ಹಾವೇರಿ (ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ): ನಮ್ಮ ಪಾಂಡಿತ್ಯ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಯ ಬೆಳಕು ತರಬೇಕು. ಬುದ್ಧಿವಂತಿಕೆ, ಹೃದಯವಂತಿಕೆಗಿಂತ ಮಿಗಿಲಾಗಿ ಮಾನವೀಯತೆ ಮುಖ್ಯ. ಸಾಹಿತ್ಯದ ಜೊತೆಗೆ ಸಂಸ್ಕಾರ ಬೇಕು ಎಂದು ಜಯದೇವ ಆಸ್ಪತ್ರೆಯ ತಜ್ಞ ವೈದ್ಯ ನಾಡೋಜ ಡಾ.ಸಿ.ಎನ್.ಮಂಜುನಾಥ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಎರಡನೇ ದಿನ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಆಶಯ ಮಾತಗಳನ್ನಾಡಿದರು.
ನಮ್ಮ ಮಕ್ಕಳಿಗೆ ಕನ್ನಡ ಕಲಿಕೆಗೆ ಉತ್ತೇಜನ ನೀಡಬೇಕು. ಭಾಷೆ, ಸಾಹಿತ್ಯ ಬಳಸಿದಷ್ಟೂ ಬೆಳೆಯುತ್ತವೆ. ಜ್ಞಾನಪೀಠ ಪುರಸ್ಕೃತ ಕೃತಿಗಳ ಜೊತೆಗೆ ಕನ್ನಡದ ಪ್ರಮುಖ ಕೃತಿಗಳು ಆಂಗ್ಲಭಾಷೆಗೆ ತರ್ಜುಮೆಯಾದರೆ, ಜಗತ್ತಿಗೆ ಕನ್ನಡ ಭಾಷೆಯ ಶ್ರೀಮಂತಿಕೆಯ ಪರಿಚಯವಾಗುತ್ತದೆ. ನಮ್ಮ ವಿದ್ಯೆ, ಪಾಂಡಿತ್ಯ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತಂದು ಬೆಳಕು ಹರಿಸಬೇಕು. ಸಾಹಿತ್ಯದ ಜೊತೆಗೆ ಸಂಸ್ಕಾರ ಇರಬೇಕು. ಇಲ್ಲವಾದರೆ ಬಂಗಾರದ ಬುಟ್ಟಿಯಲ್ಲಿ ಹಳಸಿದ ಅನ್ನವಿಟ್ಟಂತಾಗುತ್ತದೆ ಎಂದು ನುಡಿದರು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಶಿವರಾಜ ಪಾಟೀಲ, ಶಾಸಕ ನೆಹರು ಓಲೇಕಾರ ಅವರು ಸಾಧಕರನ್ನು ಸನ್ಮಾನಿಸಿದರು.
ಸನ್ಮಾನಿತರು:ನ್ಯಾ.ಅರಳಿ ನಾಗರಾಜ, ಡಾ.ಸಿ.ಎನ್.ಮಂಜುನಾಥ, ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಸಿ.ಎನ್.ಮಂಜುನಾಥ, ಹೊರದೇಶದ ಕನ್ನಡಿಗ ಕತಾರ್‍ನ ಸುಬ್ರಹ್ಮಣ್ಯ ಹೆಬ್ಬಾಗಿಲು, ಚಿತ್ರಕಲಾವಿದ ಬಿಕೆಎಸ್ ವರ್ಮ, ಕನ್ನಡಪರ ಹೋರಾಟಗಾರ ವಾಟಾಳ್ ರಮೇಶ, ಡಾ.ಶಾಂತಾರಾಮ ಪ್ರಭು, ಪಿ.ರವೀಂದ್ರನಾಥ, ಮೋಹನ ಮೆಣಸಿನಕಾಯಿ, ಎಂ.ಎಸ್.ಕೊಟ್ರೇಶ, ವೈಜನಾಥ ಬಿರಾದಾರ, ಅನಂತರಾಜ್, ಎ.ಸಿ.ಪಟ್ಟಣದ, ರಮಾನಂದ ಹಿರೇಜೇವರ್ಗಿ, ಪುಟ್ಟರಂಗಯ್ಯ, ಡಾ.ಕೆ.ಪಿ.ಅಶ್ವಿನಿ, ಡಾ.ಎಚ್.ಎಂ.ವೆಂಕಟಪ್ಪ, ಗಿರಿಜಾ ಶಂಕರ್, ಕಾಳನಹುಂಡಿ ಗುರುಸ್ವಾಮಿ, ರಾಮಣ್ಣ ಕೆಂಚಳ್ಳೇರ, ಡಾ.ಕೆ.ಎಂ.ಕೃಷ್ಣಮೂರ್ತಿ, ವೈ.ಪ್ರಕಾಶ, ಡಾ.ಆರ್.ಕೆ.ಪಾಟೀಲ, ಜಿ.ಎಸ್.ಶಿವಲಿಂಗಪ್ಪ, ಕೆ.ಎಸ್.ರಾಜಣ್ಣ, ಕೆ.ಎ.ದೊಡ್ಡಮನಿ, ಡಾ.ವಾದಿರಾಜ ದೇಶಪಾಂಡೆ, ಎ.ಅಶ್ವತ್ಥರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಯುವಶಕ್ತಿಯನ್ನು ನಂಬಿದೆ ನಮ್ಮ ದೇಶ: ಸ್ವಾಮಿ ನಿರ್ಭಯಾನಂದ