ವಂಚಿತರು ಕಾರ್ಯಕ್ರಮಕ್ಕೆ ಬರಲಿಲ್ಲ
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಕೆಲ ಪ್ರಮುಖ ನಾಯಕರು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಇವರಲ್ಲಿ ಪ್ರಮುಖರೆಂದರೆ ಬಿ ಕೆ ಹರಿಪ್ರಸಾದ್, ಲಕ್ಷ್ಮಣ ಸವದಿ, ಶಿವಲಿಂಗೇ ಗೌಡ, ಗುಬ್ಬಿ ಶ್ರೀನಿವಾಸ, ಎಂ. ಕೃಷ್ಣಪ್ಪ ರುದ್ರಪ್ಪ ಲಮಾಣಿ, ತನ್ವಿರ್ ಸೇಠ್,ಪುಟ್ಟ ರಂಗಶೆಟ್ಟಿ.
ಒಬ್ಬೊಬ್ಬರಿಗೆ ಅವಕಾಶ ಮಾಡಿಕೊಡಿ ಎಂದ ಸಿಎಂ
ಪ್ರಮಾಣವಚನ ಕಾರ್ಯಕ್ರಮದಲ್ಲಿ ಒಮ್ಮೆಗೆ ನಾಲ್ವರು ಸಚಿವರಿಗೆ ಪ್ರಮಾಣ ವಚನ ಬೋಧಿಸಲು ನಿರ್ಧರಿಸಲಾಗಿತ್ತಾದರೂ ವೇದಿಕೆಯಲ್ಲಿಯೇ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಲ್ಲಿ ಒಮ್ಮೆ ಒಬ್ಬರಿಗೆ ಮಾತ್ರ ಪ್ರಮಾಣ ವಚನ ಬೋಧಿಸುವಂತೆ ಮನವಿ ಮಾಡಿಕೊಂಡರು.
ರಾಜ್ಯಪಾಲ ಗೆಹ್ಲೋಟ್ ಇದಕ್ಕೆ ಒಪ್ಪಿಗೆ ಸೂಚಿಸಿದರು. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಮುಗಿಯಲಿದ್ದ ಕಾರ್ಯಕ್ರಮ ಒಂದು ಗಂಟೆಗೂ ಹೆಚ್ಚು ಸಮಯ ನಡೆಯಿತು.
ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯ
ರಾಜಭವನದ ಗಾಜಿನ ಮನೆಯಲ್ಲಿ ನಡೆಯುತ್ತಿದ್ದ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಒಟ್ಟು 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸುಮಾರು ಒಂದು ಕಾಲು ಗಂಟೆ ಈ ಕಾರ್ಯಕ್ರಮ ನಡೆಯಿತು. ಪ್ರಮಾಣವಚನ ಸ್ವೀಕರಿಸಿದ ನಂತರ ಎಲ್ಲರೂ ಒಟ್ಟಾಗಿ ನಿಂತು ಫೋಟೊ ತೆಗೆಸಿಕೊಂಡರು.
ಸಚಿವರಾಗಿ ಬಿ. ನಾಗೇಂದ್ರ ಪ್ರಮಾಣ
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ದೇವರು ಮತ್ತು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಬಿಜೆಪಿ ದೊರೆದು ಕಾಂಗ್ರೆಸ್ ಸೇರಿದ್ದರು.