Site icon Vistara News

Karnataka Congress: ಇಂದಿನಿಂದ ಡಿಕೆಶಿ- ಸಿದ್ದರಾಮಯ್ಯ ಪ್ರತ್ಯೇಕ ಬಸ್ ಯಾತ್ರೆ

cm Siddaramaiah And DK Shivakumar

cm Siddaramaiah And DK Shivakumar

ಬೆಂಗಳೂರು: ಇಂದಿನಿಂದ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರು ರಾಜ್ಯಾದ್ಯಂತ ಪ್ರತ್ಯೇಕ ಬಸ್‌ ಯಾತ್ರೆಗಳನ್ನು ನಡೆಸಲಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿರುವ ಕುರುಡುಮಲೆ ದೇವಸ್ಥಾನದಿಂದ ಇಂದು ಡಿಕೆಶಿ ಬಸ್ ಯಾತ್ರೆ ಆರಂಭವಾಗಲಿದೆ. ಬಸವಕಲ್ಯಾಣ ಕ್ಷೇತ್ರದ ಅನುಭವ ಮಂಟಪದಿಂದ ಸಿದ್ದರಾಮಯ್ಯ ಬಸ್ ಯಾತ್ರೆ ಶುರು ಮಾಡಲಿದ್ದಾರೆ.

ಸಿದ್ದರಾಮಯ್ಯ ಅವರು ಮೊದಲಿಗೆ ಉತ್ತರ ಕರ್ನಾಟಕ ಬಸ್ ಯಾತ್ರೆ ಮುಗಿಸಿ ನಂತರ ದಕ್ಷಿಣ ಕರ್ನಾಟಕಕ್ಕೆ ಬರಲಿದ್ದಾರೆ. ಡಿಕೆಶಿ ಮೊದಲು ದಕ್ಷಿಣ ಕರ್ನಾಟಕದಲ್ಲಿ ಬಸ್ ಯಾತ್ರೆ ಮುಗಿಸಿ ನಂತರ ಉತ್ತರ ಕರ್ನಾಟಕಕ್ಕೆ ತೆರಳಲಿದ್ದಾರೆ.

6 ದಿನಗಳಲ್ಲಿ 12 ಕ್ಷೇತ್ರಗಳಲ್ಲಿ ಡಿಕೆಶಿ ಬಸ್ ಯಾತ್ರೆ ಸಂಚರಿಸಲಿವೆ. 12 ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸಿ ಡಿಕೆಶಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಈ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5, ಬಿಜೆಪಿ 6, ಜೆಡಿಎಸ್‌ 1 ಸ್ಥಾನಗಳಲ್ಲಿ ಇವೆ. ಸಿದ್ದರಾಮಯ್ಯ ಅವರು 11 ದಿನಗಳ ಕಾಲ ಬಸ್ ಯಾತ್ರೆ ನಡೆಸಲಿದ್ದು, 21 ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಈ 21 ಕ್ಷೇತ್ರಗಳಲ್ಲಿ ಬಿಜೆಪಿ 13, ಕಾಂಗ್ರೆಸ್ 7, ಜೆಡಿಎಸ್ 1 ಕಡೆ ಇವೆ.

ಇದನ್ನೂ ಓದಿ:‌ Budget 2023 : ಕೇಂದ್ರ ಸರ್ಕಾರದ ಬಜೆಟ್ ʼಸೀಡ್‌‌ಲೆಸ್ ಕಡಲೆಕಾಯಿʼ ಇದ್ದಂತಿದೆ!: ಕಾಂಗ್ರೆಸ್‌ ಟೀಕೆ

ಸಿದ್ದರಾಮಯ್ಯ ಬಸ್ ಯಾತ್ರೆ ವಿವರ:

ದಿನಾಂಕ 3-1-2023 – ಬಸವಕಲ್ಯಾಣ/ಭಾಲ್ಕಿ ಕ್ಷೇತ್ರ
ದಿನಾಂಕ 4-1-2023 – ಬೀದರ್ ದಕ್ಷಿಣ/ಹುಮ್ನಾಬಾದ್
ದಿನಾಂಕ 6-1-2023 – ಚಿಂಚೋಳಿ/ಸೇಡಂ
ದಿನಾಂಕ 7-1-2023 – ಆಳಂದ/ಅಫಜಲಪುರ/ಜೇವರ್ಗಿ
ದಿನಾಂಕ 8-1-2023 – ಚಿತ್ತಾಪುರ
ದಿನಾಂಕ 10-1-2023 – ಸುರಪುರ/ಶಹಾಪೂರ/ಕಲಬುರಗಿ ಉತ್ತರ/ದಕ್ಷಿಣ
ದಿನಾಂಕ 11-1-2023 – ಸಿಂಧಗಿ/ಇಂಡಿ/ನಾಗಠಾಣ
ದಿನಾಂಕ 15-1-2023 – ಬೀಳಗಿ/ರಾಮದುರ್ಗ
ದಿನಾಂಕ 16-1-2023 – ಕುಂದಗೋಳ/ಶಿರಹಟ್ಟಿ

ಡಿಕೆ ಶಿವಕುಮಾರ್ ಬಸ್ ಯಾತ್ರೆ ವಿವರ

ದಿನಾಂಕ 3-1-2023 – ಮುಳಬಾಗಿಲು/ಕೆಜಿಎಫ್
ದಿನಾಂಕ 4-1-2023 – ಮಾಲೂರು/ದೇವನಹಳ್ಳಿ
ದಿನಾಂಕ 6-1-2023 – ಹಿರಿಯೂರು/ಚಳ್ಳಕೆರೆ/ಮೊಳಕಾಲ್ಮೂರು
ದಿನಾಂಕ 8-1-2023 – ಭದ್ರಾವತಿ/ತೀರ್ಥಹಳ್ಳಿ
ದಿನಾಂಕ 9-1-2023 – ಹೊಸದುರ್ಗ/ಹೊಳಲ್ಕೆರೆ/ಚಿತ್ರದುರ್ಗ

ಇದನ್ನೂ ಓದಿ: Congress Politics : ಕಾಂಗ್ರೆಸ್‌ನ 120 ಅಭ್ಯರ್ಥಿಗಳು ಫೈನಲ್‌: ಚುನಾವಣೆ ಸಮಿತಿ ಸಭೆಯಲ್ಲಿ ಅಸಮಾಧಾನದ ಹೊಗೆ

Exit mobile version