ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ರಾಜ್ಯದಲ್ಲಿ ಎಲೆಕ್ಷನ್‌ಗೂ ಮೊದಲೇ ವಯೋವೃದ್ಧರು, ವಿಕಲಚೇತನರು ತಮ್ಮ ಹಕ್ಕು ಚಲಾಯಿಸಿಬಿಟ್ಟಿದ್ದಾರೆ. ಚುನಾವಣಾ ಆಯೋಗ ಮೊದಲ ಬಾರಿಗೆ ಪ್ರಯೋಗ ಮಾಡಿದ್ದ ಬ್ಯಾಲೆಟ್ ಪೇಪರ್ ಮತದಾನಕ್ಕೆ (ballet paper voting) ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಮೂಲಕ ಹಿರಿಯ ನಾಗರಿಕರು, ಅಂಗವಿಕಲರು ಇತರ ಮತದಾರರಿಗೆ ಮಾದರಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಪ್ರಯೋಗಿಸಿದ್ದ ಬ್ಯಾಲೆಟ್ ವೋಟಿಂಗ್ ಅವಕಾಶ ನಿನ್ನೆಗೆ ಮುಗಿದಿದೆ. ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಮತದಾನ ಹೆಚ್ಚಿಸಲು ಮಾಡಿದ್ದ ಈ ಪ್ಲಾನ್ ಪ್ರಥಮ ಪ್ರಯೋಗದಲ್ಲೇ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಶೇ.91ರಷ್ಟು ಮತದಾನವಾಗಿದೆ. ರಾಜಧಾನಿ ಬೆಂಗಳೂರಲ್ಲಿ ಸುಮಾರು ಶೇಕಡ.90ರಷ್ಟು ಮತದಾನ ದಾಖಲಾಗಿದೆ.
ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಮನೆಯಿಂದಲೇ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಅಧಿಕಾರಿಗಳು ಅವರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ, ಮತ ಚಲಾಯಿಸುವ ಅವಕಾಶ ನೀಡಿದ್ದರು. ಏ.29ರಿಂದ ಆರಂಭವಾಗಿದ್ದ ಈ ಪ್ರಕ್ರಿಯೆ ನಿನ್ನೆ ಮುಕ್ತಾಯವಾಗಿದೆ. ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದ 9152 ಮತದಾರರಲ್ಲಿ 8412 ಜನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ.
ಮನೆಯಲ್ಲೇ ಕುಳಿತು ಮತದಾನ ಮಾಡುವ ಮೂಲಕ ಹಿರಿಯ ನಾಗರಿಕರು ಜವಾಬ್ದಾರಿ ಮೆರೆದಿದ್ದಾರೆ. ಮೇ 13ಕ್ಕೆ ಹಿರಿಯ ನಾಗರೀಕರ ಆಶೀರ್ವಾದ ಯಾರ ಮೇಲಿದೆ ಎಂಬುದು ತಿಳಿಯಲಿದೆ.
ಇದನ್ನೂ ಓದಿ: Karnataka Election 2023: ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಬಾಕಿ, ರಾಜಧಾನಿಯಲ್ಲಿ ಇಂದು ನಮೋ, ರಾಹುಲ್, ಪ್ರಿಯಾಂಕ