ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಅಮಾವಾಸ್ಯೆ ಮುಗಿದಿದೆ, ಶುಭ ಮುಹೂರ್ತದಲ್ಲಿ ನಡೆಯಲಿದೆ ಪ್ರಮಾಣ ವಚನ
ಶನಿವಾರವಾದರೂ ಶುಭ ಗಳಿಗೆಯಲ್ಲಿ ಸಿದ್ದರಾಮಯ್ಯ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯುತ್ತಿದೆ ಎಂದು ಜ್ಯೋತಿಷಿ ಡಾ.ಮೂಗೂರು ಮಧುದೀಕ್ಷಿತ್ ಅಭಿಪ್ರಾಯಪಟ್ಟಿದೆ.ಕಾರ್ಯಕ್ರಮದ ಆರಂಭದ ಹೊತ್ತಿಗೆ ಕೃತಿಕಾ ನಕ್ಷತ್ರ ಮುಕ್ತಾಯವಾಗುತ್ತದೆ. ಅಮಾವಾಸ್ಯೆಯ ಮುಗಿದಿರುವ ಕಾರಣ ಯಾವುದೇ ತೊಡಕು ಇಲ್ಲ.ದೀಕ್ಷೆ ಸ್ವೀಕಾರ, ಸ್ಥಿರತೆಗೆ ಶನಿವಾರವೇ ಶುಭ ಎನ್ನುವುದು ಅವರ ನುಡಿ
ತಳ್ಳಾಟದಲ್ಲಿ ಮೂವರಿಗೆ ಗಾಯ
ಬೆಂಗಳೂರು: ಕಂಠೀರವ ಸ್ಟೇಡಿಯಂ ಬಳಿ ಸಾವಿರಾರು ಮಂದಿ ಬೆಳಗ್ಗೆಯೇ ಜಮಾಯಿಸಿ ಒಳಗೆ ಪ್ರವೇಶಕ್ಕೆ ಯತ್ನಿಸಿದ್ದರಿಂದ, ನೂಕಾಟ ತಳ್ಳಾಟದಲ್ಲಿ ಮೂವರಿಗೆ ಗಾಯವಾಗಿದೆ.
ಸಿಎಂ, ಡಿಸಿಎಂ ಜತೆಗೆ 8 ಸಚಿವರ ಪ್ರಮಾಣ
ಬೆಂಗಳೂರು: ಸಿಎಂ ಆಗಿ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವುದರ ಜತೆಗೆ 8 ಮಂದಿ ಹಿರಿಯ ಶಾಸಕರೂ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ.
ಸಿದ್ದರಾಮನಹುಂಡಿಯಿಂದ ಜನ ಆಗಮನ
ಬೆಂಗಳೂರು: ಸಿದ್ದರಾಮಯ್ಯ ಅವರ ತವರೂರು ಸಿದ್ದರಾಮನಹುಂಡಿಯಿಂದ ಸಾವಿರಾರು ಜನ ಬಸ್ ಮಾಡಿಕೊಂಡು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ರೊಟ್ಟಿ- ಬುತ್ತಿ ಕಟ್ಟಿಕೊಂಡು ಬರುತ್ತಿರುವ ಇವರು ತಮ್ಮೂರಿನ ನಾಯಕ ಎರಡನೇ ಬಾರಿಗೆ ಸಿಎಂ ಆಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಕಂಠೀರವ ಸುತ್ತ ಮುತ್ತ ಟ್ರಾಫಿಕ್ ಜಾಂ
ಬೆಂಗಳೂರು: ಕಂಠೀರವ ಸ್ಟೇಡಿಯಂ ಸುತ್ತಮುತ್ತ ಬೆಳಗ್ಗನಿಂದಲೇ ಟ್ರಾಫಿಕ ಜಾಂ ಉಂಟಾಗಿದೆ. ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದು, ಮಲ್ಯ ರಸ್ತೆ ಬಳಿ ಸಂಚಾರ ದಟ್ಟಣೆ ಉಂಟಾಗಿದೆ.