Site icon Vistara News

Kantara movie | ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಅವಮಾನ ಆರೋಪ: ಪ್ರದರ್ಶನ ನಿಲ್ಲಿಸಲು ಒತ್ತಾಯ

kantara movie

ಮಂಗಳೂರು: ಭಾರಿ ಜನಪ್ರಿಯತೆ ಮತ್ತು ಬಾಕ್ಸಾಫೀಸ್‌ ಕಲೆಕ್ಷನ್‌ ಮೂಲಕ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾ ವಿರುದ್ಧ ದಲಿತ ಸಂಘಟನೆ ಅಸಮಾಧಾನ ಹೊರಹಾಕಿದೆ.

ಕಾಂತಾರ ಸಿನಿಮಾದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನು ಕೀಳಾಗಿ ಚಿತ್ರಿಸಲಾಗಿದೆ. ಹೀಗಾಗಿ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ದಲಿತ ಮುಖಂಡ ಲೋಲಾಕ್ಷ ಅವರು ಶುಕ್ರವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಿನಿಮಾ ಪ್ರದರ್ಶನ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಆರೋಪಗಳೇನು?
೧. ದಲಿತ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಮಾಡಲಾಗಿದೆ. ಸೆನ್ಸಾರ್ ಮಂಡಳಿ ಸಿನೆಮಾಗೆ ಸರಿಯಾಗಿ ಕತ್ತರಿ ಪ್ರಯೋಗ ಮಾಡಿಲ್ಲ.
೨. ಸಿನೆಮಾ ದಲಿತ ಮಹಿಳೆಯರಿಗೆ ಹಾಗೂ ಯುವಕರಿಗೆ ಅವಮಾನ ಮಾಡಲಾಗಿದೆ.
೩. ಹೀರೋ ಮೂಲಕ ದೈವಾರಾಧನೆಯನ್ನೂ ವಿಕೃತಗೊಳಿಸಲಾಗಿದೆ.
೪. ಕೀಳು ಮಟ್ಟದ ಭಾಷಾ ಪ್ರಯೋಗದ ಮೂಲಕ ದಲಿತರನ್ನು ಅವಮಾನಿಸಲಾಗಿದೆ.
೫. ಸಂವಿಧಾನದ ಕಾನೂನು ಉಲ್ಲಂಘಿಸಿ ಸಿನೆಮಾದ ಪಾತ್ರಗಳನ್ನು ಸೃಷ್ಟಿಸಲಾಗಿದೆ.
೬. 80ರ ದಶಕದ ಕಥೆ ಇದಾಗಿದ್ದರೂ ನಮ್ಮ ಜಿಲ್ಲೆಯಲ್ಲಿ ಅಂತಹ ಸ್ಥಿತಿ ಇರಲಿಲ್ಲ. 80 ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಲಿತರ ಪರಿಸ್ಥಿತಿ ಸಿನಿಮಾದಂತೆ ಇಲ್ಲ.
೭. ಒಟ್ಟಾರೆ ಶೋಷಿತ ಸಮುದಾಯವನ್ನು ಸಿನಿಮಾದಲ್ಲಿ ಅವಹೇಳನ ಮಾಡಲಾಗಿದೆ.
೮. ಜನರು ಸಾಕಷ್ಟು ಪ್ರಭಾವಿತರಾಗಿರೋ ಸಿನಿಮಾದಿಂದ ತಪ್ಪು ಸಂದೇಶ ಹೋಗಿದೆ. ದಲಿತರು ಅಂದ್ರೆ ಚಾಕರಿ ಮಾಡುವವರು ಎಂಬಂತೆ ಬಿಂಬಿಸಿದ್ದಾರೆ. ಇದನ್ನು ಹೇಳುವ ಧೈರ್ಯ ಇಲ್ಲದೇ ದಲಿತರು ಸುಮ್ಮನಿದ್ದಾರೆ.

ಇದನ್ನೂ ಓದಿ | Kantara Movie | ಪುನೀತ್‌ ಈಗ ದೈವನರ್ತಕ : ವೈರಲ್‌ ಆಗ್ತಿದೆ ಪೋಸ್ಟರ್‌!

Exit mobile version