Site icon Vistara News

Karnataka Budget 2024 : ಸಿದ್ದರಾಮಯ್ಯ ಬಜೆಟ್​ ಎಕ್ಸ್​ ಟ್ರೆಂಡಿಂಗ್​ನಲ್ಲಿ ನಂಬರ್​ 1

Twitter trending

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ (Karnataka Budget 2024) ಎಕ್ಸ್​​ (ಹಿಂದಿನ ಟ್ವಿಟರ್​) ನಂಬರ್ ಒನ್​ ಸ್ಥಾನ ಪಡೆದುಕೊಂಡಿತ್ತು. ಬಜೆಟ್ ಮಂಡನೆ ಆರಂಭಗೊಳ್ಳುತ್ತಿದ್ದಂತೆ ಈ ವಿಷಯದ ಮೇಲೆ ಹೆಚ್ಚು ಹುಡುಕಾಟಗಳು ಹಾಗೂ ಟ್ವೀಟ್​ಗಳು ಬಂದ ಕಾರಣ ಟ್ರೆಂಡ್ ಆಯಿತು.

ಶುಕ್ರವಾರ ಬೆಳಗ್ಗೆ 10.15 ನಿಮಿಷಕ್ಕೆ ಸಿದ್ದರಾಮಯ್ಯ ಅವರು ಬಜೆಟ್​ ಓದಲು ಆರಂಭ ಮಾಡುತ್ತಿದ್ದಂತೆ ಆ ಬಗ್ಗೆ ಹಲವಾರ ಪೋಸ್ಟ್​​ಗಳು ಪ್ರಕಟಗೊಂಡವು. ಕಾಂಗ್ರೆಸ್ ಪಕ್ಷ ಪರವಾಗಿ ಎಕ್ಸ್​ ಮಾಡಿದರೆ ಬಿಜೆಪಿ ವಿರೋಧದ ಪೋಸ್ಟ್​ಗಳನ್ನು ಹಾಕಿದರು. ಹೀಗಾಗಿ #NammaBudget2024 ಎಂಬ ಟ್ಯಾಗ್ ಮೇಲೆ 1897 ಪೋಸ್ಟ್​​ಗಳು ಪ್ರಕಟಗೊಂಡವು. ಹೀಗಾಗಿ ಅದಾಗಲೇ ಟ್ರೆಂಡ್​ನಲ್ಲಿದ್ದ #DemocracyUnderAttack, #HONORX9BONAmazon ಎಂಬ ಟ್ಯಾಗ್​ಗಳನ್ನು ಮೀರಿಸಿ ನಂಬರ್ ಒನ್​ ಸ್ಥಾನ ಪಡೆದುಕೊಂಡಿತು. ಈ ಮೂಲಕ ಸಿದ್ದರಾಮಯ್ಯ ಬಜೆಟ್​ ರಾಷ್ಟ್ರಮಟ್ಟದಲ್ಲ ನಂಬರ್ ಒನ್​ ಸ್ಥಾನ ಪಡೆಯಿತು.

ಹಲವಾರು ಪೋಸ್ಟ್​ಗಳು ಏಕಕಾಲಕ್ಕೆ ಪೋಸ್ಟ್​ ಆದರೆ ಎಕ್ಸ್​ನಲ್ಲಿ ಟ್ರೆಂಡ್​ ಆಗುತ್ತದೆ. ಹೀಗಾಗಿ ಪ್ರತಿಬಾರಿಯೂ ದೇಶದಲ್ಲಿ ಏನಾದರೂ ದೊಡ್ಡ ಬೆಳವಣಿಗೆಗಳು ನಡೆದರೆ ಎಕ್ಸ್​​ನಲ್ಲಿ ಟ್ರೆಂಡ್​ ಆಗುತ್ತದೆ.

ಜಿಎಸ್​​ಟಿ ಸಂಗ್ರಹದಲ್ಲಿ ಶೇ. 14ರಷ್ಟು ಪ್ರಗತಿ; ಸಂಗ್ರಹವಾದ ಮೊತ್ತ ಎಷ್ಟು ಗೊತ್ತೇ?

