ಬೆಂಗಳೂರು: ಚುನಾವಣೆ ಕುರಿತಂತೆ ಪ್ರಚಾರಾಂದೋಲನದಲ್ಲಿ ಮುಂದಿರುವ ಕಾಂಗ್ರೆಸ್‌ಗೆ (Karnataka Congress) ಇದೀಗ ಅಗ್ನಿ ಪರೀಖ್ಷೆ ಎದುರಾಗಿದೆ. ಅನೇಕ ಕ್ಷೇತ್ರಗಳಲ್ಲಿ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳಿರುವುದು ತಲೆನೋವಾಗಿದ್ದು, ಅನೇಖ ಸುತ್ತಿನ ಮಾತುಕತೆ ನಂತರವೂ ಬಗೆಹರಿದಿಲ್ಲ.
ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅರ್ಜಿ ಆಹ್ವಾನಿಸಿದ್ದರಿಂದ ಅನೇಕರು ಹಣ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಇದೆಲ್ಲವನ್ನೂ ಪರಿಶೀಳಿಸಿರುವ ಸ್ಕರೀನಿಂಗ್ ಕಮಿಟಿ, ಸುಮಾರು 120 ಕ್ಷೇತ್ರಗಳಿಗೆ ಒಬ್ಬರೇ ಅಭ್ಯರ್ಥಿ ಹೆಸರನ್ನು ಹೈಕಮಾಂಡ್‌ಗೆ ಕಳಿಸಿದೆ ಎನ್ನಲಾಗಿದೆ.
ಉಳಿದಂತೆ ಅನೇಕ ಕ್ಷೇತ್ರಗಳಲ್ಲಿ ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇಂತಹ ಕ್ಷೇತ್ರಗಳಲ್ಲಿ ಸಂಧಾನ ನಡೆಸಿ ಒಬ್ಬ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯುವಂತೆ ಹಾಗೂ ಮತ್ತೊಬ್ಬರಿಗೆ ಬೆಂಬಲಿಸುವಂತೆ ಮನವೊಲಿಸಲಾಗುತ್ತಿದೆ. ಇದೇ ಪ್ರಕ್ರಿಯೆಯ ಭಾಗವಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಶಂಕರ ಗುಹಾ ದ್ವಾರಕಾನಾಥ್ ಹಾಗೂ ಯು.ಬಿ. ವೆಂಕಟೇಶ್ ನಡುವೆ ಸಂಧಾನ ನಡೆದಿದೆ. ಅದೇ ರೀತಿ ಮದ್ದೂರಿನಲ್ಲಿ ಕದಲೂರು ಉಮೇಶ್ ಹಾಗೂ ಗುರುಚರಣ್ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದಾರೆ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಹ ಅನೇಕ ಕ್ಷೇತ್ರಗಳ ಸಂಧಾನ ಸಭೆ ನಡೆಸಿದ್ದಾರೆ. ಆದರೆ ಇನ್ನೂ 50 ಕ್ಷೇತ್ರಗಳಲ್ಲಿ ಸಮಸ್ಯೆ ಬಗೆಹರಿದಿಲ್ಲ.
ಸಂಧಾನ ಸಭೆಗೆ ಆಗಮಿಸುವ ಅನೇಕರು ಒಪ್ಪಿ ತೆರಳುತ್ತಿದ್ದಾರೆ. ಆದರೆ ಹೊರಗೆ ಹೋಗುತ್ತಿದ್ದಂತೆಯೇ, ತಾವೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಕ್ಷೇತ್ರಗಳಲ್ಲಿ ಪ್ರಮುಖವಾದವು ಈ ಕೆಳಕಂಡಂತಿವೆ.
