ಬೆಂಗಳೂರು: ಚಿಕ್ಕಪೇಟೆ (Chickpet) ವಿಧಾನಸಭಾ ಕ್ಷೇತ್ರದಲ್ಲಿ (Karnataka Election 2023) ಬಿಜೆಪಿ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು (KGF babu) ಹಾಗೂ ಉದಯ್ ಗರುಡಾಚಾರ್ (Uday Garudachar) ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಸಿಸಿಟಿವಿ ದೃಶ್ಯವೊಂದನ್ನು ಬಿಡುಗಡೆ ಮಾಡಿ ಆರೋಪಿಸಿದ್ದಾರೆ.
ಕೆಜಿಎಫ್ ಬಾಬು ಅವರನ್ನು ಪಾರ್ಟಿಗೆ ಕರೆದು ಚಿಕನ್ ಲೆಗ್ ಪೀಸ್ ಕೊಡಿಸಿ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಕಿಡಿಕಾರಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಇಬ್ಬರು ಅಭ್ಯರ್ಥಿಗಳು ಗೌಪ್ಯ ಸಭೆ ಮಾಡುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನೆ ಮಾಡಿದರು. ಚುನಾವಣಾ ಆಯೋಗವು ಈ ಇಬ್ಬರು ಅಭ್ಯರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.
ಕಾಂಗ್ರೆಸ್‌ನಿಂದ ಔಟ್, ಬಿಜೆಪಿಗೆ ಇನ್?
ಕೆಜಿಎಫ್ ಬಾಬು ಈ ಹಿಂದೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೌಡಿ, ಜಾತಿ ಆಧಾರಿತವಾಗಿ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ಗೆ 80 ಸ್ಥಾನ ಕೂಡ ಸಿಗುವುದಿಲ್ಲ. ಕಾಂಗ್ರೆಸ್‌ನಿಂದ ನನ್ನನ್ನು ತೆಗೆದರೆ ಪಕ್ಷಕ್ಕೆ 10 ರಿಂದ 15 ಸೀಟ್ ಕೈ ತಪ್ಪುತ್ತದೆ. ಸಲೀಂ ಅಹ್ಮದ್‌ರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು. ಸಲೀಂ ಅಹ್ಮದ್ ನಮ್ಮ ಮುಸ್ಲಿಂ ಅಲ್ಲ. ಅವಮಾನ ಮಾಡಿ ಪಕ್ಷದಿಂದ ನನ್ನನ್ನು ಪಕ್ಷದಿಂದ ತೆಗೆದರೆ ಕಾಂಗ್ರೆಸ್‌ಗೆ 10 ಸೀಟ್ ನಷ್ಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.
ಕೆಪಿಸಿಸಿ ಕಚೇರಿಯಲ್ಲೇ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಶಿಸ್ತು ಸಮಿತಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದರೂ, ಕೆಜಿಎಫ್ ಬಾಬು ಸಮಂಜಸ ಉತ್ತರ ನೀಡಿಲ್ಲ. ಹೀಗಾಗಿ ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಕೆಜಿಎಫ್ ಬಾಬು (KGF Babu) ಅವರನ್ನು ಅಮಾನತು ಮಾಡಿ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ: Hosakote News: ಹೂಳು ತುಂಬಿದ್ದ ಕಲ್ಯಾಣಿಗೆ ಬಿದ್ದು ಬಾಲಕಿ ದಾರುಣ ಸಾವು; 6 ವರ್ಷದ ಬಾಲಕ ಪಾರು
ಸದ್ಯ, ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಕೆಜಿಎಫ್ ಬಾಬು, ಚಿಕ್ಕಪೇಟೆಯಲ್ಲಿ ಬಿಜೆಪಿಯ ಉದಯ್ ಗರುಡಾಚಾರ್‌ಗೆ ಬೆಂಬಲ ನೀಡಲು ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.