2023-24ರಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗೂ 58,180 ಕೋಟಿ ರೂ.ಗಳ SGST ತೆರಿಗೆ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆಯಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರ 2024-25ನೇ ವರ್ಷದ ರಾಜ್ಯ ಬಜೆಟ್​ನಲ್ಲಿ (Karnataka Budget 2024) ಘೋಷಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಜಿ.ಎಸ್.ಟಿ ಮೇಲ್ಮನವಿ ನ್ಯಾಯಮಂಡಳಿಯ ಎರಡು ರಾಜ್ಯ ಪೀಠಗಳನ್ನು ರಚಿಸಲಾಗುವುದು ಮತ್ತು ಕಾರ್ಯಗತಗೊಳಿಸಲಾಗುವುದು. ಇದು ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸಲು ಸಹಾಯವಾಗುತ್ತದೆ ಎಂದು ಸಿಎಂ ಬಜೆಟ್​ನಲ್ಲಿ ಮಂಡಿಸಿದರು.

ಇಲಾಖೆಯು, ಗ್ರಾಹಕ ಸಂವೇದಿ ಜಿ.ಎಸ್.ಟಿ ಡೇಟಾಬೇಸ್ ಮ್ಯಾನೇಜ್ಮೆಂಟ್ ಮತ್ತು ಕೃತಕ ಬುದ್ಧಿಮತ್ತೆ ಚಾಲಿತ (ಎಐ) ವಿಶ್ಲೇಷಣಾತ್ಮಕ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ತೆರಿಗೆ ಕಾನೂನು ಮತ್ತು ತಾಂತ್ರಿಕ ಪರಿಣಿತಿ ಹೊಂದಲು ಹಾಗೂ ಅವರಲ್ಲಿ ವಿಶ್ಲೇಷಣಾತ್ಮಕ ದೃಷ್ಟಿಕೋನ ಅಭಿವೃದ್ಧಿಪಡಿಸಲು ಇ-ತರಬೇತಿ ನೀಡಲಿದೆ ಎಂದು ಬಜೆಟ್​ನಲ್ಲಿ ಮಂಡಿಸಿದ್ದಾರೆ.

ಇದನ್ನೂ ಓದಿ : Karnataka Budget 2024 : ಮಹಿಳೆಯರೇ ನಡೆಸುವ 50 ಕೆಫೆ ಸಂಜೀವಿನಿ ಸ್ಥಾಪನೆ; ಏನಿದು ಸ್ಪೆಷಲ್‌ ಫುಡ್‌ ಜಾಯಿಂಟ್‌?

2024-25ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿಯನ್ನು 1,10,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ನೋಂದಣಿ ಮತ್ತು ಮುದ್ರಾಂಕ

ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ನಮ್ಮ ಸರ್ಕಾರವು 2023-24ರಲ್ಲಿ ಪರಿಷ್ಕರಣೆ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದ ಜನವರಿ ತಿಂಗಳ ಅಂತ್ಯದವರೆಗೆ 15,692 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯಾಗಿದ್ದು, ಶೇ.10ರಷ್ಟು ಬೆಳವಣಿಗೆ ಹೊಂದಿದೆ ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.

2024-25ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 26,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ಬಿಯರ್​ ರೇಟ್​​ ಸ್ಲ್ಯಾಬ್​ಗಳ ಪರಿಷ್ಕರಣೆ

ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML ಹಾಗೂ ಬಿಯರ್​ನ ಸ್ಲಾಬ್ಗಳನ್ನು ಪರಿಷ್ಕರಿಸಲಾಗುವುದು. ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿಯನ್ನು ನಿಗದಿಪಡಿಸಲಾಗುವುದು ಹಾಗೂ ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು ಎಂದು ಬಜೆಟ್​ನಲ್ಲಿ ಹೇಳಲಾಗಿದೆ.

Exit mobile version