ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಖರ್ಗೆ ಪತ್ನಿ, ಡಿ.ಕೆ ಶಿವಕುಮಾರ್ ಸಹಿತ ನಿಯೋಜಿತ ಮಂತ್ರಿಗಳ ಆಗಮನ
ನಿಯೋಜಿತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರೇಷ್ಮೆ ಪಂಚೆ ಕಟ್ಟಿಕೊಡು ಆಗಮಿಸಿದ್ದಾರೆ. ಅವರ ಜತೆಗೆ ನಿಯೋಜಿತ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾದಾ ಉಡುಪಿನಲ್ಲೇ ಎಂಟ್ರಿಕೊಟ್ಟಿದ್ದಾರೆ.
ನಿಯೋಜಿತ ಸಚಿವ ಸತೀಶ್ ಜಾರಕಿಹೊಳಿ ಮತ್ತು ಪರಮೇಶ್ವರ್ ಬಂದಿದ್ದಾರೆ. ಅವರ ಜತೆಗೆ ಸಂಸದ ಡಿ.ಕೆ. ಸುರೇಶ್ ಕೂಡಾ ಆಗಮಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ಮತ್ತು ಪುತ್ರ, ನಿಯೋಜಿತ ಸಚಿವ ಪ್ರಿಯಾಂಕಾ ಖರ್ಗೆ ಆಗಮನ
ನಿಯೋಜಿತ ಸಚಿವ ಕೆ.ಎಚ್ ಮುನಿಯಪ್ಪ ಬಂದಿದ್ದಾರೆ.
ಗಣ್ಯರ ಹಳದಿ ಗೇಟ್ ಬಳಿ ಕಾಲ್ತುಳಿತ: ಕೆಳಗೆ ಬಿದ್ದ ವೃದ್ಧರು
ಗಣ್ಯರ ಪ್ರವೇಶ ದ್ವಾರದ ಬಳಿ ಒಳಗೆ ಹೋಗವ ಧಾವಂತದಲ್ಲಿ ವೃದ್ಧರೊಬ್ಬರು ಕೆಳಗೆ ಬಿದ್ದರು. ಆದರೆ, ಎಲ್ಲರೂ ಅವಸರದಲ್ಲೇ ಇದ್ದ ಕಾರಣ
ಕೆಳಗೆ ಬಿದ್ರೂ ನೋಡಿ ತುಳಿದುಕೊಂಡು ಹೋದರು ಜನ. ಬಳಿಕ ಎಚ್ಚೆತ್ತ ಪೊಲೀಸರು ವೃದ್ಧರ ರಕ್ಷಣೆ ಮಾಡಿದರು.
ಸಿದ್ದು ಪಟ್ಟಾಭಿಷೇಕ: ಜನರನ್ನು ನಿಯಂತ್ರಿಸಲು ಲಾಠಿ ಚಾರ್ಚ್
ಭಾರಿ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಠಲ್ ಮಲ್ಯ ರಸ್ತೆಯ ವಿಐಪಿ ಹಳದಿ ಪಾಸ್ ಗೇಟ್ ಬಳಿ ನೂಕುನುಗ್ಗಲು ಉಂಟಾಗಿದೆ. ಇದನ್ನು ನಿಯಂತ್ರಿಸಲು ಹರಸಾಹಸ ನಡೆಸಿದರ ಪೊಲೀಸರು ಲಾಠಿ ಚಾರ್ಚ್ ನಡೆಸಿದರು.ಪ್ರಮಾಣ ವಚನಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವುದರಿಂದ ಸಾಗರೋಪಾದಿಯಲ್ಲಿ ಅಭಿಮಾನಿಗಳು ನುಗ್ಗಿ ಬರುತ್ತಿದ್ದಾರೆ.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಆಗಮನ
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಯಿಂದ ಆಗಮಿಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿತ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ವಾಗತಿಸಿದರು.
ಫಾರೂಕ್ ಅಬ್ದುಲ್ಲಾ ಆಗಮನ
ಬೆಂಗಳೂರು: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಫಾರೂಖ್ ಅಬ್ದುಲ್ಲಾ ಅವರು ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದು, ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಉಳಿದುಕೊಂಡಿದ್ದಾರೆ.