Site icon Vistara News

Karnataka Cabinet: ಯಾವ ಖಾತೆ ಯಾರಿಗೆ? ರಾಜ್ಯಪಾಲರ ಅಂಕಿತ ಪಡೆದ ಪಟ್ಟಿ ಇಲ್ಲಿದೆ

DK Shivakumar siddaramaiah in rajbhavan with governor

ಬೆಂಗಳೂರು: ಕರ್ನಾಟಕ ರಾಜ್ಯದ ಸಚಿವರು ಹಾಗೂ ಅವರ ಖಾತೆಗಳ ಹಂಚಿಕೆ ಮಾಡಿ ರಾಜ್ಯಪಾಲರು ಅಧಿಕೃತ ಆದೇಶ ಪ್ರಕಟಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಕೆಲವು ಸಚಿವರ ಅಸಮಾಧಾನ ತಣಿಸುವುದಕ್ಕಾಗಿ ಖಾತೆಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

ಸಾರಿಗೆ ಇಲಾಖೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾ ರೆಡ್ಡಿ ಅವರನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಮನವೊಲಿಸಿದ್ದು, ಸಾರಿಗೆ ಇಲಾಖೆಯ ಜೊತೆಗೆ ಮುಜರಾಯಿ ಇಲಾಖೆ ಜವಾಬ್ದಾರಿಯನ್ನೂ ನೀಡಲಾಗಿದೆ. ಆರ್.ಬಿ ತಿಮ್ಮಾಪುರ ಬಳಿಯಿದ್ದ ಮುಜರಾಯಿ ಇಲಾಖೆ ರಾಮಲಿಂಗರೆಡ್ಡಿಗೆ ನೀಡಲಾಗಿದೆ. ತಿಮ್ಮಾಪುರ ಅವರು ಅಬಕಾರಿ ಹಾಗೂ ಮುಜರಾಯಿ ಇಲಾಖೆ ಪಡೆದಿದ್ದರು.

ರಾಜ್ಯಪಾಲರ ಅಂಕಿತ ಪಡೆದ ಖಾತೆಗಳ ಅಂತಿಮ ಪಟ್ಟಿ ಹೀಗಿದೆ:

ಸಿಎಂ ಸಿದ್ದರಾಮಯ್ಯ- ಹಣಕಾಸು, ಐಟಿ-ಬಿಟಿ, ಗುಪ್ತಚರ
ಡಿಸಿಎಂ ಡಿ.ಕೆ ಶಿವಕುಮಾರ್- ಸಣ್ಣ ಮತ್ತು‌ ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ಧಿ
ಜಿ.ಪರಮೇಶ್ವರ್- ಗೃಹ
ಹೆಚ್.ಕೆ‌ ಪಾಟೀಲ್- ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ
ಕೆ.ಹೆಚ್ ಮುನಿಯಪ್ಪ- ಆಹಾರ
ರಾಮಲಿಂಗಾ ರೆಡ್ಡಿ- ಸಾರಿಗೆ& ಮುಜರಾಯಿ
ಎಂ.ಬಿ ಪಾಟೀಲ್- ಬೃಹತ್ ಕೈಗಾರಿಕೆ
ಕೆ.ಜೆ ಜಾರ್ಜ್‌- ಇಂಧನ
ದಿನೇಶ್ ಗುಂಡೂರಾವ್- ಆರೋಗ್ಯ
ಹೆಚ್.ಸಿ ಮಹದೇವಪ್ಪ- ಸಮಾಜಕಲ್ಯಾಣ
ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
ಕೃಷ್ಣ ಬೈರೇಗೌಡ- ಕಂದಾಯ
ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ
ಶಿವಾನಂದ ಪಾಟೀಲ್- ಜವಳಿ, ಸಕ್ಕರೆ
ಜಮೀರ್- ವಸತಿ
ಶರಣುಬಸಪ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ
ಈಶ್ವರ್ ಖಂಡ್ರೆ- ಅರಣ್ಯ
ಚಲುವರಾಯಸ್ವಾಮಿ- ಕೃಷಿ
ಎಸ್.ಎಸ್ ಮಲ್ಲಿಕಾರ್ಜುನ- ಗಣಿ
ರಹೀಂ ಖಾನ್- ಪೌರಾಡಳಿತ, ಹಜ್
ಸಂತೋಷ ಲಾಡ್- ಕಾರ್ಮಿಕ
ಡಾ.ಶರಣುಪ್ರಕಾಶ್ ಪಾಟೀಲ್- ವೈದ್ಯಕೀಯ
ಆರ್.ಬಿ ತಿಮ್ಮಾಪುರ- ಅಬಕಾರಿ
ಕೆ. ವೆಂಕಟೇಶ್- ಪಶುಸಂಗೋಪನೆ
ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
ಡಿ.ಸುಧಾಕರ್- ಯೋಜನೆ
ಬಿ‌.ನಾಗೇಂದ್ರ- ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
ಕೆ.ಎನ್.ರಾಜಣ್ಣ- ಸಹಕಾರ
ಬಿ.ಎಸ್ ಸುರೇಶ್- ನಗರಾಭಿವೃದ್ಧಿ
ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಂಕಾಳ್ ವೈದ್ಯ- ಮೀನುಗಾರಿಕೆ ಮತ್ತು ಬಂದರು
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಡಾ‌.ಎಂ‌.ಸಿ .ಸುಧಾಕರ್- ಉನ್ನತ ಶಿಕ್ಷಣ
ಎನ್.ಎಸ್.ಬೋಸರಾಜ್- ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ

ಇದನ್ನೂ ಓದಿ: Karnataka Cabinet Expansion: ಸರ್ಕಾರ ಟೇಕಾಫ್‌ ಆದ ಬೆನ್ನಲ್ಲೇ ಅಸಮಾಧಾನದ ಹೊಗೆ; ಖಾತೆ ಬದಲಿಸಿದ ಸಿದ್ದು

Exit mobile version