ್ಯಾನುವಾದ, ಶತಮಾನೋತ್ಸವ ಮಾಲಿಕೆ ಪುಸ್ತಕಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಎಲ್ಲ ಸಂಪುಟಗಳು, ಮಹಿಳಾ ಸಾಹಿತ್ಯ ಸಂಪುಟಗಳು, ದಲಿತ ಸಾಹಿತ್ಯ ಸಂಪುಟಗಳು, ಜೀವನ ಚರಿತ್ರೆಗಳು, ಪಿಎಚ್.ಡಿ ಪುಸ್ತಕಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕಗಳು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಿಕೆ ಸಂಚಿಕೆಗಳು ಹಾಗೂ ಇತರ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಿದೆ ಎಂದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಕೋಟಿ ಕಂಠ ಗಾಯನ | ಆಕಾಶದಲ್ಲಿ ಮೊಳಗಿದ ಕನ್ನಡದ ಕಂಠ ಸಿರಿ; ಸ್ಪೈಸ್‌ ಜೆಟ್‌ ಸಿಬ್ಬಂದಿ, ಪ್ರಯಾಣಿಕರಿಂದ ಹಾಡು

Exit mobile version