ಹೊಳಲ್ಕೆರೆ – ಸವಿತಾ ರಘು/ ಆಂಜನೇಯ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ
ಬಳ್ಳಾರಿ ನಗರ – ಅಲ್ಲಂ ಪ್ರಶಾಂತ್/ ಅನಿಲ್ ಲಾಡ್
ಶಿಗ್ಗಾಂವಿ – ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ, ವಿನಯ್ ಕುಲಕರ್ಣಿ
ಗಂಗಾವತಿ – ಇಕ್ಬಾಲ್ ಅನ್ಸಾರಿ/ ಎಚ್.ಆರ್ ಶ್ರೀನಾಥ್
ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ/ ವಿಜಯಕುಮಾರ್
ತೇರದಾಳ್ – ಉಮಾಶ್ರೀ/ ಮಲ್ಲೇಶಪ್ಪ
ಬಾಗಲಕೋಟ – ಎಚ್. ವೈ. ಮೇಟಿ/ ದೇವರಾಜ್ ಪಾಟೀಲ್
ಬೆಳಗಾವಿ ಉತ್ತರ – ಫೀರೋಜ್ ಸೇಠ್/ ಆಸೀಫ್ ಸೇಠ್
ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ/ ಮಹೇಂದ್ರ ತಮ್ಮಣ್ಣ
ಕಾಗವಾಡ – ರಾಜೂ ಕಾಗೆ/ ದಿಗ್ವಿಜಯ್ ದೇಸಾಯಿ
ಅಥಣಿ – ಗಜಾನನ್ ಮಂಗಸೂಳಿ/ ಶ್ರೀಕಾಂತ್ ಪೂಜಾರಿ
ಚಾಮುಂಡೇಶ್ವರಿ – ಮರಿಗೌಡ/ ಚಂದ್ರಶೇಖರ್
ಮಂಗಳೂರು ಸೌತ್ – ಐವಾನ್ ಡಿಸೋಜಾ/ ಜೆ ಆರ್ ಲೋಬೋ
ಬೆಳ್ತಂಗಡಿ- ರಕ್ಷಿತ್ / ಶಿವರಾಂ
ಬೆಂಗಳೂರು ಸೌತ್- ಆರ್ ಕೆ ರಮೇಶ್/ ಸುಷ್ಮಾ ರಾಜಗೋಪಾಲ್
ದಾಸರಹಳ್ಳಿ- ಕೃಷ್ಣಮೂರ್ತಿ/ ಸಿ.ಎಂ ಧನಂಜಯ
ಕಲಘಟಗಿ – ಸಂತೋಷ್ ಲಾಡ್/ ನಾಗರಾಜ್ ಚಬ್ಬಿ
ಸಂಧಾನ ನಡೆಸಿದರೂ ಬಂಡಾಯ ಶಮನ ಆಗದೇ ಇರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಟಿಕೆಟ್ ಸಿಗದೆ ಬೇಸರಗೊಂಡವರು ಅನೇಕರು ಚುನಾವಣೆಯಲ್ಲಿ ತಟಸ್ಥರಾಗುತ್ತಾರೆ. ಮತ್ತೂ ಕೆಲವರು ತಮ್ಮದೇ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಇನ್ನೂ ಕೆಲವರು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಎಲ್ಲ ಕಸರತ್ತು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ತಮಗೆ ಅನುಕೂಲ ಆಗಬಹುದು ಎಂದು ಬಿಜೆಪಿ ಸಹ ಕಾಯುತ್ತಿದೆ. ಹಾಗಾಗಿ ಈ ಸಂದರ್ಭವನ್ನು ಸರಿಯಾಗಿ ನಿಭಾಯಿಸಬೇಕು ಎಂದು ಕಾಂಗ್ರೆಸ್ ಗಂಭೀರವಾಗಿ ಚಿಂತನೆ ನಡೆಸಿದೆ.
ಇದನ್ನೂ ಓದಿ: R Dhruvanarayana : ಧ್ರುವನಾರಾಯಣ ಪುತ್ರ ದರ್ಶನ್‌ಗೆ ನಂಜನಗೂಡು ಕಾಂಗ್ರೆಸ್ ಟಿಕೆಟ್ ಬಹುತೇಕ ಫಿಕ್ಸ್