Site icon Vistara News

Karnataka Bandh : ಚಿತ್ರರಂಗವನ್ನು ದೂರಬೇಡಿ, ನಾವಿಲ್ಲಿ ನಿಂತರೆ ಸಮಸ್ಯೆ ಬಗೆಹರಿಯುತ್ತಾ? ಶಿವರಾಜಕುಮಾರ್

Shivarajkumar in Karnataka Bandh in film chamber

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water Dispute) ಸಂಬಂಧಪಟ್ಟಂತೆ ಕನ್ನಡ ಚಿತ್ರರಂಗದ ಕಲಾವಿದರು ಒಟ್ಟಾಗಿದ್ದಾರೆ. ಕರ್ನಾಟಕ ಬಂದ್‌ಗೆ (Karnataka Bandh) ಬೆಂಬಲ ಸೂಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (Karnataka Chamber of Commerce) ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಟ ಶಿವರಾಜಕುಮಾರ್‌ (Actor Shivarajkumar) ಭಾಗಿಯಾಗಿ ಕಾವೇರಿ ಪರವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೆ, ಕನ್ನಡ ಪರ ಸಂಘಟನೆಗಳು, ರೈತರು ಹಾಗೂ ಹೋರಾಟಗಾರರಿಗೆ ಕೆಲವು ಹಿತ ವಚನವನ್ನೂ ನೀಡಿದ್ದಾರೆ. ಎಲ್ಲ ವಿಚಾರಕ್ಕೂ, ಹೋರಾಟಕ್ಕೂ ಬರಲಿಲ್ಲ ಎಂದು ಚಿತ್ರರಂಗವನ್ನು (Kannada film industry) ದೂರಬೇಡಿ ಎಂದು ಹೇಳಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಿವರಾಜಕುಮಾರ್‌, ಕಲಾವಿದರು ಬಂದು ಏನ್ ಮಾಡಬೇಕು ಹೇಳಿ? ನಾವು ಬಂದು ಇಲ್ಲಿ ನಿಂತುಕೊಂಡರೆ ಸಮಸ್ಯೆ ಬಗೆಹರಿಯುತ್ತದೆಯೇ? ಇಂಥ ಸಮಸ್ಯೆ ಬಂದಾಗ ಎಲ್ಲ ನಾಯಕರೂ ಕುಳಿತು ಮಾತನಾಡಬೇಕು. ಏನು ಪರಿಹಾರ ಹುಡುಕಬೇಕು? ಯಾವುದರಿಂದ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಅವರು ನಿರ್ಧಾರ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: Karnataka Bandh : ಕೆಪಿಸಿಸಿ ಕಚೇರಿಯಲ್ಲಿ ಸಚಿವ ಜಮೀರ್‌ ಭೇಟಿಯಾದ ಕರವೇ ನಾರಾಯಣ ಗೌಡ; ನೆಟ್ಟಿಗರ ಟೀಕೆ!

ಕನ್ನಡಿಗರು ಎಲ್ಲರನ್ನೂ ಸ್ವಾಗತಿಸುತ್ತೇವೆ. ಪ್ರತಿಯೊಬ್ಬರಿಗೂ ಸಮಸ್ಯೆ ಇದೆ. ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಮಾಡಬೇಕು. ಸಮಸ್ಯೆಯನ್ನು ಎಲ್ಲರೂ ಟಾಲರೇಟ್‌ ಮಾಡಬೇಕು (ತಡೆದುಕೊಳ್ಳಬೇಕು), ಪರಿಹಾರ ಏನು ಎಂಬುದನ್ನು ನೋಡಬೇಕು. ಆಗ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ ಎಂದು ಶಿವರಾಜಕುಮಾರ್‌ ತಿಳಿಸಿದರು.

ನಾವು ಏನೇ ಮಾಡಿದರೂ ಬೇರೊಬ್ಬರಿಗೆ ಹರ್ಟ್ ಆಗಬಾರದು. ನಟ ಸಿದ್ದಾರ್ಥ್ ಅವರಿಗೆ ನಾನು ಈ ಮೂಲಕ ಕ್ಷಮೆ ಕೇಳುತ್ತೇನೆ. ಚಿಕ್ಕು ಚಿತ್ರದ ಪ್ರಚಾರಾರ್ಥ ಅವರು ಸುದ್ದಿಗೋಷ್ಠಿ ಕರೆದಿದ್ದರು. ಆದರೆ, ಅದಕ್ಕೆ ಕರವೇ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಇದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ಶಿವರಾಜಕುಮಾರ್‌ ಹೇಳಿದರು.

