Site icon Vistara News

Karnataka Congress: ನೆಹರೂ ಓಲೆಕಾರ್‌ ಹೇಳಿದ್ದನ್ನೇ ಸಿದ್ದರಾಮಯ್ಯ ಹೇಳಿದ್ದಾರೆ: ರಣದೀಪ್‌ ಸಿಂಗ್‌ ಸುರ್ಜೆವಾಲ ಸಮರ್ಥನೆ

karnataka congress incharge surjewala defends siddaramaiah

Karnataka Congress: Siddaramaiah Said What Nehru Olekar Said: Randeep Singh Surjewala Defends.

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ನಿಜೆಪಿ ಮಾಜಿ ಶಾಸಕ ನೆಹರೂ ಓಲೆಕಾರ್‌ ಹೇಳಿದ ಮಾತನ್ನೇ ಮಾಜಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಸಮರ್ಥಿಸಿಕೊಂಡಿದ್ದಾರೆ. ಲಿಂಗಾಯತ ಸಿಎಂಗಳು ರಾಜ್ಯ ಹಾಳು ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಸುರ್ಜೆವಾಲ ಪ್ರತಿಕ್ರಿಯೆ ನೀಡಿದ್ದಾರೆ.

ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಎಲ್ಲರೂ ಸಾಧನೆ ಮಾಡಿದ್ದವರು. ಬಿಜೆಪಿ ಶಾಸಕ ನೆಹರೂ ಓಲೆಕಾರ್‌ ಹೇಳಿದ್ದನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಬೊಮ್ಮಾಯಿ ಸರ್ಕಾರ 40% ಸರ್ಕಾರ ಎಂದು ಓಲೇಕರ್ ಹೇಳಿದ್ದರು, ಅದನ್ನೇ ಹೇಳಿದ್ದು.

ಬೊಮ್ಮಾಯಿ ಅವರೇ ನೀವು ವೀರೇಂದ್ರ ಪಾಟೀಲ್, ಎಸ್. ನಿಜಲಿಂಗಪ್ಪ ಅವರಿಂದ 1% ಪಾಠವನ್ನಾದರೂ ಕಲಿಯಿರಿ. ಬೊಮ್ಮಾಯಿ ಸರ್ಕಾರ ರಾಜ್ಯಕ್ಕೆ ಕೆಟ್ಟ ಹೆಸರು ತಂದಿದೆ. ಅವರದ್ದೇ ನಾಯಕರಾದ ಬಿ. ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದಾರೆ.

ಹಿರಿಯ ನಾಯಕರಾದ ಬಿ. ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಕೆಳಗೆ ಕೆಲಸ ಮಾಡುವ ಹಾಗೆ ಮಾಡಿದ್ದಾರೆ. ಮರ್ಯಾದೆ ನೀಡದೆ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಅವರನ್ನ ಪಕ್ಷದಿಂದ ಹೊರಗೆ ಹಾಕಿದ್ರು. ಸವದಿ ಡಿಸಿಎಂ ಆಗಿದ್ದವರು, ಲಿಂಗಾಯತ ಸಮುದಾಯದವರನ್ನು ನಾವಲ್ಲ ಹೊರಹಾಕಿದ್ದು.

ಲಿಂಗಾಯತ ಸಿಎಂ ಆಗಿದ್ದ ಶೆಟ್ಟರ್ ರನ್ನು ಹೊರಹಾಕಿದ್ದು ನಾವಲ್ಲ. ಲಿಂಗಾಯತ ಮಾಜಿ ಸಿಎಂ, ಡಿಸಿಎಂಗೆ ಅವಮಾನ ಮಾಡಿದ್ದು ನಾವಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮತ್ತಿತರರು ಉಪಸ್ಥಿತರಿದ್ದರು. (Karnataka Congress)

ಇದನ್ನೂ ಓದಿ: Karnataka Election: ಲಿಂಗಾಯತ ಮುಖ್ಯಮಂತ್ರಿಗಳೇ ರಾಜ್ಯವನ್ನು ಹಾಳು ಮಾಡಿದ್ದು ಎಂದ ಸಿದ್ದರಾಮಯ್ಯ: ಡ್ಯಾಮೇಜ್‌ ಕಂಟ್ರೋಲ್‌ ಪ್ರಯತ್ನ ಆರಂಭ

Exit mobile version