ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ 2023-24ನೇ ಸಾಲಿನ ಬಜೆಟ್‌ನಲ್ಲಿ (Karnataka Budget 2023) ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುಕೂಲವಾಗುವಂತೆ ಸಂಬಂಧಿತ ಇಲಾಖೆಗಳಿಗೆ ಹೆಚ್ಚುವರಿ ಅನುದಾನವನ್ನು ಘೋಷಿಸಲಾಗಿದೆ.
ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ನಿಭಾಯಿಸಬೇಕಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ರೂ. ನಿಗದಿ ಮಾಡಲಾಗಿದೆ. ಇದು ಕಳೆದ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಇದ್ದ 5676 ಕೋಟಿಗಿಂತ 19000 ಕೋಟಿ ಹೆಚ್ಚಾಗಿದೆ.
ಪ್ರತಿ ಮನೆಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಯನ್ನು ನಿಭಾಯಿಸಬೇಕಾಗಿರುವ ಇಂಧನ ಇಲಾಖೆಗೆ 22,773 ಕೋಟಿ ರೂ. ನೀಡಲಾಗಿದೆ. ಹಿಂದಿನ ಬಜೆಟ್‌ನಲ್ಲಿ ಇದು 13803 ಕೋಟಿ ರೂ. ಇತ್ತು.
ಇನ್ನು ಅನ್ನಭಾಗ್ಯ ಯೋಜನೆಯ ಹೊಣೆ ಹೊತ್ತಿರುವ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ 10,460 ಕೋಟಿ ನೀಡಲಾಗಿದೆ. ಕಳೆದ ಬಜೆಟ್‌ನಲ್ಲಿ ಇದು 4600 ಕೋಟಿ ರೂ. ಆಗಿತ್ತು.
ಇದನ್ನೂ ಓದಿ: Karnataka Budget 2023: ಸರ್ವರಿಗೂ ಸಮಬಾಳು; ಸರ್ವರಿಗೂ ತೆರಿಗೆ ಗೋಳು; ಸಿದ್ದು ಬಜೆಟ್‌ನ ಲೈವ್ ಮಾಹಿತಿ ಇಲ್ಲಿದೆ
ಸಿದ್ದರಾಮಯ್ಯ ಅವರು ಘೋಷಿಸಿದ ಅನುದಾನ ಹಂಚಿಕೆ ವಿವರ ಹೀಗಿದೆ
(ಆವರಣದಲ್ಲಿ ಹಿಂದಿನ ಬೊಮ್ಮಾಯಿ ಬಜೆಟ್‌ನಲ್ಲಿ ನಿಗದಿ ಮಾಡಿದ್ದ ಮೊತ್ತ)
ಶಿಕ್ಷಣ – 37,587 ಕೋಟಿ (37960 ಕೋಟಿ)
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 24,166 ಕೋಟಿ (5676 ಕೋಟಿ)
ಇಂಧನ – 22,773 ಕೋಟಿ (13803 ಕೋಟಿ ರೂ.)
ನೀರಾವರಿ – 19,044 ಕೋಟಿ (22,854 ಕೋಟಿ ರೂ.)
ಗ್ರಾಮೀಣಾಭಿವೃದ್ಧಿ – 18,038 ಕೋಟಿ (20494 ಕೋಟಿ ರೂ)
ಒಳಾಡಳಿತ ಮತ್ತು ಸಾರಿಗೆ – 16,638 ಕೋಟಿ (14,509 ಕೋಟಿ ರೂ.)
ಕಂದಾಯ – 16,167 ಕೋಟಿ (15,943 ಕೋಟಿ ರೂ.)
ಆರೋಗ್ಯ – 14,950 ಕೋಟಿ (15,151 ಕೋಟಿ ರೂ.)
ಸಮಾಜ ಕಲ್ಯಾಣ – 11,173 ಕೋಟಿ (11,163)
ಆಹಾರ ಮತ್ತು ನಾಗರೀಕ ಪೂರೈಕೆ – 10,460 ಕೋಟಿ (4600 ಕೋಟಿ ರೂ.)
ಲೋಕೋಪಯೋಗಿ – 10,143 ಕೋಟಿ (10,741 ಕೋಟಿ ರೂ.)
ಕೃಷಿ – 5,860 ಕೋಟಿ (9456 ಕೋಟಿ ರೂ.)
ಪಶುಸಂಗೋಪನೆ ಮತ್ತು ಮೀನುಗಾರಿಕೆ – 3,024 ಕೋಟಿ
ಇತರೆ – 1,09,639 ಕೋಟಿ