ಬೆಂಗಳೂರು: ಕರ್ನಾಟಕ ಸಚಿವ ಸಂಪುಟದ ಖಾತೆಗಳ ಹಂಚಿಕೆ ರಾಜ್ಯಪಾಲರ ಅಂಕಿತ ಪಡೆದಿದ್ದು, ಅಧಿಕೃತವಾಗಿ ಜಾರಿಯಾಗಿದೆ. ಇದೀಗ ಜಿಲ್ಲಾ ಉಸ್ತುವಾರಿಗೆ ಸಚಿವರು ಹಾಗೂ ನಡುವೆ ಪೈಪೋಟಿ ಆರಂಭವಾಗಿದೆ.
ಇಬ್ಬಿಬ್ಬರು ಸಚಿವರಾಗಿರುವ ಜಿಲ್ಲೆಯಲ್ಲಿ ಪ್ರಬಲ ಪೈಪೋಟಿ ಇದೆ. ಬೆಂಗಳೂರು 6 ಸಚಿವ ಸ್ಥಾನಗಳನ್ನು ಪಡೆದಿದ್ದು, ಇಲ್ಲಿ ಉಸ್ತುವಾರಿ ಪಡೆಯಲು ಪ್ರಬಲ ಪೈಪೋಟಿ ಕಂಡುಬಂದಿದೆ. ಡಿ.ಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್ ನಡುವೆ ಪೈಪೋಟಿ ಇದೆ. ರಾಮನಗರದ ಜೊತೆಗೆ ಬೆಂಗಳೂರು ಉಸ್ತುವಾರಿ ಮೇಲೆ ಡಿ.ಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ. ಬಹುತೇಕ ಬೆಂಗಳೂರು ನಗರದ ಉಸ್ತುವಾರಿಯನ್ನು ಡಿಕೆಶಿ ಪಡೆಯಲಿದ್ದಾರೆ.
ಮೈಸೂರು ಜಿಲ್ಲೆ ಉಸ್ತುವಾರಿ ಮೇಲೆ ಎಚ್.ಸಿ ಮಹಾದೇವಪ್ಪ ಹಾಗೂ ಕೆ. ವೆಂಕಟೇಶ್, ವಿಜಯಪುರ ಮೇಲೆ ಎಂ.ಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲ್, ಕಲಬುರಗಿ ಮೇಲೆ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣುಪ್ರಕಾಶ್ ಪಾಟೀಲ್ ಹಕ್ಕು ಸಾಧಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಮೇಲೆ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್, ತುಮಕೂರು ಮೇಲೆ ಕೆ.ಎನ್ ರಾಜಣ್ಣ ಹಾಗೂ ಡಾ.ಜಿ ಪರಮೇಶ್ವರ್, ಬೀದರ್ ಮೇಲೆ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್ ಕಣ್ಣಿಟ್ಟಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಕೆ.ಎಚ್ ಮುನಿಯಪ್ಪ ಹಾಗೂ ಕೃಷ್ಣಬೈರೇಗೌಡ ಪೈಪೋಟಿ ನಡೆಸಿದ್ದಾರೆ. ಇಬ್ಬರು ಬೆಂಗಳೂರು ಜಿಲ್ಲಾ ಕೋಟಾದಡಿ ಇದ್ದರೂ ಸಹ ಕೋಲಾರ ಉಸ್ತುವಾರಿ ಮೇಲೆ ಅವರ ಕಣ್ಣು ಇದೆ.
ಸಿಂಗಲ್ ಸಚಿವರನ್ನು ಪಡೆದ ಜಿಲ್ಲೆಗಳು ಈ ಕೆಳಗಿನಂತಿವೆ. ಇಲ್ಲಿ ಈ ಸಚಿವರಿಗೆ ಬಹುತೇಕ ಉಸ್ತುವಾರಿ ಖಚಿತ.
ಗದಗ – ಎಚ್. ಕೆ ಪಾಟೀಲ್
ಮಂಡ್ಯ – ಚಲುವರಾಯಸ್ವಾಮಿ
ಯಾದಗಿರಿ- ಶರಣಬಸವಪ್ಪ ದರ್ಶನಾಪುರ
ಬಾಗಲಕೋಟೆ – ಆರ್.ಬಿ ತಿಮ್ಮಾಪುರ
ದಾವಣಗೆರೆ – ಎಸ್.ಎಸ್ ಮಲ್ಲಿಕಾರ್ಜುನ
ಕೊಪ್ಪಳ – ಶಿವರಾಜ್ ತಂಗಡಗಿ
ಉತ್ತರ ಕನ್ನಡ- ಮಂಕಾಳ ವೈದ್ಯ
ಚಿತ್ರದುರ್ಗ – ಡಿ. ಸುಧಾಕರ್
ಧಾರವಾಡ – ಸಂತೋಷ ಲಾಡ್
ರಾಯಚೂರು – ಎನ್.ಎಸ್ ಬೋಸರಾಜು
ಶಿವಮೊಗ್ಗ – ಎಸ್. ಮಧು ಬಂಗಾರಪ್ಪ
ಚಿಕ್ಕಬಳ್ಳಾಪುರ- ಎಂ.ಸಿ ಸುಧಾಕರ್
ಬಳ್ಳಾರಿ – ಬಿ. ನಾಗೇಂದ್ರ
ಸಚಿವ ಸ್ಥಾನ ವಂಚಿತವಾಗಿರುವ ಜಿಲ್ಲೆಗಳು: ಕೋಲಾರ, ಹಾಸನ, ಉಡುಪಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಹಾವೇರಿ ಮತ್ತು ವಿಜಯನಗರ. ಇಲ್ಲಿನ ಉಸ್ತುವಾರಿ ಯಾರಿಗೆ ಸಿಗಲಿದೆ ಎಂಬುದು ಕುತೂಹಲಕರ.
ಇದನ್ನೂ ಓದಿ: Karnataka Cabinet: ಯಾವ ಖಾತೆ ಯಾರಿಗೆ? ರಾಜ್ಯಪಾಲರ ಅಂಕಿತ ಪಡೆದ ಪಟ್ಟಿ ಇಲ್ಲಿದೆ