Site icon Vistara News

Karnataka Bandh: ಸಿಎಂ ಪ್ರತಿಕೃತಿ ದಹನ, ಬಿಸ್ಲೇರಿ ನೀರಲ್ಲೇ ಸ್ನಾನ, ಸಂಸದರ ಫೋಟೊಗಳಿಗೆ ಪಿಂಡ ಪ್ರದಾನ!

Karnataka Bandh

Karnataka Bandh: Protest Across state, CM Siddaramaiah Replica Set Ablazed

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ರಾಜ್ಯ ಬಂದ್‌ಗೆ (Karnataka Bandh) ಬಹುತೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಕನ್ನಡ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ. ಹಾಗೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹನ, ತಮಟೆ ಚಳವಳಿ, ಸಂಸದರ ಫೋಟೊಗಳಿಗೆ ಪಿಂಡ ಪ್ರದಾನ ಸೇರಿ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಸಂಸದರಿಗೆ ಪಿಂಡ ಪ್ರದಾನ

ಗದಗದಲ್ಲಿ ಕನ್ನಡ ಸಂಘಟನೆಗಳು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಕೊಟ್ಟು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದಾದ ಬಳಿಕ ಕರ್ನಾಟಕದ 28 ಸಂಸದರ ಭಾವಚಿತ್ರಗಳಿಗೆ ಪಿಂಡಪ್ರದಾನ ಮಾಡಿ, ಪೂಜೆ ನೆರವೇರಿಸುವ ಮೂಲಕ ತಮ್ಮ ಬೇಗುದಿಯನ್ನು ಹೊರಹಾಕಿದರು. ಭಾವಪೂರ್ಣ ಶ್ರದ್ಧಾಂಜಲಿ ಎಂಬ ಬ್ಯಾನರ್‌ನಲ್ಲಿ ಸಂಸದರ ಫೋಟೊಗಳು ಇದ್ದವು. ಸಂಸದರು ಸತ್ತರಲ್ಲೋ ಎಂದು ಬಾಯಿ ಬಡಿದುಕೊಂಡು ಶ್ರದ್ಧಾಂಜಲಿ ಸಲ್ಲಿಸಿದರು.

ತಮಟೆ ಚಳವಳಿ

ಬಿಸ್ಲೇರಿ ನೀರಿನಲ್ಲಿ ಸ್ನಾನ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾಕಾರರು ಬಿಸ್ಲೇರಿ ನೀರಿನಲ್ಲಿ ಸ್ನಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. “ಕಾವೇರಿ ಒಡಲು ಬರಿದಾಗಿದೆ. ಅಣೆಕಟ್ಟೆಯಲ್ಲಿ ಒಂದು ನೀರಿಲ್ಲದಂತಾಗಿದೆ. ಹಾಗಾಗಿ, ಜನರ ಪಾಡು ಬಿಸ್ಲೇರಿ ನೀರಿನಲ್ಲಿ ಸ್ನಾನ ಮಾಡುವಂತಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹನ

ಮತ್ತೊಂದೆಡೆ, ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ: Karnataka Bandh: ಟೈರ್‌ಗೆ ಬೆಂಕಿ, ಸಿಎಂ ಸ್ಟಾಲಿನ್‌ ಫೋಟೊಗೆ ತಿಥಿ ಕಾರ್ಯ; ಕಾವೇರಿಗಾಗಿ ಕೆರಳಿದ ಕರುನಾಡು!

Exit mobile version