Site icon Vistara News

Karnataka Election 2023: ರಾಜ್ಯ ವಿಧಾನಸಭೆ ಚುನಾವಣೆ ಕಣದ ಕ್ಷಣಕ್ಷಣ ಸುದ್ದಿಗಳು: ಬೆಂಗಳೂರಿನಲ್ಲಿ ಮೋದಿ ಅಬ್ಬರದ ರೋಡ್‌ ಶೋ ಅಂತ್ಯ, ರಾಜಭವನದಲ್ಲಿ ವಾಸ್ತವ್ಯ

Karnataka Election 2023 Live updates Check details In Kannada

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಸೇರಿದಂತೆ ಹಲವು ಸ್ಟಾರ್‌ ಪ್ರಚಾರಕರು ಆಗಮಿಸಿ ಅಭ್ಯರ್ಥಿಗಳ ಪರ ಪ್ರಚಾರದ ಅಲೆ ಎಬ್ಬಿಸುತ್ತಿದ್ದಾರೆ. ಇಂದು ಮೋದಿಯವರ ಹಲವು ಕಾರ್ಯಕ್ರಮಗಳು ಮತದಾರರನ್ನು ಸೆಳೆಯಲಿವೆ.

B Somashekhar

ನರೇಂದ್ರ ಮೋದಿ ರೋಡ್‌ ಶೋ ಅಂತ್ಯ

5.3 ಕಿ.ಮೀ. ರೋಡ್‌ ಶೋಗೆ ಅಪಾರ ಜನಬೆಂಬಲ

ರೋಡ್‌ ಶೋ ಮುಗಿದ ಬಳಿಕ ರಾಜಭವನದತ್ತ ತೆರಳಿದ ಮೋದಿ

B Somashekhar

ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ

ಮೋದಿಗೆ ಡಿ.ವಿ.ಸದಾನಂದಗೌಡ, ಛಲವಾದಿ ನಾರಾಯಣಸ್ವಾಮಿ ಸಾಥ್‌

ಮೋದಿ ರೋಡ್‌ ಶೋನಲ್ಲಿ 9 ವಿಧಾನಸಭೆ ಕ್ಷೇತ್ರಗಳ ಜನ ಭಾಗಿ

ರಾಜಧಾನಿಯ ಮೂರು ಕ್ಷೇತ್ರಗಳಲ್ಲಿ ಮೋದಿ ಸಂಚಾರ

ನೈಸ್‌ರೋಡ್‌ ಜಂಕ್ಷನ್‌ನಿಂದ ಆರಂಭವಾಗಿರುವ ರೋಡ್‌ ಶೋ

Ramaswamy Hulakodu

ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಶುರು

ಪ್ರಧಾನಿ ಮೋದಿ ಅವರ ರೋಡ್‌ ಶೋ ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾಗಿದೆ.

ಮಾಗಡಿ ರೋಡ್‌ ನೈಸ್‌ ರೋಡ್‌ ಜಂಕ್ಷಂನ್‌ನಿಂದ ಪ್ರಧಾನಿ ರೋಡ್‌ ಶೋ ಆರಂಭಿಸಿದ್ದಾರೆ.

ಕಲಾತಂಡಗಳು ರೋಡ್‌ ಶೋನಲ್ಲಿ ಭಾಗವಹಿಸಿವೆ.

Ramaswamy Hulakodu

ಸುತ್ತೂರು ಮಠಕ್ಕೆ ರಾಜನಾಥ್ ಸಿಂಗ್ ಭೇಟಿ

ಮೈಸೂರಿನ ಸುತ್ತೂರು ಮಠಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ.

ಪೂರ್ಣಕುಂಭ ಸ್ವಾಗತ ನೀಡಲಾಗಿದೆ.

Ramaswamy Hulakodu

ಬಿಜೆಪಿ ಸಮಾವೇಶನದಲ್ಲಿ ಮೋದಿ ಭಾಗಿ

ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ನಡೆಯುತ್ತಿರುವ ಬಿಜೆಪಿಯ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ.

ಮಾಜಿ ಕೇಂದ್ರ ಸಚಿವ ಯತ್ನಾಳ್‌ ಭಾಷಣ ಮಾಡುತ್ತಿದ್ದಾರೆ.

Exit mobile version