ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಬೇಸರಗೊಂಡು ಅನೇಕ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ ಒಂದೇ ದಿನಕ್ಕೆ ರಾಣಿ ಸಂಯುಕ್ತ ಅವರಿಗೆ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.
ಈ ಕುರಿತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಆದೇಶ ಹೊರಡಿಸಿದ್ದಾರೆ. ವಿಜಯನಗರ ಶಾಸಕ ಆನಂದಸಿಂಗ್ ಸಹೋದರಿಯೂ ಆಗಿರುವ ರಾಣಿ ಸಂಯುಕ್ತ, ವಿಜಯನಗರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಲ್ಲಿ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಟಿಕೆಟ್ ಲಭಿಸಿದೆ. ಇದರಿಂದ ಬೇಸತ್ತು ರಾಣಿ ಸಂಯುಕ್ತ ಕಾಂಗ್ರೆಸ್ (Karnataka Congress) ಸೇರಿದ್ದಾರೆ.
ಉಪಾಧ್ಯಕ್ಷರಾಗಿ ಗಂಗಾಧರ ಗೌಡ, ಬಿ. ಗೋಪಾಲ್ ನೇಮಕವಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಣಿ ಸಂಯುಕ್ತ ಜತೆಗೆ ಟಿ. ನಾಗೇಶ್, ಪದ್ಮರಾಜ ರಾಮಯ್ಯ, ಶಿವಣ್ಣ ಪಟೇಲ್ ನೇಮಿಸಲಾಗಿದೆ.
ರಾಜ್ಯ ಕಾರ್ಯದರ್ಶಿಯಾಗಿ ಡಾ. ಬಿ.ಸಿ. ಮುದ್ದಗಂಗಾಧರ್ ಹಾಗೂ ಕೆ. ಅಸ್ಲಂ ಪಾಷ ನೇಮಕವಾಗಿದ್ದಾರೆ. ರಾಜ್ಯ ವಕ್ತಾರರಾಗಿ ಚಿತ್ರನಟಿ ಭಾವನಾ ರಾಮಣ್ಣ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ಚಿದಂಬರಂ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: BJP Karnataka: ಬಿಜೆಪಿಯಲ್ಲಿ ಮತ್ತೊಂದು ಬಂಡಾಯ: ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