Site icon Vistara News

ಸಂಪುಟ ಸಭೆ ನಿರ್ಧಾರ: ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ನಿಶ್ಚಿತ; ʼಬಿಜೆಪಿʼ ಪಠ್ಯ ತೆಗೆಯುವುದು ಖಚಿತ

#image_title

ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ವಿವಿಧ ವಿಚಾರಗಳನ್ನು ಇರಿಸಿಕೊಂಡು ನಡೆದ ಮೊದಲ ಸಂಪುಟ ಸಭೆಯಲ್ಲಿ ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಒಟ್ಟು 17 ವಿಷಯಗಳಲ್ಲಿ ಚರ್ಚೆ ನಡೆಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ, ಶಾಲೆಗಳಲ್ಲಿ ನಾಡಗೀತೆ ಹಾಗೂ ರಾಷ್ಟ್ರಗೀತೆ ಜತೆಗೆ ಸಂವಿಧಾನದ ಪೀಠೀಕೆ ಓದುವುದನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ.

ರಾಜ್ಯ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಎರಡನೇ ಸಂಪುಟ ಸಭೆಯಲ್ಲಿ ಸಂಪೂರ್ಣ ಐದು ಗ್ಯಾರಂಟಿಗಳ ಅನುಷ್ಠಾನವೇ ಚರ್ಚೆಯಾಗಿತ್ತು. ಈ ಬಾರಿ ವಿವಿಧ ವಿಚಾರಗಳನ್ನು ಪರಿಗಣಿಸಲಾಗಿದೆ.

ಸಂಪುಟದ ಪ್ರಮುಖ ನಿರ್ಧಾರಗಳು:

  1. ಕರ್ನಾಟಕ ಹೈಕೋರ್ಟ್ ಆಡಳಿತಾತ್ಮಕ ವೆಚ್ಚ ಹೆಚ್ಚು ಮಾಡಲು ತೀರ್ಮಾನ
  2. ಕೆಪಿಎಸ್‌ಸಿ ಸದಸ್ಯರ ನೇಮಕ ಮಾಡಲು ಸಿಎಂಗೆ ಪರಮಾಧಿಕಾರ. ಈಗ 3 ಸದಸ್ಯ ಸ್ಥಾನ ಖಾಲಿ ಇದೆ
  3. ಬೆಂಗಳೂರು ಟೆಕ್ ಸಮಿಟ್‌ ಆಯೋಜಿಸಲು ತೀರ್ಮಾನ. ಇದಕ್ಕಾಗಿ 17.98 ಕೋಟಿ ರೂ. ಬಿಡುಗಡೆಗೆ ಅನುಮತಿ
  4. ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಅನುಮತಿ. ಇದಕ್ಕಾಗಿ 1,081 ಕೋಟಿ ರೂ. ಕೊಡಲು ಒಪ್ಪಿಗೆ
  5. ಶಾಸಕರ ಅನರ್ಹ ಕಾಯಿದೆಯನ್ನ ತಿದ್ದುಪಡಿ ಮಾಡಲು ಒಪ್ಪಿಗೆ. ಲೀಗಲ್ ಅಡ್ವೈಸರ್ ಆ ಸಮಿತಿಯಿಂದ ಹೊರಗಿಡಲು ತೀರ್ಮಾನ
  6. ಎಲ್ಲ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದಕ್ಕೆ ಅಸ್ತು. ರಾಷ್ಟ್ರಗೀತೆ ಮತ್ತು ನಾಡಗೀತೆ ಜತೆಗೆ ಇದನ್ನೂ ಓದಬೇಕು ಎಂದು ನಿರ್ಧಾರ ಮಾಡಲಾಗಿದೆ
  7. ಸಾರಿಗೆ ಇಲಾಖೆಗೆ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ವೆಹಿಕಲ್ ತೆಗೆದುಕೊಳ್ಳಲು 28.13 ಕೋಟಿ ರೂ. ಕೊಡಲು ತೀರ್ಮಾನ.
  8. ಸಾರಿಗೆ ನೌಕರರಿಗೆ ಶೇಕಡಾ 15 ರಷ್ಟು ವೇತನ ಹೆಚ್ಚಳ. ಏಪ್ರಿಲ್ ತಿಂಗಳಿಂದ ಅನ್ವಯ ಆಗುವಂತೆ ತೀರ್ಮಾನ
  9. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಪುಸ್ತಕದಲ್ಲಿ ಪಠ್ಯಕ್ರಮ ಬದಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ
  10. ಕೃಷಿ ಇಲಾಖೆಯಿಂದ, ಬಿಜೆಪಿ ಅವಧೀಯಲ್ಲಿ ತಂದಿದ್ದ ಎಪಿಎಂಸಿ ಕಾನೂನು ವಾಪಸು ಪಡೆಯಲು ತೀರ್ಮಾನ

ಕೇಂದ್ರ ಸರ್ಕಾರ ನಮಗೆ ಉಚಿತವಾಗಿ ಕೊಡ್ತಿಲ್ಲ
ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡಲು ಹಿಂದೇಟು ಹಾಕುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ, ನಾವು ದುಡ್ಡು ಕೊಡ್ತೀವಿ ಅಂದ್ರು ಕೊಡಲಿಲ್ಲ. ಕೇಂದ್ರ ಸರ್ಕಾರ ರಾಜಕೀಯ ಮಾಡಿದೆ. ಕೇಂದ್ರದ ನಿರ್ಧಾರವನ್ನ ಖಂಡಿಸುತ್ತೇನೆ. ಯುಪಿಎ ಸರ್ಕಾರ ಯಾವತ್ತೂ ಸಹ ಈ ರೀತಿ ನಡೆದುಕೊಂಡಿಲ್ಲ. ನಾವು ಗ್ಯಾರೆಂಟಿ ಘೋಷಣೆ ಮಾಡಿದ್ದೇವೆ, ಪಕ್ಕದ ರಾಜ್ಯಗಳಿಂದ ಕೊಂಡು ಜನರಿಗೆ ಕೊಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Education News: ಇನ್ನುಮುಂದೆ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಓದುವುದು ಕಡ್ಡಾಯ

Exit mobile version