ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ (Karnataka CM) ಆಯ್ಕೆ ವಿಚಾರದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವುದು ಶಾಸಕಾಂಗ ಪಕ್ಷ ಸಭೆ. ಮುಖ್ಯಮಂತ್ರಿಯ ಆಯ್ಕೆ ನಡೆಯುವುದು ಶಾಸಕಾಂಗ ಪಕ್ಷ ಸಭೆಯಲ್ಲಿ (Legislative party) ಎಂಬ ನಿರ್ಧಾರಕ್ಕೆ ಅನುಸಾರವಾಗಿ ಇದಕ್ಕೆ ದೊಡ್ಡ ಮಹತ್ವವಿದೆ.
ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 135 ಸ್ಥಾನದೊಂದಿಗೆ ಭರ್ಜರಿ ಬಹುಮತವನ್ನು ಪಡೆದಿರುವ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ (Congress High command) ದಿಲ್ಲಿಯಲ್ಲಿ ಆಯ್ಕೆ ಮಾಡಿದ್ದರೂ ಅದಕ್ಕೆ ಅಧಿಕೃತತೆ ದೊರೆಯುವುದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ.
ಹಾಗಿದ್ದರೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ನಡೆಯುವ ಪ್ರಕ್ರಿಯೆಗಳೇನು?
1. ಶಾಸಕಾಂಗ ಪಕ್ಷ ಸಭೆಗೆ ಕಾಂಗ್ರಸೆನ ಎಲ್ಲ ಚುನಾಯಿತ ಅಭ್ಯರ್ಥಿಗಳು ಭಾಗವಹಿಸುತ್ತಾರೆ.
2. ಕೆಪಿಸಿಸಿ ಅಧ್ಯಕ್ಷರು ಕರೆದಿರುವ ಈ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಹಾಗೂ ಕಾಂಗ್ರೆಸ್‌ನ ವೀಕ್ಷಕರು ಉಪಸ್ಥಿತರಿದ್ದಾರೆ. ಜತೆಗೆ ರಾಜ್ಯದಿಂದ ಆಯ್ಕೆಯಾದ ಕಾಂಗ್ರೆಸ್ ಸಂಸದರು ಭಾಗವಹಿಸುತ್ತಾರೆ.
3. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಐಸಿಸಿಯಲ್ಲಿ ನಡೆದ ನಿರ್ಣಯದ ಪ್ರಸ್ತಾಪ ಆಗಲಿದೆ.
4. ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಿರುವ ವಿಚಾರವನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸುತ್ತಾರೆ.
5. ಮೊದಲ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರ ನಿರ್ಣಯಕ್ಕೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿತ್ತು. ಎಐಸಿಸಿ ನಿರ್ಣಯಕ್ಕೆ ಇಂದಿನ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರ ಅನುಮೋದನೆ ನೀಡಲಾಗುತ್ತದೆ.
6. ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲು ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.
7. ಹಕ್ಕು ಮಂಡನೆ ನಿರ್ಣಯಕ್ಕೆ ಎಲ್ಲ ಶಾಸಕರು ಲಿಖಿತ ಸಹಿ ಹಾಕುತ್ತಾರೆ.
8.ಲಿಖಿತ ರೂಪದಲ್ಲಿ ನೂತನ ಸಿಎಲ್ಪಿ ನಾಯಕನ ಆಯ್ಕೆ ಪತ್ರ ಸಿದ್ಧಪಡಿಸಲಾಗುತ್ತದೆ.
9. ಶಾಸಕಾಂಗ ಪಕ್ಷದ ನಿರ್ಣಯದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲಾಗುತ್ತದೆ.
10. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರ ಮುಂದೆ ಮನವಿ ನೀಡಲಾಗುತ್ತದೆ.
ಇದನ್ನೂ ಓದಿ: Karnataka Election : ಕಾಂಗ್ರೆಸ್ ಸರ್ಕಾರ ತಕ್ಷಣವೇ ಗ್ಯಾರಂಟಿಗಳನ್ನು ಜಾರಿಗೆ ತರಬೇಕು; ಬಿಜೆಪಿ ಆಗ್ರಹ