ಬೆಂಗಳೂರು: ʼಕಾಂತಾರʼ ಸಿನಿಮಾದ ʼವರಾಹರೂಪಂʼ ಹಾಡಿಗೆ ಪಂಜುರ್ಲಿ ದೈವದ ವೇಷ ಧರಿಸಿ ನರ್ತಿಸುತ್ತಿದ್ದ ವಿದ್ಯಾರ್ಥಿಯ ಇದ್ದಕ್ಕಿದ್ದಂತೆ ಮೈಮೇಲೆ ಆವಾಹನೆ ಬಂದವನಂತೆ ವರ್ತಿಸಿದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪಿಯು ಕಾಲೇಜಿನಲ್ಲಿ ಶನಿವಾರ ರಾತ್ರಿ ಆನ್ಯುವಲ್ ಡೇ ಫಂಕ್ಷನ್ ವೇಳೆ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿಯ ವಿಶಾಲ್ ಎಂಬ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷಭೂಷಣ ಧರಿಸಿ ಕಾಂತಾರ ಸಿನಿಮಾದ ʼವರಾಹರೂಪಂʼ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ಹೀಗಾಗಿದೆ.
ಹಾಡಿಗೆ ನರ್ತಿಸುತ್ತಿದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ವೇದಿಕೆಯಿಂದ ಕೆಳಗಿಳಿದು ಹುಚ್ಚು ಆವೇಶದಲ್ಲಿ ನರ್ತಿಸಲು ಆರಂಭಿಸಿದಾಗ ನಾಲ್ಕೈದು ಮಂದಿ ಆತನನ್ನು ಸಮಾಧಾನಪಡಿಸಿದರೂ ಸಾಧ್ಯವಾಗಿಲ್ಲ. ಹೀಗಾಗಿ ಆಯೋಜಕರು ಹಾಡು ನಿಲ್ಲಿಸಿದ್ದಾರೆ. ವಿದ್ಯಾರ್ಥಿಯ ಆರ್ಭಟ ಕಂಡು ಪೋಷಕರು, ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗಳು ಶಾಕ್ ಆಗಿದ್ದಾರೆ.
ಈ ಹಿಂದೆಯೂ ಇಂಥ ಕೆಲವು ಘಟನೆಗಳು ನಡೆದಿದ್ದುದನ್ನು ಸ್ಮರಿಸಿಕೊಳ್ಳಬಹುದು. ಕಾಂತಾರ ಸಿನೆಮಾ ವೀಕ್ಷಣೆಯ ವೇಳೆ ಥಿಯೇಟರ್‌ನಲ್ಲಿ ಕೆಲವರು ಮೈಮೇಲೆ ಆವಾಹನೆ ಬಂದಂತೆ ವರ್ತಿಸಿದ್ದು ವರದಿಯಾಗಿತ್ತು.
Kantara Movie: ಕಾಂತಾರ ಕಥೆ ಹುಟ್ಟಿದ್ದು ಹೇಗೆ? ಪ್ಯಾನ್ ಇಂಡಿಯಾ ಸಿನಿಮಾ ಯಾಕಾಯ್ತು? ಮಾಹಿತಿ ಬಿಚ್ಚಿಟ್ಟ ರಿಷಬ್‌ಇದನ್ನೂ ಓದಿ: