ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಾರಿ ಬಜೆಟ್ (Karnataka Budget 2024) ಮಂಡಿಸಿದ್ದಾರೆ. ಗ್ಯಾರಂಟಿ ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು, ಸಿದ್ದರಾಮಯ್ಯ (Siddaramaiah) ಅವರು ಕೃಷಿಕರು, ಮಹಿಳೆಯರು, ಹಿಂದುಳಿದವರು ಸೇರಿ ಸರ್ವರ ಏಳಿಗೆಗೆ ಆದ್ಯತೆ ನೀಡಿದ್ದಾರೆ. ಕರ್ನಾಟಕ ಬಜೆಟ್‌ನ ಕ್ಷಣಕ್ಷಣದ ಮಾಹಿತಿ (Karnataka Budget 2024 Live Updates) ಇಲ್ಲಿ ಲಭ್ಯ ಇದೆ.
ಸಿದ್ದರಾಮಯ್ಯ ಭಾಷಣದ ವೇಳೆ ಪ್ರತಿಪಕ್ಷಗಳ ಗಲಾಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ವೇಳೆ ಪ್ರತಿಪಕ್ಷಗಳು ಗಲಾಟೆ ಆರಂಭಿಸಿವೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರ ಆರೋಪಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆಯ ಮಧ್ಯೆಯೇ ಸಿದ್ದರಾಮಯ್ಯ ಅವರು ಬಜೆಟ್ ಭಾಷಣ ಮುಂದುವರಿಸಿದರು.
ಸಿದ್ದು ಬಜೆಟ್‌ನ ಪ್ರಮುಖ ಘೋಷಣೆ
* ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲು
* ರೈತ ಮಹಿಳೆಯರ ಹೈನುಗಾರಿಕೆಗೆ ಶೇ.6ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ
* ಮೀನುಗಾರಿಕೆ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಮೀಸಲು
ರೈತರಿಗೆ ಸಿದ್ದರಾಮಯ್ಯ ಬಂಪರ್
* ರೈತ ಸಮೃದ್ಧಿ ಯೋಜನೆ ಘೋಷಣೆ
* ಒಂದೇ ಸೂರಿನಡಿ ತೋಟಗಾರಿಕೆ ಉತ್ಪನ್ನ ಮಾರಾಟ
* ಕಿಸಾನ್ ಮಾಲ್‌ಗಳ ಮೂಲಕ ತೋಟಗಾರಿಕೆ ಉತ್ಪನ್ನ ಮಾರಾಟ
* 5 ಸಾವಿರ ಸಣ್ಣ ಸರೋವರಗಳ ನಿರ್ಮಾಣಕ್ಕೆ ಕ್ರಮ, ಹನಿ ನೀರಾವರಿಗೆ ಆದ್ಯತೆ
ರೈತ ಸಮೃದ್ಧಿ ಯೋಜನೆ ಘೋಷಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಕಲ್ಯಾಣಕ್ಕಾಗಿ ಪ್ರಮುಖ ಯೋಜನೆ ಘೋಷಿಸಿದರು. ರೈತರ ಸಮಗ್ರ ಏಳಿಗೆಗಾಗಿ ರೈತ ಸಮೃದ್ಧಿ ಯೋಜನೆಯನ್ನು ಸಿದ್ದರಾಮಯ್ಯ ಘೋಷಿಸಿದರು. ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿಯನ್ನು ಕೂಡ ಸಿದ್ದರಾಮಯ್ಯ ಮಂಜೂರು ಮಾಡಿದರು. ಒಂದೇ ಸೂರಿನ ಅಡಿಯಲ್ಲಿ ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೂ ರಾಜ್ಯ ಸರ್ಕಾರ ಅನುದಾನ ಮೀಸಲಿಟ್ಟಿದೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರವು ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡಿದೆ. ಆದರೆ, ಕೇಂದ್ರ ಸರ್ಕಾರವು ಸಂಪತ್ತಿನ ಸಮಾನ ಹಂಚಿಕೆ ಮಾಡದೆ, ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದರು.