Site icon Vistara News

Karnataka Assembly: ಹಿಂದುತ್ವ-ಗೋಮಾತೆ ಹೆಸರಲ್ಲಿ ಯತ್ನಾಳ್, ಸತ್ಯಸಾರಮಣಿ ಹೆಸರಲ್ಲಿ ಭಾಗೀರಥಿ ಮುರುಳ್ಯ ಪ್ರಮಾಣ

karnataka assembly members oath taking ceremony

#image_title

ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ವಿಧಾನಸಭೆಯಲ್ಲಿ ಪ್ರಮಾಣವಚನ ಬೋಧನೆ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಿಂದುತ್ವ ಹಾಗೂ ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮೇ 24ರೊಳಗೆ ಹೊಸ ವಿಧಾನಸಭೆ ಕಾರ್ಯಾರಂಭ ಮಾಡಬೇಕಾಗಿರುವ ಕಾರಣ ಮೂರು ದಿನದ ವಿಶೇಷ ಅಧಿವೇಶನ ಆಯೋಜಿಸಲಾಗಿದ್ದು, ಸೋಮವಾರದಿಂದ ಚಾಲನೆ ಸಿಕ್ಕಿತು. ಸದನದ ಅತ್ಯಂತ ಹಿರಿಯ ಸದಸ್ಯರಾದ ಆರ್.‌ ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಲಾಯಿತು.

ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದವರೆಲ್ಲರೂ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಸುಳ್ಯ ಶಾಸಕಿಯಾಗಿ ಬಿಜೆಪಿಯ ಭಾಗೀರಥೀ ಮುರುಳ್ಯ ಅವರು “ಕುಲದೇವರು ಸತ್ಯಸಾರಮಣಿ, ಸತ್ಯಪದನಾದಿ ಅಮ್ಮನವರು ಹಾಗೂ ಮತದಾರ”ರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಇಂಗ್ಲಿಷ್‌ ವರ್ಣಮಾಲೆಗೆ ಅನುಗುಣವಾಗಿ ಶಾಸಕರಿಗೆ ಪ್ರಮಾಣವಚನ ಬೋಧಿಸಲಾಯಿತು. ಮೊದಲಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಿದರು. ಭಗವಂತನ ಹೆಸರಿನಲ್ಲಿ ಸಿದ್ದರಾಮಯ್ಯ, ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್‌ ಪ್ರಮಾಣ ಮಾಡಿದರು.

ಸಂವಿಧಾನ ಹೆಸರಲ್ಲಿ ಡಾ.ಜಿ ಪರಮೇಶ್ವರ್, ಕೆ.ಎಚ್ ಮುನಿಯಪ್ಪ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ತಂದೆ-ಮಗ ಶಾಸಕರಾಗಿರುವ ಜಿ.ಟಿ ದೇವೇಗೌಡ – ಹರೀಶ್ ಗೌಡ, ಕೃಷ್ಣಪ್ಪ – ಪ್ರಿಯಾಕೃಷ್ಣ, ಎ.ಮಂಜು – ಮಂಥರ್ ಗೌಡ ಗಮನ ಸೆಳೆದರು.

ಖಾನಾಪುರ ಶಾಸಕ ವಿಠ್ಠಲ್‌ ಹಲಗೇಕರ್‌, ಕೇಸರಿಪೇಟ ತೊಟ್ಟು ವಿಧಾನ ಸಭೆಗೆ ಆಗಮಿಸಿದರು. ಬೆಳಗಾವಿ ಉತ್ತರ ಶಾಸಕ ಅಶೀಫ್ ಸೇಠ್ ಇಂಗ್ಲಿಷ್ ಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಮಾಣವಚನದ ನಂತರ ಅಧಿಕೃತ ಭಾವಚಿತ್ರಕ್ಕಾಗಿ ಶಾಸಕರು ಒಬ್ಬೊಬ್ಬರಾಗಿ ಕ್ಯಾಮೆರಾಕ್ಕೆ ಪೋಸ್‌ ನೀಡಿದರು.

ಪ್ರಮಾಣವಚನದ ನಂತರ ಲಾಂಜ್‌ಗೆ ಆಗಮಿಸಿದ ಡಿ.ಕೆ. ಶಿವಕುಮಾರ್‌, ಅಲ್ಲಿ ನೆರೆದಿದ್ದ ಬಿಜೆಪಿ ಶಾಸಕರೊಂದಿಗೆ ಆತ್ಮೀಯವಾಗಿ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡರು. ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರನ್ನೂ ಡಿ.ಕೆ. ಶಿವಕುಮಾರ್‌ ಆತ್ಮೀಯವಾಗಿ ಮಾತನಾಡಿದರು.

ಇದನ್ನೂ ಓದಿ: Assembly session : 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭ, 2 ದಿನ ಶಾಸಕರ ಪ್ರಮಾಣ

Exit mobile version