Site icon Vistara News

Karnataka Congress: ಅಮಾವಾಸ್ಯೆ ಕಾರಣಕ್ಕೆ ಚಿಂಚನಸೂರು ಕೈ ಸೇರ್ಪಡೆ ಮುಂದೂಡಿಕೆ: ಇತರೆ ದಲಿತ ಮುಖಂಡರು ಸೇರ್ಪಡೆ

karnataka-congress-dalit-leaders-joins-congress

#image_title

ಬೆಂಗಳೂರು: ಕಲಬುರ್ಗಿ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಸವಾಲೆಸೆದು ಕಳೆದ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಸೋಲಲು ಕಾರಣರಾಗಿದ್ದವರಲ್ಲೊಬ್ಬರಾದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಕಾಂಗ್ರೆಸ್‌ (Karnataka Congress) ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಅಮಾವಾಸ್ಯೆ ಎಂಬ ಕಾರಣಕ್ಕೆ ಚಿಂಚನಸೂರು ಆಗಮಿಸಿಲ್ಲ.

ಅಂಬಣ್ಣ ಸೇರಿ ದಲಿತ ಎಡಗೈ ಸಮುದಾಯದ 15ಕ್ಕೂ ಹೆಚ್ಚು ಪ್ರಮುಖರು ಕಾಂಗ್ರೆಸ್‌ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಬಿಜೆಪಿ ಅಂತ್ಯದ ಮೋಸದ ಪಾರ್ಟಿ. ಬೊಮ್ಮಯಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡ್ತೀವಿ ಅಂತ ಹೇಳಿದ್ರು. ಆದರೆ ಲೋಕಸಭೆಯಲ್ಲಿ ಕೇಳಿದ ಪ್ರಶ್ಮೆಗೆ ಕೇಂದ್ರ ಸಚಿವರು, ಆ ರೀತಿಯ ಪ್ರಸ್ತಾವನೆ ಇಲ್ಲ ಎಂದು ಉತ್ತರಿಸಿದ್ದಾರೆ. ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎನ್ನುವವರು ಕೇಂದ್ರಕ್ಕೆ ಪ್ರಸ್ತಾವನೆಯನ್ನೇ ಕಳಿಸಿಲ್ಲ.

ದಲಿತ ಸಮುದಾಯಕ್ಕೆ ಎಷ್ಟು ಮೋಸ ಮಾಡ್ತಿದೆ ನೋಡಿ. ಇದರ ವಿರುದ್ಧ ದಲಿತ ಸಮುದಾಯ ಧ್ವನಿ ಎತ್ತಬೇಕು. ರಾಜ್ಯದ್ಯಾಂತ ಪ್ರತಿಭಟನೆ ನಡೆಸಬೇಕು. ಯಾವ ರೀತಿ ಪ್ರತಿಭಟನೆ ನಡೆಸಬೇಕು ಎಂದು ತೀರ್ಮಾನ ಮಾಡುತ್ತೇವೆ. ಬಿಜೆಪಿ ದಲಿತರನ್ನ ನಿರ್ಲಕ್ಷ್ಯ ಮಾಡಿಕೊಂಡು ಬಂದಿದ್ದಾರೆ. ಎಂದರು.

ಕೆಪಿಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಮಾತನಾಡಿ, ಬೊಮ್ಮಯಿ ಸರ್ಕಾರ ದಲಿತರಿಗೆ ಮೋಸ ಮಾಡಿದೆ. ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಯಾವುದೇ ಪ್ರಸ್ತಾಪವನ್ನ ಕೇಂದ್ರ ಕಳುಹಿಸದೆ ಮೋಸ ಮಾಡಿದ್ದಾರೆ‌. ನಾಚಿಕೆಯಾಗಬೇಕು ಬಿಜೆಪಿ ಸರ್ಕಾರಕ್ಕೆ. ಸಿಎಂ ಬೊಮ್ಮಯಿ ಮೊದಲು ರಿಸೈನ್ ಮಾಡಬೇಕು.

ಬಿಜೆಪಿ ದಲಿತ ಶಾಸಕರಿಗೆ ಶಾಸಕರಾಗಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ. ಕೇಂದ್ರ ಸಚಿವರುಗಳು ಸಹ ರಾಜೀನಾಮೆ ನೀಡಬೇಕು. ಎಸ್.ಸಿ. ಎಸ್ .ಟಿ ಮೀಸಲಾತಿ ವಿಚಾರದಲ್ಲಿ ರಾಜ್ಯದ ನಾಲ್ವರು ಕೇಂದ್ರ ಸಚಿವರು, ಸಿಎಂ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಆಶಯ ಈಡೇರಿಸಲು ನಾವು ವಿಫಲವಾಗಿದ್ದೇವೆ. ಹಿಂದಳಿದ ವರ್ಗಗಳು ಬಿಜೆಪಿಗೆ ಬೇಕಿಲ್ಲ. ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯ. ದಲಿತರ ಪರಿವಾಗಿ ಸಾಕಷ್ಟು ಹೋರಾಟ ಮಾಡಿದ್ದೀರಿ. ನಿಮ್ಮ ಹೋರಾಟ ನಮಗೆ ಬಾರೀ ಶಕ್ತಿ ತುಂಬಿದೆ. ನಿಮ್ಮ ಹೋರಾಟದಿಂದ ನಮಗೆ ಪ್ರಶ್ನೆ ಮಾಡಲು ಅವಕಾಶ ಸಿಕ್ಕಿದೆ ಎಂದರು.

ಇದನ್ನೂ ಓದಿ: Karnataka Elections : ಚಿಂಚನಸೂರು ಸಹಿತ 16 ಎಡಗೈ, ಐವರು ಬಲಗೈ ಸಮುದಾಯದ ನಾಯಕರು ಇಂದು ಕಾಂಗ್ರೆಸ್‌ ಸೇರ್ಪಡೆ

Exit mobile version