Site icon Vistara News

Karnataka Election 2023: ಚುನಾವಣಾ ಅಂತಿಮ ಕಣದಲ್ಲಿ 2613 ಉಮೇದುವಾರರು! 517 ಮಂದಿ ನಾಮಪತ್ರ ವಾಪಸ್‌

voting machine

ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಸ್ಪರ್ಧಿಸಲು ಸಲ್ಲಿಕೆಯಾಗಿದ್ದ ಒಟ್ಟು 5101 ನಾಮಪತ್ರಗಳ ಪೈಕಿ 517 ಮಂದಿ ನಾಮಪತ್ರ ಹಿಂಪಡೆದಿದ್ದು, 1971 ನಾಮಪತ್ರಗಳು ತಿರಸ್ಕೃತವಾಗಿವೆ. ಹೀಗಾಗಿ ಅಂತಿಮ ಕಣದಲ್ಲಿ ಒಟ್ಟು 2613 ಅಭ್ಯರ್ಥಿಗಳು ಇದ್ದಾರೆ.

ನಾಮಪತ್ರ ವಾಪಸ್‌ ಪಡೆಯಲು ಸೋಮವಾರ (ಏ.24) ಕಡೆಯ ದಿನವಾಗಿತ್ತು. ಹೀಗಾಗಿ 517 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಚುನಾವಣೆಯ ಅಂತಿಮ ಕಣದಲ್ಲಿ 2613 ಅಭ್ಯರ್ಥಿಗಳ ಪೈಕಿ 2427 ಪುರುಷರು, 184 ಮಹಿಳೆಯರು ಹಾಗೂ ಇಬ್ಬರು ಇತರೆ ಅಭ್ಯರ್ಥಿಗಳಿದ್ದಾರೆ. ಒಟ್ಟು 2613 ಅಭ್ಯರ್ಥಿಗಳಲ್ಲಿ ಬಿಜೆಪಿ 224, ಕಾಂಗ್ರೆಸ್‌ 223, ಎಎಪಿ 209, ಬಿಎಸ್‌ಪಿ 133, ಸಿಪಿಐಎಂ 4, ಜೆಡಿಎಸ್‌ 207, ಜೆಡಿಯು 8, ಎನ್‌ಪಿಪಿ 2, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳು 685, ಪಕ್ಷೇತರರು 918 ಸ್ಪರ್ಧಿಸುತ್ತಿದ್ದಾರೆ.

Karnataka election 2023: 16 ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್‌ ಯುನಿಟ್‌ ಬಳಕೆ

ರಾಜ್ಯದ 16 ಕ್ಷೇತ್ರಗಳಲ್ಲಿ ಪ್ರತಿ ಬೂತ್‌ನಲ್ಲಿ ಎರಡು ಬ್ಯಾಲೆಟ್‌ ಯುನಿಟ್‌ಗಳನ್ನು ಬಳಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ರಾಜಾಜಿನಗರ, ಹೊಸಕೋಟೆ, ಯಲಹಂಕ, ಬ್ಯಾಟರಾಯನಪುರ, ಬಳ್ಳಾರಿ ನಗರ, ಹನೂರು, ಗೌರಿಬಿದನೂರು, ಚಿಕ್ಕಮಗಳೂರು, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಕೋಲಾರ, ಗಂಗಾವತಿ, ಶ್ರೀರಂಗ ಪಟ್ಟಣ, ಕೃಷ್ಣರಾಜ, ನರಸಿಂಹರಾಜ, ರಾಯಚೂರು ಕ್ಷೇತ್ರದಲ್ಲಿ ಎರಡು ಬ್ಯಾಲೆಟ್‌ ಯುನಿಟ್‌ಗಳನ್ನು ಚುನಾವಣೆಗೆ ಬಳಸಲಾಗುತ್ತದೆ.

ಇದನ್ನೂ ಓದಿ | Karnataka election 2023: ಚುನಾವಣಾ ಕಣದಿಂದ ಹಿಂದೆ ಸರಿದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಆಪ್ ಅಭ್ಯರ್ಥಿ

ಒಂದು ಬ್ಯಾಲೆಟ್‌ನಲ್ಲಿ 15 ಅಭ್ಯರ್ಥಿಗಳು ಹಾಗೂ 1 ನೋಟಾ ಬಟನ್‌ ಸೇರಿ 16 ಅಭ್ಯರ್ಥಿಗಳ ಹೆಸರು ಮಾತ್ರ ದಾಖಲಿಸಲು ಮಾತ್ರ ಅವಕಾಶವಿರುತ್ತದೆ. ಹೀಗಾಗಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವ ಕ್ಷೇತ್ರಗಳಲ್ಲಿ ಪ್ರತಿ ಬೂತ್‌ನಲ್ಲಿ ಎರಡು ಬ್ಯಾಲೆಟ್‌ಗಳನ್ನು ಚುನಾವಣಾ ಆಯೋಗ ಬಳಸುತ್ತದೆ.

Exit mobile version