Site icon Vistara News

Karnataka Election 2023: ಗೋವಾದಿಂದ ಅಕ್ರಮ ಮದ್ಯ ಸಾಗಾಟಕ್ಕೆ ಯತ್ನ; ಮಾಲು ಸಮೇತ ಆರೋಪಿಯ ಬಂಧನ

Illicit liquor seized in goa

#image_title

ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಹಾಗೂ ಸಾಗಾಟಕ್ಕೆ ಬಳಸಲಾದ ವಾಹನವನ್ನು ಅನಮೋಡ್ ಅಬಕಾರಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಚೆಕಪೋಸ್ಟ್ ಬಳಿ ಬೆಳಗಾವಿ ಮೂಲದ ಚಾಲಕ ಸಂತೋಷ ರಾಯಪ್ಪ ಚೌಗುಲೆ ಎಂಬಾತ ಅಕ್ರಮ ಮದ್ಯ ಸಾಗಿಸುತ್ತಿದ್ದ. ಚೆಕ್‌ಪೋಸ್ಟ್‌ ಬಳಿ ಟಾಟಾ ಕಂಪೆನಿಯ ವಾಹನ ಸಂಖ್ಯೆ KA22 B0738 ತಡೆದು ಪರಿಶೀಲನೆ ನಡೆಸಿದಾಗ, 70.560 ಲೀಟರ್‌ನ ವಿವಿಧ ರೀತಿಯ ಗೋವಾ ಮದ್ಯ ಪತ್ತೆಯಾಗಿದೆ. ವಾಹನ ಸೇರಿ ಒಟ್ಟು ಅಂದಾಜು 8,03,536 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Road Accident: ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ; ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲೀಕನನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಕಾರ್ಯಾಚರಣೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಜಗದೀಶ್ ಎನ್.ಕೆ. ಹಾಗೂ ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅನಮೋಡ್ ಅಬಕಾರಿ ಪಿ.ಎಸ್.ಐ ಶ್ರೀಕಾಂತ್ ಬಿ ಅಸೋದೆ, ಸಿಬ್ಬಂದಿಗಳಾದ ರಾಜು ಭಟ್ಕಲ್, ಯು.ಎನ್. ತುಳಸಿ ಹಾಗೂ ರಾಮನಗರ ಪೊಲೀಸ್‌ ಸಿಬ್ಬಂದಿ, ಎಸ್.ಎಸ್.ಟಿ ತಂಡದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Exit mobile version