ಇಲ್ಲಿಗೆ ಬಂದರೆ ಮಾತ್ರ ಹೋರಾಟವೇ?

ಎಲ್ಲ ಭಾಷೆಯ ಸಿನಿಮಾಗಳನ್ನು ನೋಡೋದು ಕನ್ನಡಿಗರು. ನಾನು ಯಾವಾಗ್ಲೂ ಹೃದಯದಿಂದ ಮಾತನಾಡುತ್ತೇನೆ. ಮೈಂಡ್ ಇಂದ ಮಾತನಾಡುವುದಿಲ್ಲ. ನಾವೂ ಯಾವಾಗಲೂ ಚೆನ್ನಾಗಿರಬೇಕು. ಯಾವುದೇ ಕಲಾವಿದರು ಬರಲಿಲ್ಲ ಅಂತ ನಿಂದಿಸಬೇಡಿ. ಒಳ್ಳೇ ಮನಸ್ಸಿನಿಂದ ಹೋರಾಟ ಮಾಡಿ. ಬಂದರೆ ಮಾತ್ರ ಹೋರಾಟವಾ? ನಾವು ಎಲ್ಲರನ್ನೂ ಪ್ರೀತಿಸಬೇಕು. ನಮಗೆ ಸ್ಟಾರ್‌ಗಿರಿ ಕೊಟ್ಟಿದ್ದೇ ನೀವು. ನಂಬಿಕೆ, ವಿಶ್ವಾಸ ಬೇಕು. ನಾವು ಯಾವತ್ತೂ ಜತಗೆ ಇರುತ್ತೇವೆ. ಇದ್ದೇವೆ ಎಂದು ಹೇಳಿದರು.

ಕಾವೇರಿ ತಾಯಿಗೆ ನೋವಾಗಿದೆ. ಅಲ್ಲೂ ಹೋಗಬೇಕು, ಇಲ್ಲೂ ಇರಬೇಕು. ಕಲಾವಿದರು ಬಂದು ಏನ್ ಮಾಡಬೇಕು ಹೇಳಿ? ಸಮಸ್ಯೆ ಬಗೆಹರಿಯೋದು ಮುಖ್ಯ ಇಲ್ಲಿ. ರೈತ ಅನ್ನೋದು ಕಾಮನ್ ಪದ. ಎಲ್ಲ ರೈತರು ಒಂದೇ ಅಲ್ವಾ? ನ್ಯಾಯಾಲಯದಲ್ಲಿ ಈ ಸಮಸ್ಯೆ ಬಗೆಹರಿಯಬೇಕು. ಗಲಾಟೆ ಮಾಡಿದರೆ ಏನೂ ಆಗಲ್ಲ. ಒಬ್ಬ ತಮಿಳು ನಟನಿಗೆ ಗುರುವಾರ ಅವಮಾನವಾಗಿದೆ. ಯಾರು ಯಾಕೆ ಮಾಡುತ್ತಾರೆ? ಸಮಸ್ಯೆಯಿಂದ ಆಚೆ ಬರೋದು ಈಗ ಪ್ರಸ್ತುತವಾಗಿದೆ. ಇನ್ನೊಬ್ಬರಿಗೆ ಹರ್ಟ್ ಮಾಡಬಾರದು. ಆಗ ಹೋರಾಟಕ್ಕೆ ಮರ್ಯಾದೆ ಇರಲ್ಲ ಎಂದು ಶಿವರಾಜಕುಮಾರ್‌ ಹೇಳಿದರು.

ಇದನ್ನೂ ಓದಿ : Karnataka Bandh : ಸಚಿವ ಜಮೀರ್‌ ನಿಂಬೆ ಹಣ್ಣು ಕೊಟ್ಟರು ಎಂದ ಕರವೇ ನಾರಾಯಣ ಗೌಡ; ನಾಯಕತ್ವಕ್ಕಾಗಿ ಮುನಿಸು!

ಇದೇ ವೇಳೆ ನಟರಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ದ್ರುವಾ ಸರ್ಜಾ, ವಿಜಯ್‌ ರಾಘವೇಂದ್ರ, ಶ್ರೀಮುರುಳಿ, ವಸಿಷ್ಠ ಸಿಂಹ, ಶೃತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Exit mobile version